ಪುಟ:ತಿಲೋತ್ತಮೆ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ತಿಲೋತ್ತಮೆ. ವರು ಪ್ರಾಣರಕ್ಷಣಕ್ಕಾಗಿ ದಾರಿಸಿಕ್ಕತ್ತ ಓಡಹತ್ತಿದರು. ಮಹಾಸಿಂಹನು ತಮ್ಮ ರಿಸಿದನು. ಆತನೂ ರಣ ಕ್ಷೇತ್ರದಲ್ಲಿ ಬೆನ್ನು ತೋರಿಸಬೇಕಾಯಿತು. ಅತ್ರ ವಿಜಯಮದದಿಂದ ಉನ್ಮತ್ತರಾದ ಪಠಾಣರು ಕ್ರಮಕ್ರಮವಾಗಿ ಒಡಿಸಾಡ್ರಾಂತ ವನ್ನು ಕೈವಶಮಾಡಿಕೊಂಡರು. ಆದರೆ ಇಷ್ಟರಿಂದ ವಿಜಯಮದದಿಂದ ಉನ್ಮತ್ತನಾದ ಉಸ್ಮಾನಖಾನನು ತೃಪ್ತನಾಗಲಿಲ್ಲ. ಆತನು ತನ್ನ ಸೈನ್ಯದ ಮೋರೆಯನ್ನು ಬಂಗಾಲಪ್ರಾಂತದ ಕಡೆಗೆ ತಿರುಗಿಸಿದನು. ಅದನ್ನು ತರ ಬುವದಕ್ಕಾಗಿ ಮಹಾಸಿಂಹನು ವಿಶ್ವ ಪ್ರಯತ್ನ ಮಾಡಿದನು. ಆದರೆ ಅದರಿಂದ ಪ್ರಯೋಜನವೇನು ಆಗಲಿಲ್ಲ. ಕಡೆಗೆ ಸ್ವತಃ ಜಗಕ್ಸಿಂಗನು ರಣಕ್ಷೇತ್ರಕೆ ಬರುವ ಪ್ರಸಂಗವು ಬಂದಿತು. ಅಷ್ಟರಲ್ಲಿ ಪಠಾಣರು ಅರ್ಧಕ್ಕಿಂತ ಹೆಚ್ಚು ಬಂಗಾಲಪ್ರಾಂತವನ್ನು ಕೈವಶಮಾಡಿಕೊಂಡಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಮೇದೀನೀ ಪುರ, ಮಲ್ಲಭೂಮಿ, ಕಾರ್ಲಹಾವ, ವೀರಭೂಮಿ, ಬಾಕುಂಡ, ಬರದ್ವಾನದ ಬಹು ದೊಡ್ಡ ಭಾಗ ಇದಿಷ್ಟನ್ನು ಪಠಾಣರು ತಮ್ಮ ಅಧಿ ಕಾರಕ್ಕೆ ಒಳಪಡಿಸಿಕೊಂಡರು. ಒಟ್ಟಿಗೆ ಯುದ್ಧದಲ್ಲಿ ಉಸ್ಮಾನಖಾನನು ಒಂದೇಸವನೆ' ಗೆಲ್ಲುತ್ತ ನಡೆದನು. ಆತನ ಶೌರ್ಯವನ್ನೂ, ಯುದ್ದ ಚಾ ತುರ್ಯವನ್ನೂ ನೋಡಿ ಮೊಗಲರು ಆಶ್ಚರ್ಯಪಟ್ಟರು. ಆತನ ಬಾಹುಗ ಇಲ್ಲಿಯ ಅಮಾನುಷಶಕ್ತಿ, ಹೃದಯದೊಳಗಿನ ನೆಲೆಯಿಲ್ಲದ ಉತ್ಸಾಹ ಇವನ್ನು ನೋಡಿ ಈತನು ಹೀಗೆಯೇ ಜಯಶೀಲನಾಗುತ್ತಾ ಮೊಗಲರನ್ನು ಮತ್ತೆ ಮೀರಿ ನಿಲ್ಲುವನೆಂದು ಜನರು ಅನ್ನ ಹತ್ತಿದರು. ಒಡಿಸಾಮ್ರಾಂತವಂತೂ ಮೊದಲೇ ಆತನ ಕೈಸೇರಿತ್ತು; ಸ್ವಲ್ಪ ದಿವಸಗಳಲ್ಲಿ ಆತನು ಬಂಗಾಲ ಬಿಹಾರ ಪ್ರಾಂತಗಳನ್ನು ಸ್ವಾಧೀನಪಡಿಸಿಕೊಳ್ಳುವಂತೆ ತೋರಿತು. ನೋಡುವವರು, ಪುನಃ ಉಸ್ಮಾನನ ಶೌರ್ಯಸಂಜೀವನವಾಯಿತೆಂದು ಭಾವಿಸಿದರು.