ಪುಟ:ತಿಲೋತ್ತಮೆ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ನೆಯ ಪ್ರಕರಣ- ಪ್ರೇಮಾಂಧತೆ ಉಸ್ಮಾನನ ಈ ಜಯದವಾರ್ತೆಯನ್ನು ಕೇಳಿ ಆಯೇಷೆಗೆ ಪರಮಾನಂದ ವಾಯಿತು, ಆಕೆಯು ಕೈಯಲ್ಲಿ ಶಸ್ತ್ರಗಳನ್ನು ಧರಿಸಿ, ಮಹಿಷಾಸುರ ಮರ್ದಿನಿ ಯಂತೆ ಸ್ವತಃ ಯುದ್ದ ಮಾಡದಿದ್ದರೂ, ಯುದ್ಧದ ಚಾಲಕಳು ಆ ಕಿಯೇ ಆಗಿ ದಳು. ಹಲವು ಯುದ್ಧಗಳಲ್ಲಿ ಆಕೆಯು ತನ್ನ ಪರಿವಾರದೊಡನೆ ಉಸ್ಮಾನ ನನ್ನು ಹಿಂಬಾಲಿಸಿ ಎಷ್ಟೋ ಸಾರೆ ಹೋಗಿದ್ದಳು. ಉಸ್ಮಾನನು ದಾರುಣ ವಾದ ಯುದ್ಧದಲ್ಲಿ ಜರ್ಝರನಾಗಿ ಬಂದಾಗ ಆಯೇಷೆಯೇ ಆತನನ್ನು ಉತ್ಸಾಹಗೊಳಿಸಿ ಯುದ್ಧಕ್ಕೆ ಕಳಿಸುತ್ತಿದ್ದಳು. ಆಕೆಯು ತನ್ನ ಬುದ್ದಿ ಚಾತುರ್ಯ ದಿಂದ ಪ್ರಸಂಗಕ್ಕನುಸರಿಸಿ ಉಸ್ಮಾನನಿಗೆ ತೋರಿಸಿದ ಮಾರ್ಗವೇ ಆತನ ವಿಜಯಸಂಪಾದನೆಗೆ ಕಾರಣವಾಯಿತು. ಆಯೇಷೆಯು ಬೆ: ನೆಯಿಂದ ಎದ್ದ ಬಳಿಕ ಒಂದುದಿನ ಉಸ್ಮಾನನೊಡನೆ ಆಕೆಯು ಮಾತಾಡುವಾಗ ಯುದ್ಧದಲ್ಲಿ ಯ ಜಯದ ಸಂಬಂಧದಿಂದ ಉಸ್ಮಾನನು ಆಕೆಯ ಮುಂದೆ ಆಡಿದ್ದೆಲ್ಲ ಈಗ ನಿಜವಾದಂತೆ ಆಗಿತ್ತು, ಉಸ್ಮಾನನ ಅಬ್ಬರಕ್ಕೆ ಮೊಗಲರು ತತ್ತರಿಸಿದರು. ಜಗ೦ಗನು ಸ್ವತಃ ರಣಾಂಗಣಕ್ಕೆ ಬಂದಿದ್ದರೂ, ಉಸ್ಮಾನನನ್ನು ಸೋಲಿಸಲಿಕ್ಕೆ ಸಮರ್ಥನಾಗಲಿಲ್ಲ. ಆತನು ಖಾನನಿಗೆ ಎದುರಾಗಿ ನಿಂತು ಯುದ್ಧ ಮಾಡದೆ, ಮರೆಮೋಸದ 'ರೀತಿಯಿಂದ ಯುದ್ಧ ಮಾಡುತ್ತಲಿದ್ದನು. ಉಸ್ಮಾನನು ವರ್ಧಮಾನವನ್ನು ಗೆಲ್ಲುವದಕ್ಕಾಗಿ ಬಹಳ ಆತುರಪಡುತ್ತಿದ್ದನು. ಯಾಕಂದರೆ, ವರ್ಧಮಾನ ನನ್ನೊಂದು ಗೆದ್ದುಬಿಟ್ಟರೆ ಬಂಗಾಲದಲ್ಲಿ ಆತನ ಅಧಿಕಾರವು ಸ್ಥಿರವಾದಂತಾ ಗುತ್ತಿತ್ತು. ಈ ಉದ್ದೇಶದಿಂದ ಆತನು ಮಂದಾರಣಗಡಕ್ಕೆ ದಡನ್ನು ಕಳಿ ಸಿದನು. ಯಾಕಂದರೆ ಮಂದಾರಣಗಡವನ್ನು ಸ್ವಾಧೀನಪಡಿಸಿಕೊಂಡ ಅಲ್ಲಿ ಮದ್ದುಗುಂಡಿನ ಸಂಚಯವಾಡಿಟ್ಟುಕೊಂಡುಬಿಟ್ಟರೆ, ವರ್ಧಮಾನ ವನ್ನು ಸ್ವಾಧೀನಪಡಿಸಿಕೊಳ್ಳಲಿಕ್ಕೆ ಸುಲಭವಾಗುತ್ತಿತ್ತು. ಇದಲ್ಲದೆ ಮಂದಾ ರಣಗಡವು ಜಗತ್ಸಂಗನ ಮಾವನ ಮನೆಯಾದ್ದರಿಂದ ಅಲ್ಲಿಗೆ ಜಗಕ್ಸಿಂಗನು