ಪುಟ:ತಿಲೋತ್ತಮೆ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ತಿಲೋತ್ತಮೆ. ಹೊಗಬರುವ ಸಂಭವವು ವಿಶೇಷವಾಗಿತ್ತು, ಈ ಪ್ರಸಂಗದಲ್ಲಿ ಅಕಸ್ಮಾತ್‌ ಜಗಕ್ಸಿಂಗನನ್ನು ಸೆರೆಹಿಡಿದರೆ ದೊಡ್ಡ ಕೆಲಸವಾಗುವದೆಂತಲೂ ಉಸ್ಮಾನನು ಆಲೋಚಿಸಿದನು. ಇದೇ ಉದ್ದೇಶದಿಂದ ಖಾನನು ತನ್ನ ಶೂರರಾದ ಪಠಾಣ ದಂಡಾಳುಗಳಿಗೆ ಅಲ್ಲಲ್ಲಿ ಗುಪ್ತವಾಗಿ ಕಾದು ಇದು, ಪ್ರಸಂಗ ಒದಗಿದ ಕೂಡಲೆ ಜಗತ್ತಿ೦ಗನನ್ನು ಸೆರೆಹಿಡಿಯಬೇಕೆಂದು ಆಜ್ಞಾಪಿಸಿದ್ದನು. ಸೆರೆಹಿಡಿಯು ವದು ಸಾಧಿಸದ ಪಕ್ಷದಲ್ಲಿ ಅವನನ್ನು ಕೊಲ್ಲಬೇಕೆಂದು ತನ್ನ ದಂಡಾಳುಗ ಳಿಗೆ ಆತನ ಅಪ್ರಣೆಯಾಗಿತ್ತು. ತನ್ನ ದಂಡಾಳುಗಳು ಮೋಸದಿಂದ ಜಗ ೬ಂಗನನ್ನು ಯಾವರೀತಿಯಿಂದಾದರೂ ಗೊತ್ತಿಗೆಹಚ್ಚಿದರೆಂದರೆ, ತಾನು ಮಂದಾರಣಗಡವನ್ನು ಮುತ್ತಿ, ಅದನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಉಸ್ಮಾನನು ಆಲೋಚಿಸಿದ್ದನು. ಉಸ್ಮಾನನ ಅಪ್ಪಣೆಯಂತೆ ದಂಡಾಳುಗಳು ಮಂದಾರಣಗಡದ ಸುತ್ತ ಮುತ್ತಲಿನ ಅಡವಿಯಲ್ಲಿ ಅಡಗಿಕೊಂಡು ಕುಳಿತು, ಜಗತ್ನಿಂಗನ ಹಾದಿಯನ್ನು ನೋಡಿದರು, ಆದರೆ ಎಷ್ಟು ದಿನಗಳಾದರೂ ಅವರಿಗೆ ಜಗತ್ಸ೦ಗನ ಸುಳುವು. ಹತ್ತಲಿಲ್ಲ. ಜಗತ್ತಿ೦ಗನಾದರೂ ಉಸ್ಮಾನನ ದಂಡಿಗೆ ಎದುರಾಗಿ ನಿಂತು, ಯುದ್ಧ ಮಾಡುವದನ್ನು ಬಿಟ್ಟು ಬಿಟ್ಟು ಮರೆಮೋಸದ ಯುದ್ದದಿಂದಲೇ ಉಸ್ಮಾನನನ್ನು ಹಣ್ಣಿಗೆ ತರಬೇಕೆಂದು ಯೋಚಿಸಿ, ತನ್ನ ಶೂರ ಸೈನಿಕರೊ. ಡನೆ ಗುಪ್ತ ರೀತಿಯಿಂದ ಸಂಚರಿಸುತ್ತಿದ್ದನು. ಈ ರೀತಿಯಾಗಿ ಅವನು ಸ್ವಲ ದಂಡನ್ನು ತಕ್ಕೊಂಡು ಹೊರಟು ಒಡಿಸಾದ ಕಡೆಗೆ ಸಾಗಿದ್ದನು. ಹೀಗೆ ಇಬ್ಬರೂ ತರುಣ ವೀರರು ಒಬ್ಬರನ್ನೊಬ್ಬರು ಬಲೆಯಲ್ಲಿ ಹಿಡಿಯಬೇಕೆಂದು ಹೊಂಚುಹಾಕಿ ಸಂಗಡ ತಮ್ಮ ದಂಡಾಳುಗಳನ್ನು ಕಟ್ಟಿಕೊಂಡು ಸಂಚರಿಸು; ಆದ್ದರು. ಜಗಕ್ಸಿಂಗನು ಹೀಗೆ ಸಂಚರಿಸುತ್ತ ಸುವರ್ಣರೇಖಾನದಿಯ ತೀರ ವನ್ನು ಮುಟ್ಟಿದಾಗ ಸಮೀಪದಲ್ಲಿಯೇ ಉಸ್ಮಾನನ ದಂಡಿನಬೀಡು ಬಿಟ್ಟಿ ರುವದೆಂಬ ಸುದ್ದಿ ಯು ಆತನಿಗೆ ಹತ್ತಿತು. ಪಠಾಣ ಒಡೆಯನಮೇಲೆ ಬೀಳ ಲಿಕ್ಕೆ ಇದು ತಕ್ಕ ಸಮಯವಾಗಿತ್ತು. ಯಾಕಂದರೆ, ಉಸ್ಮಾನನ ಬಳಿಯಲ್ಲಿ. ದಂಡಾಳುಗಳು ಬಹು ಸ್ವಲ್ಪ ಜನರಿದ್ದರು. ಈ ಸಂಧಿಯನ್ನು ಸಾಧಿಸಿ ಜಗ ಶೃಂಗನು ಪಠಾಣರಮೇಲೆ ಬಿದ್ದನು. ಹೀಗೆ ಅಕಸ್ಮಾತ್ತಾಗಿ ಜಗತ್ತಿಂಗನು ತನ್ನ ಮೇಲೆ ಬಿದ್ದದ್ದನ್ನು ನೋಡಿ