ಪುಟ:ತಿಲೋತ್ತಮೆ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಾಂಧತೆ ತಾಂಧತೆ. ೧೭೩ ಉಸ್ಮಾನನು ಚಿಂತೆಗೊಳಗಾದನು, ತನ್ನ ಸ್ವಲ್ಪ ದಂಡು ಜಗಂಗನ ದೊಡ್ಡ ದಂಡಿಗೆ ಈಡಾಗಲಿಕ್ಕಿಲ್ಲೆಂದು ಆತನು ತಿಳಿದನು.. ಸುಮ್ಮನೆ ಸೈನ್ಯದ ಸಂಹಾ ರಮಾಡಿಸುವದಕ್ಕಿಂತ, ತಾನೊಬ್ಬನೇ ಜಗತ್ತಿಂಗನೊಡನೆ ದ್ವಂದ್ವ ಯುದ್ಧ ಮಾಡುವದು ನೆಟ್ಟಗೆಂದು ಆತನು ನಿಶ್ಚಯಿಸಿ, ಒಬ್ಬ ದೂತನನ್ನು ಜಗತ್ಸಂಗನ ಬಳಿಗೆ ಕಳಿಸಿದನು. ದೂತನು ಒಡೆಯನ ಅಪ್ಪಣೆಯಂತೆ ಜಗಂಗನ ಬಳಿಗೆ ಬಂದು-ಮಹಾರಾಜ, ನನ್ನನ್ನು ನಬಾಬಸಾಹೇಬರು ತಮ್ಮ ಬಳಿಗೆ ಕಳಿಸಿ ದ್ದಾರೆ, ಸುಮ್ಮನೆ ಸೈನ್ಯದ ಸಂಹಾರ ಮಾಡುವದಕ್ಕಿಂತ ಉಭಯತರು ದ್ವಂದ್ವ ಯುದ್ಧಮಾಡುವದು ನೆಟ್ಟಗೆಂದು ವಿಜ್ಞಾಪಿಸಲು ನನಗೆ ಹೇಳಿರುವರು. ಇಬ್ಬರ ಯುದ್ಧದ ಕಡೆಯ ಪರಿಣಾಮವೇ ಮೊಗಲ- ಪಠಾಣರ ಯುದ್ಧದ ಕಡೆಯ ಪರಿಣಾಮವೆಂದು ತಿಳಿಯತಕ್ಕದ್ದು, ಇದಕ್ಕೆ ತಾವು ಒಪ್ಪಿಕೊಳ್ಳು ತಿದ್ದರೆ, ನಬಾಬಸಾಹೇಬರೂ ಒಪ್ಪಿಕೊಳ್ಳುವರು ಎಂದು ಹೇಳಲು, ಜಗ ಶೃಂಗನು ತನ್ನ ಸೈನ್ಯಕ್ಕೆ ಯುದ್ಧವನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿ, ದೂತ ನಿಗೆ--ಯಾಕಾಗಲೊಲ್ಲದು, ದ್ವಂದ್ವ ಯುದ್ದಕ್ಕೆ ನನ್ನ ಒಪ್ಪಿಗೆಯಿರುತ್ತದೆ. ನಬಾಬಸಾಹೇಬರ ಇಚ್ಛೆಯನ್ನು ಪೂರ್ಣಮಾಡಲು ನಾನು ಸಿದ್ಧನಿರುತ್ತೇನೆ. ಈ ಸಂಗತಿಯನ್ನು ಅವರಿಗೆ ತಿಳಿಸು ಎಂದು ಹೇಳಿದನು. ದೂತನು ನಮ ಸ್ಮರಿಸಿ ನಬಾಬಸಾಹೇಬರ ಬಳಿಗೆಬಂದು, ಜಗತ್ತಿ೦ಗರು ದ್ವಂದ್ವ ಯುದ್ಧಕ್ಕೆ ಸಿದ್ದರಿರುವರೆಂದು ತಿಳಿಸಿದನು. ಕೂಡಲೆ ಖಾನನು ಶಸ್ತ್ರಾಸ್ತ್ರಗಳಿಂದ ಸಜ್ಜನಾಗಿ ಡೇರೆಯಿಂದ ಹೊರಬಿದ್ದನು. ಆತನು ಯುದ್ದ ಭೂಮಿಗೆ ಬರಲು, ಅಲ್ಲಿ ಜಗ೦ಗನು ಕುದುರೆಯನ್ನು ಹತ್ತಿಕೊಂಡು ಸಿದ್ದನಾಗಿ ನಿಂತಿದ್ದನು. ಆತ ನಿಗೆ ಉಸ್ಮಾನಖಾನನು ಕಾಲನಡಿಗೆಯಿಂದಲೇ ಎದುರಾದನು. ಆದರೆ ಅಶ್ವಾ ರೂಢನು ಪಾದಚಾರಿಯೊಡನೆ ಯುದ್ಧ ಮಾಡುವದು ನ್ಯಾಯವಲ್ಲವೆಂದು ತಿಳಿದು, ಜಗಂಗನು ಕುದುರೆಯಿಂದಿಳಿದು ತಾನೂ ಪಾದಚಾರಿಯಾಗಿಯೇ ಯುದ್ಧಕ್ಕೆ ನಿಂತನು ಹೀಗೆ ಇಬ್ಬರೂ ತೀರ ಸನಿಯಕ್ಕೆ ಬಂದು ಎದುರಾಗಿ ಯುದ್ಧಕ್ಕೆ ನಿಂತರು. ಆಗ ಜಗಕ್ಸಿಂಗನು ಉಸ್ಮಾನಖಾನನನ್ನು ಕುರಿತು, ಜಗಕ್ಸಿಂಗ-ಹಿಂದಕ್ಕೊಮ್ಮೆ ನಿಮ್ಮೊಡನೆ ದ್ವಂದ್ವ ಯುದ್ಧ ಮಾಡುವ ಪ್ರಸಂಗವು ಬಂದಿತ್ತು; ಈಗ ಮತ್ತೊಮ್ಮೆ ಆ ಪ್ರಸಂಗವು ಒದಗಿಬಂದಿರು ವದು; ಆದರೆ ಈ ಸಾರೆಯ ಯುದ್ದ ಪ್ರಸಂಗವು ಕಡೆಯದೆಂದು ನಾನು ತಿಳಿಯು