ಪುಟ:ತಿಲೋತ್ತಮೆ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ತಿಲೋತ್ತಮೆ. ತೇನೆ. ಈವೊತ್ತಿನ ಯುದ್ಧದಲ್ಲಿ ಇಬ್ಬರೊಳಗೊಬ್ಬರು ಗೊತ್ತಿಗೆಹತ್ರ ಲಿಕ್ಕೇ ಬೇಕು. ಉಸ್ಮಾನ-ನಿಮ್ಮ ಮಾತು ಯೋಗ್ಯವೇ ಸರಿ. ಹಿಂದಕ್ಕೆ ಯುದ್ಧ ಪ್ರಸಂಗ ಒದಗಿದಾಗ ನಿಮ್ಮನ್ನು ನಾನು ಶತ್ರುವೆಂದು ತಿಳಿಯುತ್ತಿದ್ದೆ ನು; ಆದರೆ ಆಯೇಷೆಯು ಕೇವಲ ನನ್ನ ಪ್ರೇಮಕ್ಕೆ ಪಾತ್ರಳಾಗಿರುವಾಗ ನೀವು ಆಕೆಯ ಸಂಬಂಧಿಕರಾಗಿರಲು, ನಿಮಗೆ ಕೇಡುಬಗೆಯುವ ಇಚ್ಛೆಯು ಈಗ ನನಗಿರುವ ದಿಲ್ಲ. ಆಯೇಷೆಯ ಮನಸ್ಸನ್ನು ನೋಯಿಸುವದೆಂದರೆ, ನನಗೆ ಜೀವದ ಸುತ್ತು ಬರುತ್ತದೆ. ಆದರೂ ಯುದ್ದ ಪ್ರಸಂಗವೇ ಒದಗಿರುವದರಿಂದ, ಒಣ ಮೋಹವನ್ನು ಕಟ್ಟಿಕೊಂಡಾದರೂ ಮಾಡುವದೇನು? ಈ ಜಗಕ್ಸಿಂಗ-ನಬಾಬಸಾಹೇಬ, ಆಯೇಷೆಯಂಥ ಸುಗುಣಸುಂದರಿ ಯನ್ನು ಮನ್ನಿಸದವರು ಈ ಜಗತ್ತಿನಲ್ಲಿ ವಿರಲವೆಂದು ಹೇಳಬಹುದು. ಅದರಲ್ಲಿ ಆಕೆಯು ನನಗಂತೂ ಕೇವಲ ಸನ್ಮಾನನೀಯಳು, ನನ್ನ ಉತ್ಕರ್ಷಕ್ಕೆ ಆಕೆಯೇ ಕಾರಣಳಾಗಿರುವಳು, ನಿಮ್ಮನ್ನು ಆಯೇಷೆಯು ಪ್ರಿಯಬಂಧು ವೆಂದು ಪ್ರೀತಿಸುತ್ತಿರುವದರಿಂದ ನಿಮಗಾದರೂ ನಾನು ಹೇಗೆ ಕೇಡು ಬಗೆಯ ಬೇಕು? ನಿಮ್ಮ ಕೇಡಿನಿಂದ ಆಯೇಷೆಯ ಮನಸ್ಸು ನೋಯಲಿಕ್ಕಿಲ್ಲವೆ? ಆ ದೇವಿಯ ಮನಸ್ಸನ್ನು ನೋಯಿಸುವದೆಂದರೆ, ನನಗೂ ಜೀವದಸುತ್ತು ಬಂದ ಹಾಗಾಗಿರುತ್ತದೆ. ಉಸ್ಮಾನ-ಮಹಾರಾಜರು ಹೇಳುವದು ಸುಳ್ಳಲ್ಲ. ನಮ್ಮಿಬ್ಬರ ನಾಶ ವಾದರೂ ಆಯೇಷೆಗೆ ದುಃಖವಾಗುತ್ತದೆ, ಆದರೆ ಕಾತ್ರವೃತ್ತಿಗೆ ಈ ಮೋಹವು ಕೆಲಸದ್ದಲ್ಲ. ಯುದ್ಧಕ್ಕೆ ಸನ್ನದ್ದರಾದಬಳಿಕ ಶೂರರಿಗೆ ಯಾತರ ಹಂಗು? ನಿಮ್ಮೊಡನೆ ಯುದ್ದ ಪ್ರಸಂಗವೇ ಒದಗಿರುವದರಿಂದ, ನನ್ನ ಪ್ರತಿಜ್ಞೆಯಂತೆ ಇಂದು ನಾನು ನಿಮ್ಮನ್ನು ಕೊಲ್ಲತಕ್ಕವನೇ ಸರಿ. - ಜಗಕ್ಸಿಂಗ-ನಿಮ್ಮ ಮಾತು ಬಹಳ ಯೋಗ್ಯವಾದದ್ದು, ಶೂರರಿಗೆ ಒಪ್ಪುವಂತೆ ನೀವು ಮಾತಾಡಿದಿರಿ, ಯುದ್ದದಲ್ಲಿ ಸೋಲುಗೆಲವುಗಳು ಯಾರ ಕೈಯೊಳಗಿನವೂ ಅಲ್ಲ. ಆದರೂ, ಆಯೇಷೆಯ ಮೇಲಿನ ಪೂಜ್ಯ ಬುದ್ದಿಯಿಂದ ನಾನು ಸ್ಪಷ್ಟವಾಗಿ ಹೇಳುತ್ತೇನೆ, ಯುದ್ಧ ಮಾಡುವ ಶಕ್ತಿಯಿಲ್ಲದೆ ನೀವು ನೆಲಕ್ಕೆ ಬಿದ್ದ ಪಕ್ಷದಲ್ಲಿ, ನಾನು ನಿಮ್ಮನ್ನು ತಡವುವದಿಲ್ಲ; ಎಂಥ ಯುದ್ಧದ