ಪುಟ:ತಿಲೋತ್ತಮೆ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಮಾಂಧತೆ. ೧೭೫ ಆವೇಶದಲ್ಲಿಯಾದರೂ ಈ ಮಾತನ್ನು ನೆನಪಿನಲ್ಲಿಡುವೆನು, ನಿಮ್ಮನ್ನು ನಾನು ನೆಲಕ್ಕೆ ಕೆಡವಿ ಹಣ್ಣು ಮಾಡಬಹುದಲ್ಲದೆ ಕೊಲ್ಲಲಿಕ್ಕಿಲ್ಲ. ಕ್ಷತ್ರಿಯ ನಾದ ನಾನು ಈ ಮಾತನ್ನು ಎಂದಿಗೂ ಮರೆಯಲಾರೆನು. ಆಗಲಿ, ಇನು ತಡವೇಕೆ? ನಮ್ಮಿಬ್ಬರ ಸಮರಪಾಂಡಿತ್ಯವನ್ನು ಈ ಉಭಯ ಪಕ್ಷದ ಸೈನಿಕರು ನೋಡಲಿ. ಈ ಮೇರೆಗೆ ಜಗತ್ತಿಂಗನು ನುಡಿದನಂತರ ಅವರಿಬ್ಬರು ವೀರರು ಪರ ಸ್ಪರ ಯುದ್ಧ ಮಾಡತೊಡಗಿದರು. ಆ ಇಬ್ಬರು ವೀರರ ಯುದ್ಧ ನೈಪುಣ್ಯವನ್ನೂ ಶಸ್ತ್ರ ಪ್ರಯೋಗ ಕೌಶಲ್ಯವನ್ನೂ, ಸಮರಚಾಪಲ್ಯವನ್ನೂ ನೋಡಿ, ಎಲ್ಲರೂ ಸ್ವಂಭಿತರಾದರು. ಒಮ್ಮಿಂದೊಮ್ಮೆ ಜಗಂಗನ ಖಡ್ಡದ ಹೊಡೆತದಿಂದ ಉಸ್ಮಾನನ ಖಡ್ಡವು ಎರಡು ತುಂಡಾಯಿತು. ಕೂಡಲೆ ಖಾನನು ಖಡ್ಡ ವನ್ನು ಚಲ್ಲಿ ಕೊಟ್ಟು ಬರ್ಚಿಯನ್ನು ತಕ್ಕೊಂಡು ಕುಮಾರನಮೇಲೆ ಏರಿ ಹೋದನು. ಆಗ ಕುಮಾರನೂ ಖಡ್ಗವನ್ನು ಚಲ್ಲಿಕೊಟ್ಟು ಬರ್ಚಿ ಯನ್ನು ತಕ್ಕೊಂಡು ಖಾನನನ್ನು ತಡೆದನು. ಉಸ್ತಾನನು ಎಸೆದ ಬರ್ಚಿಯು ಕುಮಾರನ ಹೆಗಲಿಗೆ ತರೆದು ದೂರ ಹೋಗಿ ಬಿದ್ದಿ ತು. ಖಾನನು ವಿದ್ಯುದ್ವೇಗದಿಂದ ಓಡಿಹೋಗಿ, ತನ್ನ ಬರ್ಚಿಯನ್ನು ತಕ್ಕೊಂಡು ಬಂದನು. ಅಷ್ಟರಲ್ಲಿ ಕುಮಾರನು ತನ್ನ ಬರ್ಚಿಯನ್ನು ಖಾನನಿಗೆ ಗುರಿ ನೋಡಿ ಎಸೆದನು. ಅದು ಖಾನನ ತಲೆಗೆ ಬಡಿದು, ತುರಾಯಿಯಿಂದ ಸಹಿ ತವಾದ ಖಾನನ ಮಂದಿಲವು ಹಾರಿಹೋಯಿತು. ಆದರೆ ತಲೆಗೆ ವಿಶೇಷ ಗಾಯವಾಗಲಿಲ್ಲ. ಅಷ್ಟರಲ್ಲಿ ಜಗತ್ಸಂಗನಾದರೂ ಅಪೂರ್ವವಾದ ದಕ್ಷತೆ ಯಿಂದ ತನ್ನ ಬರ್ಚಿಯನ್ನು ತಕ್ಕೊಂಡು ಬಂದನು. ಅಷ್ಟರಲ್ಲಿ ಖಾನನು ಬರ್ಚಿಯನ್ನು ಕುಮಾರನಮೇಲೆ ಎಸೆಯಲು, ಅದು ಕುಮಾರನ ಢಾಲಿಗೆ ಅಪ್ಪಳಿಸಿತು. ಆಗ ಕುಮಾರನು ಆ ಬರ್ಚಿಯನ್ನು ತಕ್ಕೊಳ್ಳಲಿಕ್ಕೆ ಖಾನ ನಿಗೆ ಆಸ್ಪದಕೊಡಲಿಲ್ಲ. ತಾನೇ ಹೋಗಿ ಖಾನನ ಬರ್ಚಿಯನ್ನು ತಕ್ಕೊಂಡು ಗುರಿನೋಡಿ ಅದನ್ನು ಖಾನನ ತಲೆಗೆ ಕಸುವಿನಿಂದ ಎಸೆದನು. ಖಾನನು ಮೃತನಾದನೆಂದು ಎಲ್ಲರೂ ನಿಶ್ಚಯಿಸಿದರು. ಆತನ ದಂಡಿನಲ್ಲಿ ಹಾಹಾಕಾರವು ಉತ್ಪನ್ನವಾಯಿತು, ಜಗತ್ಸಂಗನು ತಾನು ತಪ್ಪಿದೆನೆಂದು ಪಶ್ಚಾತ್ತಾಪ