ಪುಟ:ತಿಲೋತ್ತಮೆ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ತಿಲೋತ್ತಮೆ. ಪಟ್ಟನು. ಅಷ್ಟರಲ್ಲಿ ಒಬ್ಬ ಸುಂದರಿ ಯು, ಖಾನನ ಎದೆಗೆ ಬಡಿಯುತ್ತಿದ್ದ ಬರ್ಚಿಗೆ ಅಕಸ್ಮಾತ್ ಅಡ್ಡಾಗಿ ತನ್ನ ಎದೆಯನ್ನು ಕೊಟ್ಟಳು. ಕೂಡಲೆ ಉಭಯ ದಂಡಿನಲ್ಲಿ ಹಾಹಾಕಾರವು ಉತ್ಪನ್ನವಾಯಿತು, ಜಗತ್ತಿಂಗನು « ಎಲ ಎಲಾ!” ಎಂದು, ತನ್ನ ಎರಡೂ ಕೈಗಳನ್ನು ಮೇಲಕ್ಕೆ ನೆಗವಿ ಮೈಮ ರೆತು ನಿಂತುಕೊಂಡನು. ಆದರೆ ಕೈಮೀರಿ ಹೋದ ಬರ್ಚಿಯು ನಡುವೆ ನಿಲ್ಲದೆ ನಿಮಿಷಮಾತದಲ್ಲಿ ಆ ಸುಂದರಿಯ ಎದೆಯಲ್ಲಿ ಸಂಪೂರ್ಣವಾಗಿ ಸೇರಿತು. ಆಗ ಆ ಸುಂದರಿಯ ಕೋಮಲಾಂಗವು ಆಶ್ರಯದಪ್ಪಿದ ಲತೆಯಂತೆ ಉಸ್ಮಾ ನನ ಮೈ ಮೇಲೆ ಬಿದ್ದಿತು. ಕಮಲದಂತೆ ಸುಕೋಮಲವಾದ ಆ ಸುಂದರಿಯ ಹೃದಯದಲ್ಲಿ ಬರ್ಚಿಯು ಪೂರ್ಣವಾಗಿ ಸೇರಿ ರಕ್ತ ಪ್ರವಾಹವು ಹರಿಯಹತ್ತಿತು, ಅದರಿಂದ ಆ ಸುಂದ ರಿಯ ಸೀರೆಯ ಸೆರಗು ತೊಯ್ತು, ಉಸ್ಮಾನನ ಮೈಮೇಲಿನ ವಸ್ತ್ರಗಳೂ ತೊಯ್ದ ವು. ಆಗ ಆ ಸುಂದರಿಯು ಉಸ್ಮಾನನ ಮೈಮೇಲೆ ಬಿದ್ದುಕೊಂಡೇ ಆತನನ್ನು ಕುರಿತು- : ಉಸ್ಮಾನ್, ಪ್ರೀಯಬಂಧುವೇ, ನಾನು ಬದು ಕಿರುವವರೆಗೆ ನಿಮ್ಮ ಜೀವಕ್ಕೆ ಯಮಯಾತನೆಯನ್ನು ಂಟು ಮಾಡಿದೆನು. ಯಾವ ಮಾತಿನಿಂದಲೂ ನಾನು ನಿಮಗೆ ಸುಖವನ್ನುಂಟುಮಾಡಲಿಲ್ಲ! ಆದ್ದ ರಿಂದ ಈ ಅಲ್ಪವಾದ ಸಹಾಯವನ್ನು ನಿಮಗೆ ನಾನು ಮಾಡಿದ್ದೇನೆ, ನನ್ನ ದೇಹವು ನಿಮ್ಮ ಪ್ರಾಣರಕ್ಷಣದ ಕಾರ್ಯದಲ್ಲಿ ಉಪಯೋಗವಾದದ್ದನು ನೋಡಿ ನನಗೆ ಬಹಳ ಸಂತೋಷವಾಗಿರುತ್ತದೆ, ಆದರೆ ನನ್ನಿಂದ ನಿಮಗೆ ಉಂಟಾದ ತಾಪವನ್ನು ನೆನಿಸಿದರೆ ಈಗಲೂ ನನ್ನ ಹೊಟ್ಟೆಯಲ್ಲಿ ಕಸಿವಿಸಿ ಯಾಗುತ್ತದೆ. ಆ ತಾಪಜ್ವಾಲೆಯು ನನ್ನ ಸಂಗಡ ಸ್ವರ್ಗಕ್ಕಾದರೂ ಬರಬ ಹುದು; ನಾನು ಮರಣಹೊಂದಿದಬಳಿಕ ನನ್ನ ಆತ್ಮವು ಆ ತಾಪಜ್ವಾಲೆಯಿಂದ ತಳಮಳಿಸುತ್ತ ಭ್ರಮಣವನ್ನಾದರೂ ಮಾಡೀತು; ಅದರ ನೆನಪು ಮರಣಾ ನಂತರದಲ್ಲಿಯೂ ನನ್ನ ಹೃದಯವನ್ನು ಭೇದಿಸದೆ ಇರಲಿಕ್ಕಿಲ್ಲ” ಎಂದು ನುಡಿದಳು. ಆಗ ಉಸ್ಕಾನನು ದೊಡ್ಡ ದನಿಯಿಂದ ಅಳುತ್ತ - IC ಹಾಯ್ ಹಾಯ್ ಆಯೇಷೆ, ಇದೇನು ಅನರ್ಥಮಾಡಿದೆ? ” ಎಂದುಆಕೆಯನ್ನು ಎದೆ ಗವಚಿಕೊಂಡು ಆಕೆಯ ಹೃದಯದಲ್ಲಿ ನಟ್ಟಿದ್ದ ಬರ್ಚಿಯನ್ನು ಕಿತ್ತಿ ತೆಗೆದನು. ಕೂಡಲೆ ರಕ್ತವು ಬಳಬಳ ಸುರಿಯಿತು. ಇತ್ತ ಜಗತ್ಸಂಗನು ಶೋಕಾತಿಶಯ