ಪುಟ:ತಿಲೋತ್ತಮೆ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಾಂಧತೆ. ೧೭೭ ದಿಂದ ಹಣೆ ಹಣೆ ಬಡಕೊಳ್ಳುತ್ತ- (C ಹಾಯ್ ಹಾಯ್! ಜಗತ್ತಿನ ಸಾರ. ರತ್ನವೂ, ನನ್ನ ಪರಮ ಹಿತೈಷಿಣಿಯೂ ಆದ ಆಯೇಷಾದೇವಿಯು ನನ ಬರ್ಚಿಯಿಂದ ಗಾಯಹೊಂದಿ ನೆಲಕ್ಕೆ ಉರುಳಿದಳಲ್ಲ! ರಜಪೂತ ಕುಲಾಧಮ ನಾದ ನಾನು ನನ್ನ ವಚನವನ್ನು ಮರೆತು, ಉಸ್ಮಾನನ ಪ್ರಾಣಹರಣ: ಮಾಡುವಂತೆ ಬರ್ಚಿಯನ್ನು ಏಕೆ ಎಸೆದಿದ್ದೇನು? ಹಾಗೆ ಎಸೆಯದಿದ್ದರೆ, ಸ್ತ್ರೀ ಹತ್ಯದ ದೋಷವಷ್ಟೇ ಅಲ್ಲ, ಮಹಾ ಕೃತಘ್ರ ತೆಯ ದೋಷವೂ ಈಗಿ ನಂತೆ ನನ್ನ ಪಾಲಿಗೆ ಬರುತ್ತಿದ್ದಿಲ್ಲ, ಇನ್ನೇನು ಮಾಡಲಿ? ಖಾನನ ಕೈಯಿಂದ ನನ್ನ ಸಂಹಾರವಾಗಿದ್ದರೆ ಬಹಳ ನೆಟ್ಟಗಾಗುತ್ತಿತ್ತು. ಎಲೈ ನಿಷ್ಕಾಮಪ್ರೇಮದ ಅಲಭ್ಯವಾದ ರತ್ನ ವೇ, ಆಯೇಷೆ, ಏನು ನಿನ್ನ ಗತಿಯು! ನೀನು ಮಾಡಿದ ಮಹೋ ಪಕಾರಕ್ಕೆ ನಾನು ಮಾಡಿದ ಪ್ರತ್ಯುಪಕಾರವು ಇದೆಯೇ? ಎಲೈ ನೀಚನಾದ ಜಗಂಗಾ, ನಿನ್ನ ಕಠೋರ ಹೃದಯವು ಸದಾ ನಿಂದಿತ ನಾಗಲಿ ” ಎಂದು ಪಶ್ಚಾತ್ತಾಪದಿಂದ ಕುಮಾರನು ತನ್ನನ್ನು ಬಹಳವಾಗಿ ಹಳಿದುಕೊಳ್ಳಹತ್ತಿದನು. ಆಗ ಆಯೇ ಷೆಯು ಜಗ೦ಗನನ್ನು ಕುರಿತು << ಪ್ರಾಣೇಶ್ವರರಾದ ಕುಮಾರ ಜಗತ್ಸಂಗ, ನೀವು ನನ್ನ ಹತ್ತಿರಬರಬೇಕು. ಪಿ)ಯಬಂಧ ಉಸ್ಮಾನ, ದುಃಖವನ್ನು ಸಾಕುಮಾಡಿ ನನ್ನ ಕಡೆಗೆ ನೋಡಿರಿ. ನನ್ನ ಆಯುಷ್ಯವು ತೀರ ಅಲ್ಪಕಾಲ ಉಳಿದಿರುವದು, ರಾಜ ಕುಮಾರರು ಬೇಕೆಂದು ನನ್ನ ಮೇಲೆ ಬರ್ಚಿಯನ್ನು ಎಸೆದಿರುವದಿಲ್ಲಾ ದ ರಿಂದ ಅವರು ಅಪರಾಧಿಗಳಲ್ಲ, ಅದಕ್ಕಾಗಿ ಅವರು ದುಃಖಪಡುವ ಕಾರಣವಿಲ್ಲ. ಉಸ್ಮಾನ, ನೀ ವೂ ದುಃಖಿಸಬೇಡಿರಿ: ನಿಮ್ಮಂಥ ನಿಷ್ಕಾಮಪ್ರೇಮದ ಪುರು ಷರು ಜಗತ್ತಿನಲ್ಲಿ ದುರ್ಲಭವೇ ಸರಿ. ” ಈಮೇರೆಗೆ ನುಡಿದು ಆಯೇಷೆಯು ಆಯಾಸದಿಂದ ಕಣ್ಣು ಮುಚ್ಚಿ ಕೂಂಡು ಸುಮ್ಮನಾದಳು. ಕೆಲಹೊತ್ತಿನಮೇಲೆ ಆಕೆಯು ಕಣ್ಣು ತೆರೆದು ಜಗಕ್ಸಿಂಗನನ್ನು ಕುರಿತು- ರಾಜಕುಮಾರರೇ, ನಿಮ್ಮ ಮೇಲೆ ನಾನು ಪ್ರಾಣಕ್ಕಿಂತ ಹೆಚ್ಚು ಪ್ರೇಮಮಾಡುವೆನು; ನಿಮ್ಮ ಬರ್ಚಿಯಿಂದ ಉಸ್ಮಾನ ರವರ ಪ್ರಾಣ ಹರಣವಾಗಿದ್ದರೆ, ರಜಪೂತರಾದ ನಿಮ್ಮ ವಚನಕ್ಕೆ ಭಂಗಬರು ತಿತ್ತು. ನಿಮ್ಮನ್ನು ವಚನಭಂಗದೋಷಕ್ಕೆ ಗುರಿಮಾಡದಿರುವದು, ನಿಮ್ಮ ಅರ್ಧಾಂಗಿಯೆನಿಸುವ ನನ್ನ ಕರ್ತವ್ಯ ವಾದ್ದರಿಂದ ನಾನು ನಿಮ್ಮ ಬರ್ಚಿಗೆ