ಪುಟ:ತಿಲೋತ್ತಮೆ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೮ ತಿಲೋತ್ತಮೆ. ಅಡ್ಡಾಗಿ ಪ್ರಾಣಕೊಡುವೆನು, ನಿಮ್ಮ ಕೃಪೆಯಿಂದ ಬಂಧುಪಮವೂ, ಪತಿನಿಷ್ಠೆಯೂ ನನ್ನಲ್ಲಿ ವ್ಯಕ್ತವಾದದ್ದಕ್ಕಾಗಿ ನನ್ನನ್ನು ಧನ್ಯಳೆಂದು ಭಾವಿ ಸುವೆನು. ನಾನು ನಿಮ್ಮ ಮೇಲೆ ಮಾಡುತ್ತಿದ್ದ ಪ್ರೇಮಕ್ಕೆ ನಿಮ್ಮಿಂದ ಪ್ರತಿ ಫಲವು ದೊರೆಯಬೇಕೆಂದು ನಾನು ಎಂದೂ ಇಚ್ಚಿಸಿದ್ದಿಲ್ಲ. ನಬಾಬ ಉಸ್ಮಾನ ರವರ ಹೃದಯದಲ್ಲಿ ನನ್ನ ವಿಷಯದ ಪ್ರಮ ಪ್ರವಾಹವು ದಂಡೆಸ೧ಸಿ ಹರಿ ಯುತ್ತಲಿದ್ದರೂ, ನಾನು ಅತ್ತ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ; ಯಾಕಂದರೆ, ಆಯೇ ಷೆಯು ಮೋಸಗಾರಳಲ್ಲ! ನನ್ನ ಮೇಲಿನ ಪ್ರೇಮಾತಿಶಯದಿಂದ ಉಸ್ಮಾ ನರವರು ಅಧರಾದ್ದರಿಂದ ಅವರ ಆಯುಷ್ಯದ ಸುಖ ಸರ್ವಸ್ವವೂ ಹಾಳಾಗಿ ಹೋಯಿತು, ಆದರೆ ಅದಕ್ಕೆ ನನ್ನ ಯತ್ನವಿಲ್ಲ. ನನ್ನ ಹೃದಯದಲ್ಲಿ ಸ್ಥಿರವಾಗಿ ಉಳಿದಿದ್ದ ನಿಮ್ಮ ಮೂರ್ತಿಯನ್ನು ಹೊರಗೆ ಹಾಕುವದಕ್ಕೆ ಯಾರೂ ಸಮರ್ಥರಾಗಿರುವದಿಲ್ಲ, ರಾಜಪುತ್ರಾ, ನನ್ನಿಂದ ಏನಾದರೂ ಅಪರಾಧವಾಗಿ ದ್ದರೆ ಕ್ಷಮಿಸಬೇಕು. ಈ ಜನ್ಮದಲ್ಲಿ ತಿರುಗಿ ನಿಮ್ಮ ಕಣ್ಣಿಗೆ ಬಿದ್ದು, ನಿಮಗೆ ತಾಪವನುಂಟುಮಾಡಬಾರದೆಂದು ನಾನು ಮಾಡಿದ್ದೆ ನು; ಆದರೆ ನನ್ನ ಬಂಧುವಿನ ಪ್ರಾಣರಕ್ಷಣದ ಪ್ರಸಂಗವನ್ನೂ, ನಿಮ್ಮ ವಚನ ಪಾಲನದ ಪ್ರಸಂಗವನ್ನೂ ವ್ಯರ್ಥವಾಗಿ ಕಳಕೊಳ್ಳುವದು ನನ್ನಿಂದಾಗಲಿಲ್ಲ. ಆಯೇ ಷೆಯು ಒಬ್ಬ ಹತಭಾಗ್ಯಳಾದ ಸ್ತ್ರೀ ಇರುವದರಿಂದ, ಆಕೆಯ ಅಂತವು ಆದಷ್ಟು ಬೇಗನೆ ಆಗುವದು ನೆಟ್ಟಗೆ, ರಾಜಪುತ್ರಾ, ಈಮೊದಲು ಒದಗಿದ ಕಷ್ಟಮಯ ಪ್ರಸಂಗಗಳನ್ನೂ, ಆಯೇಷೆಯ ಕಷ್ಟ ಮಯ ಜೀವನ ಸ್ಥಿತಿಯನ್ನೂ ನೀವು ಮರೆತುಬಿಡಬೇಕು. ನೀವು ಆನಂದದಿಂದ ಕಾಲಹರಣ ಮಾಡಬೇಕೆಂದು ನಾನು ಇಚ್ಛಿಸುವೆನು, ನನ್ನ ಒಡಹುಟ್ಟಿದ ತಂಗಿಯಂತೆ ಇದ್ದ ತಿಲೋತ್ತಮೆಗೆ ನನ್ನ ನೆನಪು ಮಾಡಿಕೊಟ್ಟು ವ್ಯಸನಪಡಿಸಬೇಡಿರಿ, ಆಕೆಯ ಕೋಮಲ ಹೃದ ಯವು ದುಃಖವನ್ನು ಸಹಿಸಲಾರದು, ಮಹಾರಾಜ, ಇನ್ನು ನನಗೆ ಅಪ್ಪಣೆ ಕೊಡಿರಿ, ಪ್ರಾಣೇಶ್ವರರಾದ ನಿಮ್ಮ ಕೈಯಿಂದ ಮರಣವು ಒದಗಿದ್ದರಿಂದ ನನ್ನನ್ನು ಧನ್ಯಳೆಂದು ತಿಳಿಯುವೆನು. ಜಗತ್ಸಂಗನು ಮೊರೆತಗ್ಗಿಸಿ ಸಣ್ಣ ಹುಡುಗನಂತೆ ದೊಡ್ಡ ದನಿತೆಗೆದು ಅಳಹತ್ತಿದನು. ಆಯೇಷೆಯ ಬಾಯಿಂದ ರಕ್ತವು ಬೀಳಹತ್ತಿತು. ಆಕೆಯ ಗಂಟಲು ಗೊರಗುಟ್ಟಿ ಹತ್ತಿತು. ಆಕೆಯು ಬಹು ಕಷ್ಟದಿಂದ ಉಸ್ಮಾನನನ್ನು