ಪುಟ:ತಿಲೋತ್ತಮೆ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಾಂಧತೆ. Cଅଦ ಕುರಿತು-ಅಣ್ಣಾ, ಈಗ ನಿಮ್ಮ ಮೋರೆಯು ನನಗೆ ಅಸ್ಪಷ್ಟವಾಗಿ ಕಾಣುತ್ತಿ ರುವದು, ಇನ್ನು ನಾನು ಬಹಳ ಹೊತ್ತು ಬದುಕಲಾರೆನು. ಇರುವತನಕ ನಿಮಗೆ ನಾನು ಬಹಳ ಕಷ್ಟ ಕೊಟ್ಟೆನಲ್ಲದೆ, ಸಾಯುವಾಗೂ ನಿಮಗೆ ದುಃಖ ವನ್ನುಂಟುಮಾಡಿದೆನು, ಪ್ರಿಯಬಂಧ ಉಳಸಾನ, ನನ್ನ ಈ ಮರಣಕಾಲ ದಲ್ಲಿ ನನ್ನ ಯಾವತ್ತು ಅಪರಾಧಗಳನ್ನು ನೀವು ಹೊಟ್ಟೆಯಲ್ಲಿ ಹಾಕಿಕೊಳ್ಳ ಬೇಕೆಂದು ಸೆರಗೊಡ್ಡಿ ಬೇಡಿಕೊಳ್ಳುವೆನು. ಇದೇ ನನ್ನ ಕಟ್ಟ ಕಡೆಯ ಪ್ರಾರ್ಥ ನೆಯು, ಮತ್ತೇನು-ಮತ್ತೆನು ನಿಮಗೆ ಹೇಳಿಕೊಳ್ಳಲಿ? ಇನ್ನು ನನಗೆ ಅಪ್ಪಣೆಕೊಡಿರೆಂದರಾಯಿತು. ನೋಡಿರಿ, ನಾನು ಹೊರಟೆನು. ಈಮೇರೆಗೆ ನುಡಿಯುತ್ತಿರಲು, ಆಯೇಷೆಯ ಕಣ್ಣುಗಳು ತಿರುಗಿದವು. ಉಸ್ಮಾನನ ೩ ತಿಯು ವಿಲಕ್ಷಣವಾಯಿತು. ಆತನ ಕಂಣೀರು ಇಂಗಿದವು, ಆತನ ಮುಖದಿಂದ ಶಗಳು ಹೊರಡದಾದವು, ಆತನ ಎದೆಯು ಮಂದ ವಾಗಿ ಹಾರಹತ್ತಿತು. ಯುದ್ಧವೇಷದಿಂದ ಒಪ್ಪುವ ಆ ವೀರಪುರುಷನು, ಅತ್ತಿತ ಉಲುಕದೆ ಸ್ಥಿರವಾಗಿ ಕುಳಿತುಕೊಂಡಿದ್ದನು. ಆತನ ತೊಡೆಯ ಮೇಲೆ ರಕ್ತದಿಂದ ಸ್ನಾನಮಾಡಿದ, ಹಾಗು ಮೃತ್ಯುವಿನ ದ್ವಾರದಲ್ಲಿ ಕಾಲಿ ಔದ್ದ ಭುವನಸುಂದರಿಯಾದ ಆಯೆಸೆಯು ಮಲಗಿಕೊಂಡಿದ್ದಳು. ಆಗ ಜಗ ತ್ರಿ೦ಗನು ಲೋಕಕಂಪಿತ ಸ್ವರದಿಂದ ಉಸ್ಮಾನನನ್ನು ಕುರಿತು~ II ಖಾನ ಸಾಹೇಬ, ನಬಾಬಜಾದಿ ಆಯೇಷೆಯು ನಿಮ್ಮ ಅಪ್ಪಣೆಯನ್ನು ಕೇಳಿಕೊಳ್ಳು. ತಾಳೆ. ” ಎಂದು ಹೇಳಿದನು. ಅದನ್ನು ಕೇಳಿ ಎಚ್ಚತ್ರ ಉಸಾನನು-- C ಏನು? ಆಯೇಷೆಯು ನನ್ನ ಅಪ್ಪಣೆಯನ್ನು ಕೇಳಿಕೊಳ್ಳುವಳೆ? ಆಯೇಷೆ, ನೀನು ನನ್ನನ್ನು ಅಗಲಿ ಹೋಗುವೆಯಾ? ನಿನಗೆ ನಾನು ಹೇಗೆ. ಅಪ್ಪಣೆಕೊಡಲಿ? ಆಯೇಷಾ, ನೀನು ನನ್ನ ಮುಂದೆ ಹೋಗುವೆಯೇನು? ಒಳ್ಳೆದು ಹೋಗು; ಆದರೆ ನಿನ್ನ ಪ್ರಿಯ ಉಸ್ಮಾನನೂ ಬೇಗನೆ ನಿನ್ನನ್ನು ಹಿಂಬಾಲಿಸಿ ಬರುವನೆಂಬದನ್ನು ನೆನಪಿನಲ್ಲಿಡು. ” ಎಂದು ನುಡಿದನು. ಆಗ ಆಯೇಷೆಯ ಮುಖದಿಂದ ಶಬ್ದ ಗಳು ಹೊರಡದಾದವು, ಆಕೆಯ ಶ್ವಾಸೋಚ್ಛಾಸವು ತೀರ ಮಂದವಾಯಿತು; ನಾಡಿಗಳು `ಸುರಿದವು, ಆಕೆಯು ಖೇದಪರ ಸ್ವರದಿಂದ ಉಸ್ಮಾನ, ನೀವು ನನ್ನ ತಾಯಿಗೆ ಸಮಾಧಾನ ಹೇಳಿರಿ, ಅಹಾಹಾ! ಉಸ್ಮಾನ, ನೀವು ನನ್ನ ಮೇಲೆ