ಪುಟ:ತಿಲೋತ್ತಮೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܘ ತಿಲೋತ್ತಮೆ. ತಿಲೋತ್ತಮೆಯು ಸಂಪೂರ್ಣವಾಗಿ ಆಕರ್ಷಿಸಿಕೊಂಡದ್ದರಿಂದ, ಇನ್ನು ಒಂದು ತಿಂಗಳ ಮೇಲೆ ಆಕೆಯ ಪಾಣಿಗ್ರಹಣ ಮಾಡುವದು ಅವಶ್ಯವಾಗಿ ರಲುತಾನು ಈ ಯುದ್ಧದ ಗೊಂದಲದಲ್ಲಿ ಸೇರುವದು ಯೋಗ್ಯವಲ್ಲೆಂದು ತಿಳಿದು, ಮೊದಮೊದಲು ಆತನು ಸುಮ್ಮನಿದ್ದನು; ಆದರೆ ದರ್ಬಾರದೊಳ ಗಿನ ಅಂದಿನ ಉಜ್ವಲಪ್ರಸಂಗವನ್ನು ನೋಡಿ, ಅವನ ಸ್ವಾಭಾವಿಕವಾದ ಕ್ಷಾತ್ರತೇಜವು ಪ್ರಕಟವಾದದ್ದರಿಂದ, ವೀರಾವೇಶದಲ್ಲಿ ಆತನು ತಿಲೋ ಮೆಯನ್ನು ಮರೆತು ಸಭೆಯಲ್ಲಿ ಎದ್ದುನಿಂತು-ಮಹಾರಾಜ, ನಾನು ಐದು ಸಾವಿರ ರಜಪೂತ ಸೈನ್ಯದೊಡನೆ ಹೊಗಿ, ಪಠಾಣರನ್ನು ಸುವರ್ಣರೇ ಖಾನದಿಯ ಆಚೆಯಕಡೆಗೆ ಅಟ್ಟಿ ಬರುವೆನು, ಎಂದು ಪ್ರತಿಜ್ಞಾಪೂರ್ವ ಕವಾಗಿ ನುಡಿದು ಸಭಾತಾಂಬೂಲವನ್ನು ಸ್ವೀಕರಿಸಿದನು. ನೀರೋ ಚಿತ ವಾದ ಮಗನ ಈ ಕೃತಿಯನ್ನು ನೋಡಿ ಮಾನಸಿಂಗನಿಗೆ ಬಹಳ ಸಂ ತೋಷವಾಯಿತು. ಆಗ ಜಗತ್ತಿಂಗನು ತಂದೆಯ ಅಪ್ಪಣೆಯನ್ನು ಪಡೆಯು ವದಕ್ಕಾಗಿ ಆತನ ಚರಣಕ್ಕೆರಗಿರಲು, ಮಾನಸಿಂಗನು ಅಭಿಮಾನದಿಂದ ವಾತ್ಸಲ್ಯ ಪೂರ್ವಕವಾಗಿ ಆತನನ್ನು ಹಿಡಿದೆತ್ತಿಉತ್ಸಾಹದಿಂದ ಆತನಿಗೆ ಅಪ್ಪಣೆಕೊಟ್ಟು ಕಳುಹಿದನು. ತಂದೆಯ ಅಪ್ಪಣೆಯಂತೆ ಜಗತ್ತಿಂಗನು ಸೈನ್ಯದೊಡನೆ ದಂಡ ಯಾತ್ರೆಗೆಹೊರಟನು. ಆತನು ಆಕಸ್ಮಿಕವಾಗಿ ಪಠಾಣರಮೇಲೆ ಬೀಳಲು, ಘೋರವಾದ ಕದನಕ್ಕೆ ಆರಂಭವಾಯಿತು, ಕಾತಲೂಖಾನನ ಪಠಾಣ ಸೈನ್ಯದವರು ರಜಪೂತರಿಗೆ ಸೊಪ್ಪುಹಾಕುವಹಾಗಿಲ್ಲ; ಆದರೆ ಅವರು ಎಚ್ಚರಗೆಟ್ಟಿರುವಾಗ ಜಗ೦ಗನು ಆಕಸ್ಮಿಕವಾಗಿ ಅವರ ಮೇಲೆ ಬಿದ್ದ ದ್ದರಿಂದ ಅವರ ಸೈನ್ಯದ ಪ್ರಾಣಹಾನಿಯು ವಿಶೇಷವಾಗಿ ಆಗಹತ್ತಿತು. ಜಗತ್ಸಂಗನ ಸೈನ್ಯವು ಸಂಖ್ಯೆಯಿಂದ ಕಡಿಮೆಯಿದ್ದರೂ, ಆರಿಸಿದ ಆತನ ಸೈನಿಕರು ಯುದ್ಧ ವ್ಯಾಪಾರದಲ್ಲಿ ಒಳಿತಾಗಿ ನುರಿತವರಾಗಿದ್ದರು. ಮೇಲಾಗಿ ಸ್ವತಃ ಜಗಂಗನು ಅಲೌಕಿಕ ವೀರರಲ್ಲಿ ಗಣಿಸಲ್ಪಡುತ್ತಿದ್ದನು. ಇಂಥ ಗುಣಪರಿಪೂರ್ಣವಾದ ರಜಪೂತ ಸೈನ್ಯಕ್ಕೆ ಬಂಡುಗಾರರಾದ ಪಠಾಣರು ಈಡಾಗಲಿಲ್ಲ. ದಿನದಿನಕ್ಕೆ ಯುದ್ದದಲ್ಲಿ ಅವರು ಹಣ್ಣಾಗಹತ್ತಿದರು. ಅವ ರಿಗೆ ನೆಲೆಯೂರಿ ನಿಲ್ಲಲಿಕ್ಕೆ ಆಸ್ಪದವು ದೊರೆಯದಾಯಿತು. ಹೀಗೆಯೇ