ಪುಟ:ತಿಲೋತ್ತಮೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಾಮೋಹ. ೧೩. ಇನ್ನು ಕೆಲವು ದಿನ ಜಗತ್ತಿಂಗನು ಎಡೆಬಿಡದೆ ಪಠಾಣರ ಬೆನ್ನು ಹತ್ತಿ ದಕಿ, ಆತನ ಪ್ರತಿಜ್ಞೆಯು ಸಹಜವಾಗಿ ನೆರವೇರುವಹಾಗಿತ್ತು. ಪಠಾಣರು ಸುವರ್ಣರೇಖಾನದಿಯ ಆಚೆಗೆ ಅಟ್ಟಲ್ಪಡುತ್ತಿದ್ದರಲ್ಲದೆ ಅವರು ಜಗ ತಿಂಗನಿಗೆ ನಿಶ್ಚಯವಾಗಿ ಶರಣುಬರುತ್ತಿದ್ದರು; ಆದರೆ ತಿಲೋತ್ತಮೆಯ ವಿವಾಹಕ್ಕಾಗಿ ಮಂದಾರಣಗಡಕ್ಕೆ ಹೋಗುವ ಕಾಲವು ಸಮೀಪಿಸಿದಂತೆ, ಜಗಂಗನ ಮನಸ್ಸು ಚಂಚಲವಾಗತೊಡಗಿತು. ಸ್ತ್ರೀ ವ್ಯಾಮೋಹವೇ. ಕಾರ್ಯಘಾತಕವು, ಅದರಲ್ಲಿ ಸಮರಭೂಮಿಯಲ್ಲಿಯಂತು ಆ ಅವಸಾನ ಘಾತಕವೃತ್ತಿಗೆ ಸರ್ವಥಾ ಆಸ್ಪದವು ದೊರೆಯತಕ್ಕದ್ದಲ್ಲ; ಆದರೆ ದುರ್ದೈ ನದಿಂದ ಜಗತ್ತಿಂಗನಂಥ ಕೆಚ್ಚೆದೆಯ ನಿಷ್ಟುರ ಪ್ರತಿಜ್ಞೆಯ ನೀರನು ಕೂಡ ತಿಲೋತ್ತಮೆಯ ವ್ಯಾಮೋಹಕ್ಕೆ ಒಳಗಾದನು. ಇದರಿಂದ ಆತನ ಸತ್ವವು ಕಡಿಮೆಯಾಗುತ್ತ ಹೋದದ್ದರಿಂದ ಪಠಾಣರಿಗೆ ಸ್ವಲ್ಪ ವಿಶ್ರಾಂತಿಯು ದೊರೆ ತಂತಾಯಿತು. ಅಷ್ಟರಲ್ಲಿ ಗೊತ್ತಾದ ದಿವಸವು ಬಂದೊದಗಲು, ಜಗತ್ನಿ ಗನು ಪ್ರಸಂಗವನ್ನು ಲಕ್ಷಿಸದೆ, »'ವಿವಾಹವಾದಕೂಡಲೆ ಬರೋಣವೆಂದು ತಿಳಿದು, ತನ್ನ ಸೈನ್ಯದಲ್ಲಿಯ ಮುಖ್ಯಸ್ಥರಿಗೆ ಯಾವದೋ ಒಂದು ನೆವ ಹೆ ತಾನು ಮಂದಾರಣಗಡದ ಕಡೆಗೆ ಸಾಗಿದನು. ಆತನ ಕುದುರೆಯು ಗಡದ ಸನಿಯಕ್ಕೆ ಹೋಗುತ್ತಿರಲು, ಪೂರ್ವ ಸಂಕೇತದಂತೆ ಸ್ವತಃ ವಿರೇಂ ಗ್ರಸಿಂಹನು ಮರ್ಯಾದೆಯಿಂದ ಬಂದು ಅಳಿಯನನ್ನು ದುರ್ಗದೊಳಗೆ ಕರೆದುಕೊಂಡು ಹೋದನು. ತನ್ನ ಈ ವಿವಾಹವು ತನ್ನ ತಂದೆಯ ಮನಸ್ಸಿಗೆ ಬರುವಹಾಗಿಲ್ಲೆಂ ಬದು ಸ್ವತಃ ಜಗತ್ತಿ೦ಗನಿಗೆ ಗೊತ್ತಿದುದರಿಂದ, ಆತನು ತನ್ನ ವಿವಾಹಕ್ಕೆ ತಂದೆಯ ಒಪ್ಪಿಗೆಯನ್ನು ಕೇಳುವಹಾಗಿಲ್ಲ. ತಂದೆಯ ಘನವಂತಿ ಗೆಯೂ, ಕುಲಾಭಿಮಾನವೂ, ಕಾರ್ಯದಕ್ಷತೆಯೂ ಜಗಂಗನಿಗೆ ಗೊತ್ತಿ ದವು: ಆದ್ದರಿಂದ ಇಂಥ ಯುದ್ಧದ ದಿವಸಗಳಲ್ಲಿ ವೀರೇಂದ್ರಸಿಂಹನಂಥ ಕ್ಷುದ್ರ ಸಂಸ್ಕಾನಿಕನ ಮಗಳನ್ನು ಲಗ್ನವಾಗುವದಕ್ಕೆ ತಂದೆಯು ಒಪ್ಪಿ ಕೊ ಳ್ಳುವದಿಲ್ಲೆಂದು ತಿಳಿದು, ಈ ವಿವಾಹವನ್ನು ಗುಪ್ತವಾಗಿಯೇ ಮಾಡಿಕೊ ಳ್ಳಬೇಕೆಂದು ಆತನು ನಿಶ್ಚಯಿಸಿದ್ದನು; ಆದರೆ ಬೆಕ್ಕು ಕಣ್ಣು ಮುಚ್ಚಿ ಹಾಲುಕುಡಿಯುವದನ್ನು ಮಂದಿಯು ನೋಡುವದಿಲ್ಲವೆ? ಅದರಂತೆ ಜಗ.