ಪುಟ:ತಿಲೋತ್ತಮೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ತಿಲೋ' ತನು. ತಿಂಗನ ಈಲಗದ ಒಳಸಂಚು ಅವನ ಸೈನ್ಯದೊಳಗಿನ ಜನರಿಗೆ ಗೊ ತಿತ್ತು, ಬಂಡುಗಾರರಾದ ಪಠ- ಣರ೦ತು ಗುಪ್ತಚಾರರ ಮುಖಾಂತರ ಈ ಲಗ್ನದ ವರ್ತಮಾನವನ್ನು ನಿಸ್ಸಂಶಯವಾಗಿ ತಿಳಿದುಕೊಂಡಿದ್ದರು. ಜಗತ್ತಿಂ ಗನು ಒಬ್ಬನೇ ಗುಪ್ತವಾಗಿ ಮಂದಾರಣಗಡಕ್ಕೆ ಹೊರಟದ್ದನ್ನು ತಿಳಿದು, ಪಠಾಣರು ತಾವು ಗುವಾಗಿ ಮಂದಾರಣಗಡಕ್ಕೆ ಮುತ್ತಿಗೆ ಹಾಕಿ ಗಡ ದೊಳಗಿನವರನ್ನೆಲ್ಲ ಸೆರೆಹಿಡಿಯಬೇಕೆಂದು ನಿಶ್ಚಯಿಸಿದ್ದರು. ಈ ಕಾರವನ್ನು ತಪ್ಪದೆ ಸಾಧಿಸಿಕೊಂಡರೆ, ಮ ನಸಿಂಗನು ಬಹುಮಟ್ಟಿಗೆ ಹಣ್ಣಿಗೆ ಬರುವ ನೆಂದು ಅವರು ನಿಶ್ಚಯಿಸಿದ್ದರು. ಈ ಕಾರ್ಯಕ್ಕೆ ಅವರು ತಮ್ಮ ಆರಿಸಿದ ಸೈನ್ಯವನ್ನು ಕಾದು ಇಟ್ಟು ಬಿಟ್ಟಿದ್ದರೆಂದು ಹೇಳಬಹುದು, ಹೀಗೆ ಮುಖ್ಯ ಸೈನ್ಯವನ್ನು ಕಾದಿಟ್ಟದ್ದರಿಂದ ಪಠಾಣರ ಸೈನ್ಯದ ಕಸುವು ಕಡಿಮೆಯಾಗಿ, ಅವರು ಯುದ್ಧದಲ್ಲಿ ಹಿಮ್ಮೆಟ್ಟಲಿಕ್ಕೆ ಬಹುಮಟ್ಟಿಗೆ ಕಾರಣವಾಗಿತ್ತು. ಪಠಾ ನರು ತಾವು ಯೋಚಿಸಿದಂತೆ ತಮ್ಮ ಸೈನ್ಯವನ್ನು ಬಹು ಗುಪ್ತ ರೀತಿಯಿಂದ ಸಾಗಿಸಿಕೊಂಡು ಬಂದು, ಲಗ್ನದ ದಿವಸ ಮಧ್ಯರಾತ್ರಿಯಲ್ಲಿ ದುರ್ಗವನ್ನು ಪ್ರವೇಶಿಸಬೇಕೆಂದು ಹೊಂಚುಹಾಕಿದ್ದರು. ತಮ್ಮ' ಈ ಗುಪ್ತ ಕಾರ್ಯಕ್ಕೆ ಅನುಕೂಲವಾಗಲಿಕ್ಕೆ ದುರ್ಗದೊಳಗಿನ ಕೆಲವು ಜನರನ್ನು ದುಡ್ಡು ಕೊಟ್ಟು ಅವರುಒಡಕೊಂಡಿದ್ದರು. ಈಸುದ್ದಿಯು ಜಗಂಗನಿಗಾಗಲಿ, ವಿರೇಂದ್ರ ಸಿಂಹನಿ ಗಾಗಲಿ ಗೊತ್ತಾಗಿದ್ದಿಲ್ಲ. ಲಗ್ನ ಸಮಾರಂಭದ ಸೌರಣೆಯಲ್ಲಿ ಎಲ್ಲರು ತೊಡ ಗಿದ್ದರು, ಆದರೆ ಈ ಪ್ರಸಂಗದಲ್ಲಿ ಅಭಿರಾಮಸ್ವಾಮಿಗಳು ದುರ್ಗ ದಲ್ಲಿ ಇಲ್ಲ ಸ್ಥರಿಂದ, ಅಗ್ನಸಮಾರಂಭದಲ್ಲಿ ವಿರಸವಾದಂತಾಗಿತ್ತು, ಅವರು ಎಲ್ಲಿರುವ ರೆಂಬದು ಯಾರಿಗೂ ಗೊತ್ತಿಲ್ಲ. - ಸಿಯಮಿಸಿದ ದಿವಸ ಜಗತ್ತಿಂಗನು ತಪ್ಪದೆ ಬಂದದ್ದರಿಂದ ಗಡದೊಳಗಿ ನವರಿಗೆ ಬಹಳ ಸಂತೋಷವಾಗಿತ್ತು, ಅವರಲ್ಲಿ ವಿಮಲಾದೇವಿಗೂ, ತಿಲೋ ತಸಿಗೂ ಸ್ವರ್ಗವು ಮೂರೇ ಗೇಣು ಉಳಿದಿತ್ತು. ತನ್ನ ಮಗಳು ಜಗತ್ಸಂಗ ನಂಥ ಘನವಂತನ ಕೈ ಹಿಡಿದದ್ದರಿಂದ, ವೀರೇಂದ್ರಸಿಂಹನು ಬಹು ಉತ್ಸಾಹ ದಿಂದ ಲಗ್ನ ಸಮಾರಂಭದ ಕಾರ್ಯದಲ್ಲಿ ತೊಡಗಿದ್ದನು, ಆದರೆ ಈ ಮಂಗಲ ಕಾರ್ಯದಲ್ಲಿ ಅಭಿರಾಮಸ್ವಾಮಿಗಳು ಇಲ್ಲದೆಯಿದ್ದದ್ದು ಆತನಿಗೆ ದುರ್ಲಕ್ಷಣ ವಾಗಿ ತೋರಿ, ಅದಕ್ಕಾಗಿ ಆತನಿಗೆ ಆಗಾಗ್ಗೆ ಅಸಮಾಧಾನವಾಗುತ್ತಿತ್ತು.