ಪುಟ:ತಿಲೋತ್ತಮೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಹಜವೇ ಮ. ೧೫ ಆದರೂ ಲಗ್ನ ಸಮಾರಂಭದ ಯಾವತ್ತು ವಿಧಿಗಳು ಯಥಾಸಾಂಗವಾಗಿ ನಡೆ ಯಹತ್ತಿದವು. ಮಂದಾರಣಗಡದ ಜನರು ಮಹೋತ್ಸವ ಮಗ್ನರಾಗಿದ್ದರು. ಅಂಗುಜೆ: «ಶುದ್ಧ ಪಂಚಮಿಯರಾತ್ರಿಯ, ಚಂದ್ರನು ಅದೇ ಮುಣುಗತೊಡ ಗಿದ್ದನು. ಅಷ್ಟರಲ್ಲಿ ಲಗ್ನ ಸಮಾರಂಭದ ಕಾರ್ಯಗಳೆಲ್ಲ ಮುಗಿದು, ಜಗ ೬ಂಗನು ಏಕಾಂತ ಗೃಹವನ್ನು ಪ್ರವೇಶಿಸಿದನು, ಅಲಂಕೃತವಾಗಿದ್ದ ಆ ಏಕಾಂತ ಗೃಹದಲ್ಲೆಲ್ಲ ಸುಗಂಧವು ಇಡಗಿತ್ತು, ದೀಪಜ್ಯೋತಿಗಳಿಂದ ಅದು ಸುಪ್ರಕಾಶಿತವಾಗಿ ಲಕಲಕಿಸುತ್ತಲಿತ್ತು. ಲೋಕಸುಂದರಿಯಾದ ತಿಲೋತ್ರ ಮೆಯು ಲಚ್ಚೆಯಿಂದ ತಲೆಬಾಗಿ ನೆಲವನ್ನು ನೋಡುತ್ತ, ಒಂದು ಮೂಲೆ ಯಲ್ಲಿ ನಿಂತಿದ್ದಳು. ಇನ್ನು ಜಗತ್ತಿಂಗನು ಆ ತರುಣಿಯನ್ನು ಪ್ರೇಮಭ ರದಿಂದ ಬಿಗಿಯಾಗಿ ಅಪ್ಪಿ ಕೊಳ್ಳ ತಕ್ಕವನು; ಅಷ್ಟರೊಳಗೆ ದುರ್ಗದಲ್ಲಿ ಕಲಕಲ ಧ್ವನಿಯುಂಟಾಗಿ, ಜನರ ಆರ್ತಧ್ವನಿಯು ಕೇಳಿಸಹತ್ತಿತು. ಪಠಾ ಣರ ದೀನ್ ದಿನ್ ಎಂಬ ಧ್ವನಿಯು ಅಂತರ್ಗೃಹದ ಸಮೀಪದಲ್ಲಿಯೇ ಆಗ ಹತ್ತಿತು. ಆಗ ತಿಲೋ° ತಮೆಯು ಭಯದಿಂದ ಜಗತ್ತಿ೦ಗನ ಕೊರಳಿಗೆ ಬಿದ್ದಳು. ಅಷ್ಟರಲ್ಲಿ ವಿಮಲಾದೇವಿಯು ಓಡುತ್ತ ಬಂದು, ಅಂತರ್ಗೃಹದ ಬಾಗಿಲಲ್ಲಿ ನಿಂತು ರೋ” ದನಮಾಡಹತ್ತಲು, ಜಗ೦ಗನು ಆಕೆಯನ್ನು ಒಳಗೆ ಕರಕೊಂಡು ಸುದ್ದಿಯೆನೆಂದು ಕೇಳಿದನು. (?ಗ ಸಿಮಲಾ ವಿಯು ಜಗತ್ತಿಂಗನನ್ನು ಕುರಿತು-ವಪ್ಪ, ಜಗತ್ವಿಂಗ್ಯ ಮಹಾತ್ಮಾ ಗ೨ ರಾಮಸ್ವಾಮಿಗಳ ಮಾತುಮೀರಿ ನಾವು ವಿವಾಹಕಾರ್ಯ ವನ್ನು ಹಮ್ಮಿ ಮಹಾಪರಾಧವಾಯಿತು. ಈ ಅನಿಷ್ಟ ಪ್ರಸಂಗವು ಒದ ಗುವದನ್ನು ತಿಳಿದೇ, ಆ ಮಹಾಪುರುಷರು ಎಲ್ಲಿಯೋ ಮಾಯವಾಗಿರು ವರು, ದುಸ್ಸ ಪತಾಣರು ಯಾವ ಮಾಯದಿಂದಲೋ ದುರ್ಗವನ್ನು ಪ್ರವೇಶಿಸಿ ನಿನ್ನ ಮಾವಂದಿರನ್ನು ಸೆರೆಹಿಡಿದರು. ಆ ಕಠಿಣಹೃದಯರಾದ ಯವನರು, ಅಗೊ' ಇತ್ತ ಕಡೆಗೇ ಬಂದರು.! ನಾವು ನಿನ್ನನ್ನು ಎಂಥ ಸಂ ಕಟಕ್ಕೆ ಗುರಿಮಾಡಿದೆವಲ್ಲ! ನಮ್ಮ ಗತಿ ಏನಾದರೂ ಆಗಲೊಲ್ಲದೇ ಕೆ; ಆದರೆ ವೀರಾಗ್ರಣಿಯಾದ ನೀನೂ, ನನ್ನ ಪಂಚಪ್ರಾಣವಾದ ತಿಲೋತ್ಯ ಮೆಯೂ ದುಷ್ಯ ಯವನರ ಕೈಸೇರುವ ಹೊತ್ತು ಬಂದಿತು! ನೀನು ಮಹಾ ಪಂಕ್ರಮಿಯೆಂಬದನ್ನು ನಾನು ಬಲ್ಲೆನಾದರೂ, ಸಹಾಯರಹಿತನಾದ