ಪುಟ:ತಿಲೋತ್ತಮೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬. ತಿಲೋತ್ತಮೆ. ನಿನ್ನೊ ಬ್ಬನ ಆಟವು ಕೂರ ಪಠಾಣರ ಹಿಂದಿನ ಮುಂದೆ ಏನು ನಡೆಯು ವದು? ಬಾಳಾ, ಜಗಂಗಾ, ನೀನು ಇನ್ನು ಹೇಗೆಮಾಡುವೆ? ಪಠಾಣರು ತೀರ ಸನಿಯಕ್ಕೆ ಬಂದರಲ್ಲ ಎಂದು ಜಗತ್ತಿಂಗನನ್ನು ವಾತ್ಸಲ್ಯದಿಂದ ಸಂತ ಯಿಸುತ್ತಿರಲು, ತಿಲೋತ್ತಮೆಯು ತನ್ನ ತಾಯಿಯನ್ನು ಅಪ್ಪಿಕೊಂಡು ರೋದೆನಮಾಡಹತ್ತಿದಳು. ತಿಲೋತ್ತಮೆಯ ಹೃದಯವು ಅತ್ಯಂತ ಕೋಮ ಲವಾದದ್ದು, ಅದು ಪತಿಯ ಅನಿಷ್ಟ ಪ್ರಸಂಗದ ಕಲ್ಪನೆಯ ಆಘಾತದಿಂದ ಬಹಳ ಗಾಸಿಯಾಗಿತ್ತೆಂದು ಹೇಳಬಹುದು. ಇತ್ತ ಧೀರನಾದ ಜಗತ್ತಿಂಗನು ತನ್ನ ಕೊರಳಿಗೆ ಬಿದ್ದಿರುವ ಸ್ತ್ರೀಯರನ್ನು ಸಂರಕ್ಷಿಸುವದಕ್ಕಾಗಿ ಪಠಾಣರೊ ಡನೆ ಕಾದಲಿಕ್ಕೆ ತಟ್ಟನೆ ಎದುರಾದನು. ತನ್ನ ನೂತನ ಪತಿಯು ಅಸಹಾ ಯಶೂರನಾಗಿ ಪಠಾಣರೊಡನೆ ಹಿಂಜರಿಯದೆ ಕಾದುವ ಪರಿಯನ್ನು ನೋಡಿ, ತಿಲೋತ್ತಮೆಯಂಥ ಕೋಮಲಹೃದಯದ ಸುಂದರಿಯಲ್ಲಿಯೂ ವೀರಾವೇ ಶವು ಉತ್ಪನ್ನವಾಗಿ, ಆಕೆಯು ಶಸ್ತ್ರರಹಿತಳಾಗಿದ್ದರೂ ಸತಿಯ ಸಹಾಯ ಕ್ಕಾಗಿ ಮುಂದುವರಿದಳು; ಆದರೆ ಜಗತ್ತಿ೦ಗನಿಗೆ ಆಕಸ್ಮಾತ್‌ ದೊಡ್ಡ ಗಾಯ ವಾಗಿ ಆತನು ಮೂರ್ಛಿತನಾಗಿ ನೆಲಕ್ಕೆ ಬೀಳಲು, ತಿಲೋತ್ತಮೆಯೂ ಅವ ನೊಡನೆ ಮೈಮರೆತು ನೆಲಕ್ಕುರುಳಿದಳು. ಹೀಗೆ, ತನಗೆ ಆಶ್ರಯಭೂತವಾಗಿ ರುವ ವೃಕ್ಷದೊಡನೆ ಮಲ್ಲಿಗೆಯ ಬಳ್ಳಿಯೂ ನೆಲಕ್ಕುರುಳುವಂತೆ, ತನ್ನ ನೂತನ ಪತಿಯೊಡನೆ ನೆಲಕ್ಕುರುಳಿದ ತಿಲೋತ್ತಮೆಯನ್ನು ನೋಡಿ, ವಿಮಲಾದೇವಿಯು ದುಃಖಿತಳಾದಳು. ಆಕೆಯು ಶೋಕಾತಿಶಯದಿಂದ ದಿಕ್ಕು ಗೆಟ್ಟು ಮುಂದುಗಾಣದೆ ನಿಂತುಕೊಂಡಿರಲು, ಪಠಾಣರು ಆ ಮೂವರನ್ನು ಸೆರೆಹಿಡಿದರು, ಅಂದಿನ ಒಂದು ದಿನದ ರಾತ್ರಿಯಲ್ಲಿ ಮಂದಾರಣಗಡವು ಪಠಾಣರ ಹಾವಳಿಯಿಂದ ಶೂನ್ಯಪ್ರಾಯವಾಯಿತು. - ಮುಂದೆ ಬಹಳಹೊತ್ತಿನಮೇಲೆ ಜಗಂಗನು ಎಚ್ಚತ್ತು ನೋಡಲು, ತಾನು ಯಾವದೋ ಒಂದು ಶಾಂತವಾದ ಗೃಹದಲ್ಲಿ ಮಂಚದಮೇಲೆ ಮಲಗಿ ರುವಂತೆ ಆತನಿಗೆ ತೋರಿತು. ಕನಸಿನಿಂದ ಎಚ್ಚತ್ತವನಂತೆ ಆ ತರು ಣನಪೂರ್ಣ ಸ್ಮತಿಯನ್ನು ಪಡೆದಾಗ, ತಾನು ಯುದ್ಧದಲ್ಲಿ ಗಾಯಪಟ್ಟು ಮೂರ್ಛಿತನಾದದ್ದು ನೆನಪಾಗಿ, ತನ್ನ ಬಳಿಯಲ್ಲಿ ತಿಲೋತ್ತಮೆಯೂ ವಿಮಲಾದೇವಿಯೂ ಇಲ್ಲದಿರುವದನ್ನು ನೋಡಿ ಬಹಳವಾಗಿ ನೊಂದು