ಪುಟ:ತಿಲೋತ್ತಮೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಹಜಪ್ರೇಮ. ಕೊಂಡನು. ಅವರಿಬ್ಬರು ಯವನರ ಕೈಸೇರಿದರೆಂದು ನೆನಿಸಿ ಆತನು ಬಹಳ (ಸಮಾಧಾನಪಟ್ಟನು. ತನ್ನ ಪಂಚಪ್ರಾಣವಾಗಿದ್ದ ತಿಲೋತ್ತಮೆಯು ಪಠಾಣರ ದುರ್ವತ್ರನಕ್ಕೆ ಗುರಿಯಾದಳಲ್ಲ, ಎಂದು ಆತನು ತಳಮಳಿಸಿ ದನು, ಅಭಿರಾಮಸ್ವಾಮಿಗಳ ಮಾತನ್ನು ಮೀರಿ, ತನ್ನ ತಂದೆಯ, ಒಪ್ಪಿ ಗೆಯನ್ನು ಪಡೆಯದೆ ತಿಲೋತ್ತಮೆಯ ಲಗ್ನ ಮಾಡಿಕೊಳ್ಳಲಿಕ್ಕೆ ಯತ್ನಿ ಸಿದ್ದು, ಅನರ್ಥಕ್ಕೆ ಕಾರಣವಾಯಿತೆಂದು ಪಶ್ಚಾತ್ತಾಪಪಟ್ಟನು. ಆತನು ತನ್ನ ಸುತ್ತುಮುತ್ತು ಲಕ್ಷಪೂರ್ವಕವಾಗಿ ನೋಡಲು, ಒಬ್ಬ ದಾಸಿಯು ಬೀಸಣಿ ಕೆಯಿಂದ ತನಗೆ ಗಾಳಿಯನ್ನು ಹಾಕುತ್ತಿದ್ದು, ಇನ್ನೊಬ್ಬ ದಾಸಿಯು ಆಜ್ಞಾ ಧಾರಕವೃತ್ತಿಯಿಂದ ಸುಮ್ಮನೆ ನಿಂತುಕೊಂಡಿದ್ದಳು. ಇವರಲ್ಲದೆ ಮತ್ತೊಬ್ಬ ಲೋಕೋತ್ತರ ಸುಂದರಿಯು ತನ್ನ ಗಾಯಗಳಿಗೆ ಕೈಮುಟ್ಟಿ ಮುಲಾಮು ಹಚ್ಚುತ್ತಿದ್ದಳು, ಕೆಲವಂಶದಿಂದ ತಿಲೋತ್ತಮೆಯರೂಪವನ್ನು ಕೂಡ ಹೀಯಾ ಳಿಸುವಂಥ ಆಕೆಯ ಸುಂದರ ರೂಪವನ್ನು ನೋಡಿ, ಈ ಪುಣವಂತಳು ಯಾವಳಿರಬಹುದೆಂದು ಜಗತ್ತಿಗನು ಆಲೋಚಿಸತೊಡಗಿದನು. ಯಃಕ ಶಿತ ಸ್ತ್ರೀಯಲ್ಲೆಂಬದು ಆ ಪ್ರಮದೆಯ ಮುಖಚರ್ಯದಿಂದ ಒಡೆದು ಕಾಣಿಸುತ್ತಿತ್ತು, ಮೇಲಾಗಿ ಆ ಸುಂದರಿಯು ಮುಸಲ್ಮಾನಳೆಂಬದೂ' ಆಕೆಯ ಉಡಿಗೆ-ತೊಡಿಗೆ ಮೊದಲಾದವುಗಳ ಮೇಲಿಂದ ಜಗಂಗನಿಗೆ ಗೊತ್ತಾಯಿತು. ತಾನು ಎಂದೂ ನೋಡದೆಯಿದ್ದ, ಹಾಗು ತನ್ನ ಜಾತಿ ಯವಳಲ್ಲದ, ವಿಶೇಷವಾಗಿ ತನ್ನ ಜಾತಿಯವರನ್ನು ಕಾಫರರೆಂದು ತಿರಸ್ಕ ರಿಸುವ ಮುಸಲ್ಮಾನಜಾತಿಯ ದೊಡ್ಡ ಮನೆತನದ ಹೆಣ್ಣುಮಗಳು, ಆಪ್ತ ತಂತೆ ಯಾವ ಎಗ್ಗೂ ಇಲ್ಲದೆ ಕೈಮುಟ್ಟಿ ತನ್ನ ಗಾಯಗಳಿಗೆ ಮುಲಾಮು ಹಚ್ಚು ತ್ರಿರುವದನ್ನು ನೋಡಿ ಜಗಂಗನು ಮತ್ತಿಷ್ಟು ಗೊಂದಲದಲ್ಲಿಬಿ ದನು, ಪರಕೀಯಳಾದ ಶ್ರೀಯಿಂದ ಹೀಗೆ ಉಪಚಾರಮಾಡಿಸಿಕೊಳ್ಳು ವದು ಆತನಿಗೆ ಸಂಕೋಚವಾಗತೊಡಗಿತು. ಆತನು ಕೃತಜ್ಞತೆಯಿಂದ ಮೇಲಕ್ಕೆ ಎದ್ದು ಆ ಸುಂದರಿಯ ಉಪಕಾರವನ್ನು ಸ್ಮರಿಸಿ, ಇಷ್ಟು ದೊಡ್ಡ ಉಪಕಾರದ ಭಾರವನ್ನು ಹೊರಲು ತಾನು ಶಕ್ತನಲ್ಲೆಂದು ಸುಂ ದರಿಗೆ ಹೇಳಿಕೊಳ್ಳಬೇಕೆಂದು ಆತನು ಯತ್ನಿಸುತ್ತಿರಲು, ಸುಂದರಿಯು ಆತನ ಯತ್ನವನ್ನು ನಡೆಯಗೊಡಲಿಲ್ಲ. ನೀವು ಈಗ ಮೇಲಕ್ಕೆ ಏಳು