ಪುಟ:ತಿಲೋತ್ತಮೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ತಿಲೋತ್ತಮೆ. ವದರಿಂದ ಕಟ್ಟಿದಗಾಯಗಳು ಸಡಲಿ ರಕ್ತವು ಸುರಿಯಬಹುದಾದುದರಿಂದ, ಸುಮ್ಮನೆ ಮಲಗಿಕೊಳ್ಳಬೇಕೆಂದು ಜಗಂಗನಿಗೆ ಬೇಡಿಕೊಂಡಳು. ಆಕೆಯು ಮಂಜುಲಧ್ವನಿಯಿಂದ ವಿನಯಪೂರ್ವಕವಾಗಿ ಮಾಡಿಕೊಂಡ ವಿನಂ ತಿಯನ್ನು ಮನ್ನಿಸದೆ ಇರುವದು ಜಗಂಗನಿಂದ ಆಗಲಿಲ್ಲ; ಆತನು ಅನಿರ್ವಾಹ ಪಕ್ಷ ಸುಮ್ಮನೆ ಆ ಸುಂದರಿಯಿಂದ ಗಾಯಗಳನ್ನು ಕಟ್ಟಿಸಿಕೊಳ್ಳಹತ್ತಿದನು. - ಆ ತರುಣಿಯನ್ನು ನೋಡಿ ಜಗತ್ತಿಂಗನು ವಿಚಾರಮಗ್ನನಾಗಿದ್ದನು. ಈಕೆಯು ಯಾರಿರಬಹುದು? ನನ್ನನ್ನು ಇಲ್ಲಿಗೆ ಯಾರು ಕರಕೊಂಡು ಬಂದಿ ರಬಹುದು? ತಿಲೋತ್ತಮೆಯೂ, ವಿಮಲಾದೇವಿಯೂ ಎಲ್ಲಿ ಹೋಗಿರಬ ಹುದು ? ಈ ತರುಣಿಯನ್ನು ಕೇಳಿದರೆ ಎಲ್ಲ ವ್ಯತ್ಯಾಂತವೂ ಗೊತ್ತಾಗ ಬಹುದೇ ? ಈಕೆಯನ್ನು ನಾನು ಏನೆಂದು ಮಾತಾಡಿಸಲಿ ? ಎಂದು ಆತನು ಯೋಚಿಸುತ್ತ, ಕಡೆಗೆ ಗಟ್ಟಿ ಮನಸ್ಸು ಮಾಡಿ ವಿನಯದಿಂದ ಆ ಸುಂದ"ಯನ್ನು ಕುರಿತು--ಭಾಗ ಶಾಲಿನಿಯೇ, ನಿ॰ನು ಯಾರು? ನನ್ನ ಆಪ್ತರಿಗಿಂತಲೂ ವಿಶೇಷವಾದ ಆಸಕ್ತಿಯಿಂದ ನನ್ನನ್ನು ನಿ॰ ನು ಉಪಚ ರಿಸಲು ಕಾರಣವೇನು? ನನ್ನನ್ನು ಇಲ್ಲಿಗೆ ಯಾರು ಕರತಂದರು? ಮು ದಾರಣಗಡದ ಅಂತರ್ಗೃಹದೊಳಗೆ ನನ್ನ ಬಳಿಯಲ್ಲಿದ್ದ ತಿಲೋತ್ಪನೆಯೂ, ವಿಮಲಾದೇವಿಯೂ ಎಲ್ಲಿಗೆ ಹೋದರು? ಈ ಸಂಗತಿಗಳನ್ನು ಕುರಿತು ನಿನಗೆ ಗೊತ್ತಿದ್ದದ್ದನ್ನು ಹೇಳಿದರೆ ಬಹಳ ಉಪಕಾರವಾಗುವದು, ಅದರಲ್ಲಿ ನಿನ್ನ೦ಥ ಪುಣ್ಯವಂತಳ ಪರಿಚಯವಾಗದಿದ್ದರೆ ನನಗೆ ಎಷ್ಟು ಮಾತ್ರವೂ ಸಮಾಧಾನ ವಾಗಲರಿಯದು, ಎಂದು ನುಡಿಯಲು, ಯವನ ತರುಣಿಯು ಏ?ಣಾನಾ ದವನ್ನು ಹೀಯಾಳಿಸುವ ತನ್ನ ಮಂಜುಳಧನಿಯಿಂದ ಜಗತ್ತಿ೦ಗನನ್ನು ಕುರಿತು-ಪುಣ್ಯವಂತನಾದ ರಾಜಪುತ್ರನೇ, ನಾನು ನವಾಬ ಕಾತಲೂಖಾ ನನ ತಮ್ಮನ ಮಗಳು, ನನ್ನ ಹೆಸರು ಆಯೇಷೆ. ನಿಮ್ಮ ಸ್ನೆಮಾಡ ಬೇಕೆಂದು ನನ್ನ ಮನಸ್ಸಿಗೆ ತೋರಿದ್ದರಿಂದ, ಯಥಾಶಕಿ ನಿಮ್ಮನ್ನು ಉಪಚರಿಸತೊಡಗಿರುತ್ತೇನೆ, ನೀವು ನವಾಬ ಕಾತಲೂಖಾನನ, ಅಂದರೆ ನಮ್ಮ ಕಕ್ಕನ ಕಾರಾಗೃಹದಲ್ಲಿ ಇರುತ್ತೀರಿ, ತಿಲೋತ್ತಮೆಯೂ, ಏಮ ಲಾದೇವಿಯೂ ನಮ್ಮ ಕಕನ ಕಾರಾಗೃಹದಲ್ಲಿಯೇ ಇರುವರು. ಆದರೆ ನಿಮಗೆ ಅವರಿಬ್ಬರ ದರ್ಶನವು ಈಗ ಆಗಲಾರದು. ಮಂದಾರ ಪಿರೇಂದ್ರಸಿಂಹರವರನ್ನು ನಮ್ಮ ಕನು ಗಲ್ಲಿಗೆ ಹಾಕಿಸಿದನು; ಆದರೆ