ಪುಟ:ತಿಲೋತ್ತಮೆ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪. ತಿಲೋತ್ತಮೆ. ಆದರೆ ನಿದ್ದೆ ಯ ಸುದ್ದಿ ಯನ್ನರಿಯದ ಜಗತ್ಸಂಗನು, ತಿಲೋತ್ತಮೆಗೆ ಎಚ್ಚ ರವಾಗದಂತೆ ಮೆಲ್ಲಗೆ ಆಕೆಯ ಬಾಹುಪಾಶವನ್ನು ಬಿಡಿಸಿಕೊಂಡು ಹಾಸಿಗೆ ಯಿಂದೆದ್ದು ಅಂತರ್ಗೃಹದಿಂದ ಹೊರಗೆ ಬಂದನು. ಬೆಳಗಿನ ಸ್ವಚ್ಛವಾದ ಹವೆ ಯಲ್ಲಿ ಅಶ್ವಾರೂಢನಾಗಿ ಯಥೇಚ್ಛ ಸಂಚರಿಸಿ ಮನಸ್ಸನ್ನು ರಮಿಸಿಕೊಳ್ಳಬೇ ಕಂದು ತಿಳಿದು ಆತನು ಅಶ್ವಶಾಲೆಗೆ ಹೋದುನ ಆತನು ತನ್ನ ಪ್ರೀತಿಯ ಕುದುರೆಯನ್ನು ಸಜ್ಜು ಮಾಡಿಕೊಂಡು ಕೋಟೆಯಹೊರಗೆ ಬರುವದರೊಳಗೆ ಅಥಣೋದಯವಾಯಿತು. ಬೆಳಗಿನ ತಂಗಾಳಿಯಿಂದ ಆತನ ಮನಸ್ಸಿಗೆ ಸ್ವಲ್ಪ ವಿಶ್ರಾಂತಿಯುಂಟಾದಂತಾಯಿತು, ಆದರೆಆತನ ಮನಸ್ಸಿನ ಔದಾಸೀನ್ಯವು ಕಡಿ ಮೆಯಾಗಿದ್ದಿಲ್ಲ.ಆತನ ಕಣ್ಣುಗಳು ಉರಿಯುತ್ತಿದವು,ಆತನಿಗೆ ಆಕಳಿಕೆಗಳುಬರು ತಿದ್ದವು. ಆತನ ಬಿಳಿಯ ಕುದುರೆಯು ಚಿರಪರಿಚಿತವಾದ ಭಾರವನ್ನು ವಹಿಸಿ ಕೊಂಡು, ತನ್ನ ಡೆಯನಿಗೆ ಸುಖವಾಗುವಂತೆ ಆನಂದದಿಂದ ಮಾರ್ಗವನ್ನು ಕ್ರಮಿಸಹತ್ತಿತು. ಹೀಗೆ ಜಗಕ್ಸಿಂಗನು ದುರ್ಗದಿಂದ ಹೊರಬಿದ್ದು ಹೋಗುತ್ತಿರುವಾಗ, ತಿಲೋತ್ತಮೆಯ ಅಂತರ್ಗೃಹದ ಕಡೆಗೆ ಹೊರಳಿ ನೋಡದೆಯಿರುವದು ಆತ ನಿಂದ ಆಗಲಿಲ್ಲ. ಆತನು ಬಹು ಕಷ್ಟದಿಂದ ಅತ್ತ ಹೊರಳಿನೋಡಲು, ತಿಲೋ ತಮೆಯು ಕಿಡಕಿಯಲ್ಲಿ ನಿಂತು ತನ್ನ ಕಡೆಗೆ ನೋಡುತ್ತ ಕಣ್ಣೀರು ಸುರಿಸು ತಿದ್ದಳು. ಆಕೆಯ ಮೋರೆಯು ಬಾಡಿತ್ತು, ಕಣ್ಣುಗಳು ಕೆಂಪಾಗಿದವು. ಅಸ್ತವ್ಯಸ್ತವಾಗಿ ಹರವಿದ ಕೇಶಗಳು ಮೊರೆಯಮೇಲೆ ಬಂದಿದ್ದವು. ಅದನ್ನು ನೋಡಿದ ಕೂಡಲೆ ಜಗಕ್ಸಿಂಗನ ಅಸುವು ಅಳಿದಂತಾಯಿತು. ಆತನು ತನ್ನ ಕುದುರೆಯನ್ನು ನಿಲ್ಲಿಸಿ, ಶೋಕಾತಿಶಯದಿಂದ ತಿಲೋತ್ತಮೆಯ ಕಡೆಗೆ ನೋಡಹತ್ತಿದನು. ಸ್ವಲ್ಪ ಹೊತ್ತು ಇಬ್ಬರೂ ನಿಶ್ಚಲರಾಗಿ ನಿಂತುಬಿಟ್ಟಿದ್ದರು. ಬಳಿಕ ಜಗಕ್ಸಿಂಗನು, ( ನಾನು ಇದೇ ಈಗ ಬರುವೆನೆ” ೦ದು ಸನ್ನೆಯಿಂದ ತಿಲೋತ್ತಮೆಗೆ ತಿಳಿಸಿದನು; ಆದರೆ ಮುಂದಕ್ಕೆ ಹೋಗುವ ಇಚ್ಛೆಯು ಆತನಿ ಗಾಗಲೊಲ್ಲದು, ಜಗತ್ತಿಂಗನ ದೃಷ್ಟಿ ಯು ತನ್ನ ಕಡೆಗೆ ಇರುವದನ್ನು ನೋಡಿ ತಿಲೋತ್ತಮೆಯು ಆತನಿಗೆ ನಮಸ್ಕಾರ ಮಾಡಿದಳು, ಬೇಗನೆ ಬರ ಬೇಕೆಂದು ಆತನಿಗೆ ಕೊರಳಾಣೆ ಇಟ್ಟಳು. ಅದನ್ನು ನೋಡಿ ಜಗತ್ತಿಂಗನಾದರೂ ತಲೆಹಾಕಿ ಸಮ್ಮತಿಯನ್ನು ಪ್ರಕಟಿಸಿ, ಒಳಗೆ