ಪುಟ:ತಿಲೋತ್ತಮೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಮಫಲ. ೪೫. ಹೋಗೆಂದು ಸನ್ನೆ ಯಿಂದ ತಿಲೋತ್ತಮೆಗೆ ತಿಳಿಸಿದನು, ಆದರೆ ತಿಶೋ ತಮೆಯು ಅಲ್ಲಿಂದ ಕದಲಲಿಲ್ಲ. -ಎವೆಯಿಕ್ಕದೆ ಜಗತ್ಸಂಗನನ್ನು ನೋಡುತ್ತ ನಿಂತಲ್ಲಿ ನಿಂತುಬಿಟ್ಟಿದ್ದಳು. ಆಕೆಯ ಕಣೋಳಗಿಂದ ಒಂದೇ ಸವನೆ ನೀರುಗಳು ಸುರಿಯುತ್ತಿದ್ದವು, ಆದನ್ನು ನೋಡಿ ಜಗತ್ಸಂಗನು ಮುಂದಕ್ಕೆ ಸಾಗದಾದನು; ಆದರೆ ಈಗ ತಿರುಗಿ ಬರೋಣವೆಂದು ಅಂದುಕೊಂಡು ಆತನು ಕುದುರೆಯನ್ನು ಚಬಕದಿಂದ ಒಮ್ಮೆ ಹೊಡೆದನು. ಕೂಡಲೆ ಅದು ವಾಯು ವೇಗದಿಂದ ಮುಂದಕ್ಕೆ ಸಾಗಿತು. ಆಗ ಜಗಕ್ಸಿಂಗನು ಮಂದಾರಣಗಡದ ಕಡೆಗೆ ಹೊರಳಿ ನೋಡಲು, ತಿಲೋತ್ತಮೆಯೂ ಕಾಣಲಿಲ್ಲ, ಆಕೆಯ ಅಂತ ಗ್ರಹವೂ ಕಾಣಲಿಲ್ಲ. ಈ ಜಗಕ್ಸಿಂಗನ ಕುದುರೆಯು ವಾಯುವೇಗದಿಂದ ಮಾರ್ಗವನ್ನು ಕ್ರಮಿಸ. ಹತ್ತಿತು, ಜಗತ್ನಿಂಗನು ತನ್ನ ರಮಣಿಯ ಕಲ್ಯಾಣಕಾರಕ ಗುಣಗಳನು ಒಂದೊಂದಾಗಿ ನೆನಿಸುತ್ತ ಆಕೆಯ ಮನಸ್ಸನ್ನು ನೋಯಿಸಿದ್ದಕ್ಕಾಗಿ ಪಶ್ಚಾ ತಾಪಪಡುತ್ತ ಪರಾಧೀನನಂತೆ ಕುದುರೆ ಒಯ್ಯುತ್ತ ಸಾಗಿದನು. ಅಷ್ಟರಲ್ಲಿ ದೂರ ಎಷ್ಟೋ ಕುದುರೆಗಳ ಕೊಳಗಗಳ ಸಪ್ಪಳವಾಗುತ್ತಿರುವಂತ ಆತನಿಗೆ. ಭಾಸವಾಯಿತು. ಆತನು ಸಪ್ಪಳವಾಗುತ್ತಿರುವ ದಿಕ್ಕಿಗೆ ಆಲಿಸಿ ಕೇಳಹತ್ತಿದನು. ಬರಬರುತ್ತ ದೂಳವು ಕಾಣಹತ್ತಿತು. ಈ ಸೈನ್ಯವು ಯಾರದಿರಬಹುದೆಂಬದರ ಅನುಮಾನವು ಜಗತ್ತಿಂಗನಿಗೆ ಆಗಲೊಲ್ಲದು, ಸ್ವಲ್ಪ ಮುಂದಕ್ಕೆ ಹೋಗುತ್ತಿ ರಲು, ರಜಪೂತ ಸವಾರರು, ಆತನ ಎದುರಿಗೆ ಬರಹತ್ತಿದರು. ಜಗತ್ತಿಂಗನ ಕುದುರೆಯು ಅವರ ಗುರುತುಹಿಡಿದುಈಲ್ಲಾ ಸದಿಂದಹಕರಿಸಹತ್ತಿತು. ಬರಬ ರುತ್ತ ಜಗತ್ತಿಂಗನಿಗೂ ಎದುರಿಗಿನಸೈನ್ಯದಗುರುತುಹತ್ತಿತು.ಅವರುತನ್ನ ತಂದೆಯ ಸೈನ್ಯದೊಳಗಿನವರೆಂಬದನ್ನು ಆತನುಅರಿತನು; ಆದರೆ ಅವರನ್ನು ನೋಡಿ ಸಮಾ ಧಾನವಾಗುವದರ ಬದಲು, ಜಗತ್ಸಂಗನಿಗೆ ಭಯವು ಉತ್ಪನ್ನವಾಯಿತು. ಆತನ ಹೃದಯವು ಕಂಪಿಸಿ ಚಿತ್ರವು ಚಂಚಲವಾಯಿತು. 'ತನ್ನನ್ನು ಹಿಡ ಕೊಂಡು ಬರುವದಕ್ಕಾಗಿಯೇ ತನ್ನ ತಂದೆಯು ಈ ಸೈನ್ಯವನ್ನು ಕಳಿಸಿರುವ ನೆಂದು ಆತನು ತರ್ಕಿಸಿದನು. ದೂರದಿಂದ ಸೈನ್ಯವು ದೊಡ್ಡದಾಗಿ ತೋರಿ ದರೂ, ಅದು ಸನಿಯಕ್ಕೆ ಬರಲು, ಅದರಲ್ಲಿ ಐವತ್ತು ಜನ ಕುದುರೆಯ ಸವಾ ರರು ಮಾತ್ರ ಇದ್ದರು. "ಅವರು ಭವ್ಯಶರೀರಗಳು, ಯುದ್ಧ ವಿಶಾರದರು, ಶಸ್ತ್ರ