ಪುಟ:ತಿಲೋತ್ತಮೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೪೩ ತಿಲೋತ್ತಮೆ. ಧಾರಿಗಳು ಇದ್ದರು; ಆದರೆ ರಣಧೀರನಾದ ಜಗಂಗನು ಇಂಥ ಶೂರಸೈನಿಕ ರನ್ನು ನೋಡಿ ಹೆಡಿ ತನದಿಂದ ಹೆದರಲಿಲ್ಲ. ಆತನು ರಣಶೂರನಿದ್ದನು. ವೀರ ರಜಪೂತಕುಲದಲ್ಲಿ ಆತನ ಜನ್ಮವಾಗಿದ್ದು, ಆತನು ಕುಲಭೂಷಣನಾಗಿದ್ದನು. ಆತನಿಗೆ ಮರಣದಭಯವು ಲೇಶವಾದರೂ ಇದಿಲ್ಲ; ಆದರೆ ಕೇವಲ ಮಾನ ಸಿಂಹನ ಭಯವು ಆತನನ್ನು ಬಾಧಿಸುತ್ತಿತ್ತು. ತನ್ನ ತಂದೆಯ ಕ್ರೋಧದ ಸ್ವರೂಪವನ್ನು ಆತನು ಅರಿತಿದ್ದನು. ಆ ಚಿಕ್ಕ ಸೈನ್ಯದ ಮುಂದೆ ಅದರ ನಾಯ ಕನು ಇದ್ದನು. ಜಗಕ್ಸಿಂಗನಿಗೂ ಆ ಸೈನ್ಯಕ್ಕೂ ಸ್ವಲ್ಪ ಅಂತರ ಉಳಿದಿರು ವಾಗ, ಆ ಸೇನಾನಾಯಕನೂ, ಜಗಕ್ಸಿಂಗನೂ ಒಬ್ಬರನ್ನೊಬ್ಬರು ನೋಡಿ ದರು. ಸೇನಾನಾಯಕನ ಅಪ್ಪಣೆಯವರೆಗೆ ಯಾವತ್ತು ಸವಾರರು ತಮ್ಮ ಕುದುರೆಗಳ ಕಡಿವಾಣಗಳನ್ನು ಜಗ್ಗಿ ಹಿಡಿದು ಅವನ್ನು ನಿಲ್ಲಿಸಿದರು. ಆಮೇಲೆ ಎಲ್ಲರೂ ತಮ್ಮ ಖಡ್ಡ ಗಳನ್ನು ಎದೆಗೆ ಹಚ್ಚಿಕೊಂಡು- II ಅಕಬರಬಾದಶ ಹರ ಜಯಜಯಕಾರವು! ಮಾನಸಿಂಹಮಹಾರಾಜರವರೆ ಜಯಜಯಕಾ -ರವು! !” ಎಂದು ಜಯಘೋಷಮಾಡಿದರು. ಆಗ ಜಗಕ್ಸಿಂಗನೂ ತನ್ನ ಹೃದಯಕ್ಕೆ ಖಡ್ಗವನ್ನು ಹಚ್ಚಿಕೊಂಡು- . ಅಕಬರಬಾದಶಹರ ಜಯ ಜಯಕಾರವು! ಮಾನಸಿಂಹಮಹಾರಾಜರ ಜಯಜಯಕಾರವು! ! " ಎಂದು ಜಯಘೋಷವಾಡಿ ಸಹಾನುಭೂತಿಯನ್ನು ವ್ಯಕ್ತ ಮಾಡಿದನು. ಬಳಿಕ ಜಗಂಗನು ಸೇನಾನಾಯಕನನ್ನು ಕುರಿತು-ಮಥುರಾಸಿಂಹ, ವಿಶೇಷ ವರ್ತಮಾನವೇನು? ಶಹಾನಶಹರವರಿಗೆ ಕ್ಷೇಮವಷ್ಟೆ? ಮಹಾರಾಜರು ಸುಖ ರೂಪವಾಗಿರುವರೆ? ಎಂದು ಕೇಳಲು, ಮಥುರಾಸಿಂಹನು ತನ್ನ ಕುದುರೆಯಿಂದ ಇಳಿದು ಕೈಜೋಡಿಸಿ-ಮಹಾರಾಜ, ಭಗವಂತನ ಕೃಪೆಯಿಂದ ಎಲ್ಲಿಯೂ ಅಮಂಗಲದ ಸುದ್ದಿ ಯಿರುವದಿಲ್ಲ, ಎಂದು ಹೇಳಿದನು. ಅಷ್ಟರಲ್ಲಿ ಒಬ್ಬ ಸಿಪಾ ಯಿಯು ಮಥುರಾಸಿಂಹನ ಕುದುರೆಯನ್ನು ಹಿಡಕೊಳ್ಳಲು, ಆ ನಾಯಕನು `ಜಗತ್ತಿಂಗನ ಬಳಿಗೆಬಂದು ಬಹು ಆದರದಿಂದ ಪ್ರಣಾಮಮಾಡಿ, ತನ್ನ ಮುಂಡಾಸದೊಳಗಿನ ಒಂದು ಪತ್ರವನ್ನು ತೆಗೆದು, ಜಗಿಂಗನ ಕೈಯಲ್ಲಿ - ಕೊಟ್ಟನು. ತನ್ನ ತಂದೆಯ ಸೈನ್ಯವನ್ನು ನೋಡಿದಾಗಲೇ ಏನಾದರೂ .ಅನಿಷ್ಟ ಪ್ರಸಂಗವು ಒದಗಿರುವದೆಂದು ಯುವರಾಜನು ತರ್ಕಿಸಿದ್ದನು. ಈಗ ತಂದೆಯ ಪತ್ರವು ಕೈಯಲ್ಲಿ ಬಂದಬಳಿಕಂತು ಆತನ ಭಯವು ಹೆಚ್ಚಿತು.