ಪುಟ:ತಿಲೋತ್ತಮೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಮಫಲ. ೪೭. ಕೈಗಳು ನಡಗುತ್ತಿರಲು, ಜಗತ್ಸಂಗನು ಪತ್ರವನ್ನು ಒಡೆದು ಓದಹತ್ತಿದನು. ಇನ್ನು ತನ್ನ ಸುಖದ ದಿವಸಗಳು ಮುಗಿದವೆಂದು ಆತನು ತರ್ಕಿಸಿದ್ದು ನಿಜ ವಾಯಿತು. ತಂದೆಯ ಅಪ್ಪಣೆಯನ್ನು ಓದುವದಾದಮೇಲೆ ಜಗಂಗನು ಮಥುರಾಸಿಂಹನನ್ನು ಕುರಿತು ಜಗತ್ಸಂಗ-ಮಥುರಾಸಿಂಹ, ಮಹಾರಾಜರು ನನ್ನನ್ನು ಕುರಿತು ಮತ್ತೇನು ಆಜ್ಞಾಪಿಸಿರುವರು? - ಮಥುರಾಸಿಂಹ-ಮಹಾರಾಜ, ನಾನು ತಮ್ಮ ಚರಣಸೇವಕನು, ಪತ್ರ ದಲ್ಲಿ ಬರೆದದ್ದಕ್ಕಿಂತ ಹೆಚ್ಚಿಗೇನು ಹೇಳಿರುವದಿಲ್ಲ; ಆದರೆ ವಿಶೇಷವಿಷ್ಟೆ; ತಮ್ಮ ದರ್ಶನವಾದ ಕೂಡಲೆ ತಾವು ಇದ್ದ ಸ್ಥಿತಿಯಲ್ಲಿ ಇದ್ದ ಹಾಗೆಯೇ ತಮ್ಮನ್ನು ಹಿಡಕೊಂಡು ಬರುವದಕ್ಕೆ ಮಹಾರಾಜರ ಅಪ್ಪಣೆಯಾಗಿದೆ, ಆದ್ದರಿಂದ ತಾವು ಈಗ ಹೀಗೆಯೇ ನನ್ನ ಸಂಗಡ ಬರಬೇಕಾಗುವದು. ಜಗಂಗ-ಈಗ ಎಲ್ಲಿಗೆ ಬರಬೇಕು? ಮಥುರಾಸಿಂಹ-ಪಾಟಣಾದಲ್ಲಿರುವ ಮಹಾರಾಜರಬಳಿಗೆ. ಜಗಂಗ-ಇಂದು ಒಂದು ದಿನ ದುರ್ಗಗಳಿದ್ದು ನಾಳೆಬಂದರೆ? ಮಥುರಾಸಿಂಹ ( ಕೈ ಜೋಡಿಸಿ )-ತಾವು ಅಪ್ಪಣೆಯನ್ನು ಪಾಲಿಸ ಲಿಕ್ಕೆ ಸ್ವಲ್ಪ ಹಿಂದೆ ಮುಂದೆ ನೋಡಿದರೆ, ಅಥವಾ ಅದಕ್ಕೆ ಅಲ್ಪ ಸ್ವಲ್ಪ ವಿಘ್ನ ವನ್ನುಂಟುಮಾಡಿದರೆ ತಮ್ಮನ್ನು ಸೆರೆಹಿಡಿದು ಕರತರಬೇಕೆಂದು ಮಹಾರಾ ಜರ ಅಪ್ಪಣೆಯಾಗಿದೆ. ಜಗಂಗ-ಮಂದಾಗಣಗಡದಲ್ಲಿ ನನ್ನವರು ಕೆಲವರಿರುತ್ತಾರೆ. ಅವ ರನ್ನು ಕಂಡು ಅವರಿಗೆ ಹೇಳಿಬರಲಿಕ್ಕೂ ಆಸ್ಪದವಿಲ್ಲವೊ? - ಮಥುರಾಸಿಂಹ ( ಕೈಜೋಡಿಸಿ )-ನಾನು ತಮ್ಮ ದಾಸನು, ಕ್ಷಮಿಸ ಬೇಕು, ತಮಗೆ ಸ್ವಲ್ಪವೂ ಅವಶಾಶಕೊಡಲಾಗದೆಂದು ಮಹಾರಾಜರು ನನ್ನನ್ನು ಆಜ್ಞಾಪಿಸಿದ್ದಾರೆ. ಇನ್ನು ಹೆಚ್ಚು ಮಾತು ಬಳಿಸುವದರಲ್ಲಿ ಅರ್ಥವಿಲ್ಲೆಂದು ಜಗಕ್ಸಿಂಗನು ತಿಳಿದನು. ಒಬ್ಬ ರಾಜದ್ರೋಹಿಯನ್ನು ಆಜ್ಞಾಪಿಸಿರುವಂತೆ ತನ್ನ ತಂದೆಯು ತನ್ನನ್ನು ಆಜ್ಞಾಪಿಸಿರುವನೆಂದುಆತನುಭಾವಿಸಿದನು. ಆತನುಮಥುರಾಸಿಂಹ ನನ್ನು ಕುರಿತು- CC ಮಹಾರಾಜರ ಆಜ್ಞೆಯನ್ನು ಉಲ್ಲಂಘಿಸುವವರು