ಪುಟ:ತಿಲೋತ್ತಮೆ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ತಿಲೋತ್ತಮೆ. ಈ ಭರತಖಂಡದಲ್ಲಿ ಯಾರಿರುವರು? ನಾನಂತು ಅವರ ಕುದ್ರನಾದ ಸೇವ ಕನು; ಆದರೆ ಮಥುರಾಸಿಂಗಜೀ, ನಾನು ನಿಮ್ಮನ್ನೊಂದು ಮಾತು ಕೇಳು ತೇನೆ, ಅದನ್ನು ಹೇಳುವಿರಾ? ನಾನು ಈಗ ಯುದ್ಧಕ್ಕೆ ಸನ್ನದ್ಧನಾಗಿ ನಿಂತುಕೊಂಡರೆ, ಏನು ಮಾಡಬೇಕೆಂದು ನಿಮಗೆ ಹಿರಿಯರ ಅಪ್ಪಣೆಯಾಗಿದೆ? ಅನ್ನಲು, ಅದಕ್ಕೆ ಮಥುರಾಸಿಂಹನು-ಮಹಾರಾಜ, ತಮ್ಮ ಪ್ರಶ್ನೆಗೆ ಉತ್ತರಕೊಡುವ ಯೋಗ್ಯತೆಯು ನನಗಿಲ್ಲ. ಶಾವು ಜೀವದಿಂದ ಸಿಗಲಿ, ಮರ ಅಹೊಂದಿ ಸಿಗಲಿ, ಸಿಕ್ಕ ಹಾಗೆ ಹಿಡಿತರಬೇಕೆಂದು ಮಹಾರಾಜರ ಅಪ್ಪಣೆಯಾ ಗಿದೆ ಎಂದು ಹೇಳಿದನು. ತನ್ನ ವಿಷಯವಾಗಿ ಮಹಾರಾಜರು ಎಷ್ಟು ಕಠಿಣಹೃದಯರಾಗಿರುವ ರೆಂಬದನ್ನು ಜಗತ್ಸಂಗನು ತಿಳಕೊಂಡನು. ಆತನು ಪುನಃ ಮಥುರಾಸಿಂಹ ನನು ಏನೂ ಕೇಳಲಿಲ್ಲ. ಮಹಾರಾಜರ ಎದುರಿಗೆ ಹೋಗಿ ನಿಂತಬಳಿಕ ಭೋಗಿಸಬೇಕಾದ ಶಿಕ್ಷೆಯನ್ನು ಭೋಗಿಸಿದರಾಯಿತು. ಸುಮ್ಮನೆ ಆವರ ಆಚ್ಛೆಗೆ ವಿರುದ್ಧವಾಗಿ ನಡೆಯಲು ಯತ್ನಿಸುವದರಲ್ಲಿ ಅರ್ಥವಿಲ್ಲ. ಈಶ್ವರಾ ಜ್ಞೆಯನ್ನಾದರೂ ಮಿರಬಹುದು, ಆದರೆ ಮಾನಸಿಂಹರವರ ಸೈನಿಕರು ಮಾನಸಿಂಹರ ಆಜ್ಞೆಯನ್ನು ಮೀರಲಾರರು. ಅವರು ತಮ್ಮ ಪ್ರಭುವಿನ ಅಪ್ಪಣೆಯಂತೆ ನಡದೇ ತೀರತಕ್ಕವರು; ಅಂದಬಳಿಕ ಈಗ ವ್ಯರ್ಥವಾಗಿ ಮಥು ರಾಸಿಂಹನ ಸಂಗಡ ಅರದಾಡುವದರಲ್ಲಿ ಅರ್ಥವೇನು? ಎಂದು ಯೋಚಿಸಿ ಮಥುರಾಸಿಂಹನನ್ನು ಕುರಿತು-ನಡೆಯಿರಿ ಮಥುರಾಸಿಂಹ, ಇನ್ನು ವ್ಯರ್ಥ ತಡಮಾಡುವದರಿಂದ ಪ್ರಯೋಜನವಿಲ್ಲ; ಆದರೆ ನನ್ನ ಸೈನಿಕರೂ ಸೇವಕರೂ ದಾರುಕೇಶ್ವರದ ತೀರದಲ್ಲಿ ಶಹಾಬಾದದದಲ್ಲಿ ಇರುವರು, ಅವರ ಗತಿಯೇನು? ಎಂದು ಕೇಳಲು, ಮಥುರಾಸಿಂಹನು- “ ನಾನು ಅವರ ಯೋಗ್ಯ ವ್ಯವಸ್ಥೆ ಮಾಡುವನು” ಎಂದು ಹೇಳಿ, ಜಬ್ಬ ಸೈನಿಕನಿಗೆ ಅಪ್ಪಣೆಯಿತ್ತು ಅತ್ತಕಡೆಗೆ ಕಳಿಸಿದನು, ಸೈನಿಕನು ಅತ್ತ ಕಡೆಗೆ ಹೋಗುತ್ತಿರಲು, ಜಗತ್ನಿಂಗನು 'ಆತ ನನ್ನು ಕುರಿತು-ನೀನು ಮಂದಾರಣಗಡದಮೇಲಿಂದಹಾದುಹೋಗುತ್ತಿದ್ದರೆ, 44 ತಂದೆಯ ಆಜ್ಞೆಯಂತೆ ಜಗತ್ಸ೦ಗನು ಪಾಟಣಾಕ್ಕೆ ಹೋದನೆಂಬ ಸುದ್ದಿ ಕುನ್ನು ಅಲ್ಲಿ ತಿಳಿಸು ”.ಎಂದು ಹೇಳಿದನು, ಆಮೇಲೆ ಮಥುರಾಸಿಂಹನು ತನ್ನ ಸೈನ್ಯದಲ್ಲಿ ಎರಡು..ಭಾಗಗಳನ್ನು ಮಾಡಿದನು. ಬಳಿಕ ಪ್ರತಿ ಒಂದು