ಪುಟ:ತಿಲೋತ್ತಮೆ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಮಫಲ.

ಭಾಗವು ಆತನ ಅಪ್ಪಣೆಯಿಂದ ಸಾಲ್ಗೊಂಡು ನಡೆಯುತ್ತಿರಲು, ಅವುಗಳ ಮಧ್ಯದಲ್ಲಿ ಜಗತ್ತಿಂಗನೊಡನೆ ಮಥುರಾಸಿಂಗನು ನಡೆದನು. \ - ಮಾರ್ಗವನ್ನು ಕ್ರಮಿಸುವಾಗ ಜಗತ್ತಿಂಗನು ತಿಲೋತ್ತಮೆಯನ್ನು ನೆನಿಸಿ ಬಹಳವಾಗಿ ವ್ಯಥೆಪಟ್ಟನು. ತಾನು ಮಂದಾರಣಗಡವನ್ನು ಬಿಟ್ಟು ಬರುವಾಗ ತನ್ನ ಪ್ರಿಯಳ ಒಪ್ಪಿಗೆಯನ್ನು ಪಡೆಯದೆ, ಆಕೆಗೆ ನಿದ್ದೆ ಹತ್ತಿ ದಾಗ ಕಳ್ಳನಂತೆ ನಡೆದ ತನ್ನ ಕಠಿಣಹೃದಯಕ್ಕಾಗಿ ಆತನು ತನ್ನನ್ನು ಬಹ ಳವಾಗಿ ಹಳಿದುಕೊಂಡನು. ಕಣ್ಣೀರು ಸುರಿಸುತ್ತಿದ್ದ ತನ್ನ ಪ್ರಿಯಳ ಬಾಡಿದ ಮೊರೆಯೂ, ಬೇಗನೆ ಬರಬೇಕೆಂದು ಆಕೆಯು ತನಗೆ ಇಟ್ಟ ಕೊರಳಾ ಣೆಯೂ, ಭಯಗೊಂಡು ಭಕ್ತಿ ಪೂರ್ವಕವಾಗಿ ಆಕೆಯು ತನಗೆ ಮಾಡಿದ ಪ್ರಣಾಮವೂ ಈಗ ಜಗಂಗನ ಕಣ್ಣಿಗೆ ಕಟ್ಟಿ, ಕೋಕಾತಿಶಯದಿಂದ ಆತನ ಕುತ್ತಿಗೆಯ ಶಿರಗಳು ಬಿಗಿದವು. ಮಥುರಾಸಿ೦ಹನಮುಂದೆ ಗಟ್ಟಿಯಾಗಿ ಅಳುವದಂತು ಇರಲಿ, ಕಣ್ಣೀರು ಸುರಿಸಲಿಕ್ಕೂ ಬಾರದ್ದರಿಂದ, ಜಗತ್ತಿಂಗನ ದು:ಖವು ಆತನನ್ನು ಬಹಳವಾಗಿ ಬಾಧಿಸಹತ್ತಿತು. ತಿಲೋತ್ತಮೆಯ ಒಂದೊಂದೇ ಸುಗುಣಗಳೂ, ಅಕೃತ್ರಿಮಸ್ರೇಮವೂ, ಸುಲಲಿತಭಾಷಣಗಳೂ, ಮನೋಹರ ನಡತೆಗಳೂ ಜಗತ್ಸಂಗನ ಮನಸ್ಸಿಗೆ ಹೊಳೆದು, ಆತನನು ಮೂಢನಾಗಮಾಡಿದವು, ಬರಬರುತ್ತ ಯುವರಾಜನು ಭ ಮಿಷ್ಟ ನಂತಾ ದನು; ಆದರೆ ತಾನು ತಂದೆಯ ಸೆರೆಯಾಳಾಗಿ ಮಥುರಾಸಿಂಹನೊಡನೆ ನಡೆ ದಿರುವೆನೆಂಬ ಎಚ್ಚರವು ಮಾತ್ರ ಆತನಿಗೆ ಪೂರ್ಣವಾಗಿ ಇದ್ದದ್ದರಿಂದ, ಎಚ್ಚರ ಗೇಡಿತನದ ಕೃತಿಗಳು ಆತನಿಂದ ಒದಗಲಿಲ್ಲ. ಮಾರ್ಗವನ್ನು ನಡೆಯುವಾಗ ಒಬ್ಬರೂ ಚಕಾರಶಬ್ದ ನುಡಿಯುತ್ತಿದ್ದಿಲ್ಲ. ಒಬ್ಬೊಬ್ಬರು ಒಂದೊಂದುಬಗೆಯ ವಿಚಾರದಲ್ಲಿ ಮಗ್ನರಾಗಿ ಹೋಗಿದ್ದರು. ಪ್ರತ್ಯಕ್ಷ ಯುವರಾಜನಾದ ಜಗತ್ತಿಂಗಸಿಗೊದಗಿದ ಪ್ರಸಂಗವನ್ನು ನೋಡಿ, ಸ್ವಾಮಿಭಕ್ತ ಮಥುರಾಸಿಂ ಗನು ಬಹಳ ಉದಾಸೀನನಾಗಿದ್ದನು. ತನ್ನ ಒಡೆಯನ ಸಂಗಡ ಮಾತಾಡುವದಂತು ಇರಲಿ, ಒಡೆಯನ ಕಡೆಗೆ ನೋಡುವ ಮನಸ್ಸು ಸಹ ಆತನಿಗಾಗಲಿಲ್ಲ. ಮಾನಸಿಂಗನ ಕಠಿಣತರವಾದ ಆಜ್ಞೆಯಮೂಲಕ ತನಗೆ ಯುವರಾಜನ ಒಂದು ಬೇಡಿಕೆಯನ್ನಾದರೂ ಪೂರ್ಣಮಾಡಲಿಕ್ಕೆ ಬರಲಿ ಛಂದು ಮಥುರಾಸಿಂಹನು ಮನಸ್ಸಿನಲ್ಲಿ ವ್ಯಸನಪಡುತ್ತಿದ್ದನು. ಉಳಿದ ಸೈನಿ