ಪುಟ:ತಿಲೋತ್ತಮೆ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ತಿಲೋತ್ತಮೆ. ಕರು ಮಾನಸಿಂಹನ ನ್ಯಾಯನಿಷ್ಟುರತೆಗಾಗಿ ಭಯಗೊಂಡು ಸುಮ್ಮನೆ ಮಾರ್ಗ ವನ್ನು ಕ್ರಮಿಸುತ್ತಲಿದ್ದರು. ಹೀಗೆ ಎಲ್ಲರು ಚಿಂತಾಮಗ್ನರಾಗಿರುವಾಗ ಅವ ರವರ ಕುದುರೆಗಳು ತಮ್ಮ ಚಿರಪರಿಚಿತವಾದ ಭಾರಗಳನ್ನು ಹೊತ್ತು ಕೊಂಡು ದ್ರುತಗಮನದಿಂದ ಮಾರ್ಗವನ್ನು ಕ್ರಮಿಸುತ್ತಲಿದ್ದವು. ೫ನೆಯ ಪ್ರಕರಣ-- ನ್ಯಾಯನಿಷ್ಟುರತೆ. ಅಜಕಸ ಇತ್ತ ಮಾನಸಿಂಗನು ತನ್ನ ಮಗನ ಮೇಲೆ ಬಹಳ ಸಿಟ್ಟಾಗಿದ್ದನು. ತನ್ನ ಮಗನು ಪಠಾಣರ ಸೆರೆಯಾಳಾದಾಗಲೇ ಮಾನಸಿಂಗನಿಗೆ ಆತನ ಕೃತಿ ಗಳೆಲ್ಲ ಗೊತ್ತಾಗಿದ್ದವು, ತನ್ನ ಪ್ರಸಿದ್ಧ ಕುಲಿನಮನೆತನದೊಡನೆ ಮಂದಾ ರಣಗಡದಂಥ ಕುದ್ರಸಂಸ್ಥಾ ನಿಕನ ಸಂಬಂಧವಾದದು ಮಾನಸಿಂಗನಿಗೆ ಬಹಳ ಅಸಮಾನಾಸ್ಪದವಾಗಿ ತೋರಿತು. ವೀರೇ೦ದ್ರಸಿಂಹನನ್ನು ಆ ೨೦ಬರಾಧೀ ಶ್ವರನು ನೀಚನೆಂದು ಭಾವಿಸುತ್ತಿದ್ದನು. ವೀರೇಂದ್ರನೊಡನೆ ಭಾಷಣಮಾ ಡುವದುಸಹ ಆತನಿಗೆ ಸೇರುತ್ತಿದ್ದಿಲ್ಲ. ತನ್ನ ಅನುಮತಿಯನ್ನು ಪಡೆ ಯದೆ, ಅಥವಾ ಲಗ್ನ ಮಾಡಿಕೊಳ್ಳುತ್ತೇನೆಂಬ ಸುದ್ದಿಯನ್ನು ಸಹ ತನಗೆ ಹೇಳದೆ ಮಗನು ತಿಲೋತ್ತಮೆಯನ್ನು ಲಗ್ನವಾದದ್ದರಿಂದಂತು ಮಾನಸಿಂ ಗನು ಸಿಟ್ಟು ಬೆಂಕಿಯಾಗಿದ್ದನು. ಆದರೂ ಆ ಸಿಟ್ಟನ್ನು ಹೊರಗೆ ತೊರಿಸದೆ ಮಾನಸಿಂಗನು ಅದನ್ನೆಲ್ಲ ನುಂಗಿಕೊಂಡನು. ಮಗನು ಈಗ ಎಲ್ಲಿ ಇರು ವನು, ಏನು ಮಾಡುವನು ಎಂಬ ಉಸಾಬರಿಯನ್ನು ಕೂಡ ಆತನು ಬಿಟ್ಟು ಬಿಟ್ಟಿದ್ದನು. ತಾವು ಬಾದಶಹನ ನೌಕರರಿದ್ದು, ಬಾದಶಹನ ಹಿತವನ್ನು ಕೆಡಿಸಿ ತನ್ನ ಮಗನು ಸ್ವಾರ್ಥವನ್ನು ಸಾಧಿಸಿಕೊಂಡದ್ದರಿಂದ ಆತನು ರಾಜ ದೋಹದ ಶಿಕ್ಷೆಗೆ ಪಾತ್ರನೆಂದು ಆ ಸ್ವಾಮಿನಿಷ್ಠ ರಜಪೂತನು ನಿರ್ಧರಿಸಿ ದನು. ತನ್ನ ಸೈನ್ಯವು ಬೀಡುಬಿಟ್ಟಲ್ಲಿ ತಾನು ಇರದೆ, ಜಗತ್ತಿಂಗನು