ಪುಟ:ತಿಲೋತ್ತಮೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ್ಯಾಯನಿಷ್ಠುರತೆ. 25า ಮಂದಾರಣಗಡದಲ್ಲಿ ಇರಹತ್ತಿದ್ದು ಮಾನಸಿಂಗನಿಗೆ ಅಕ್ಷಮ್ಯ ಅಪರಾಧವಾಗಿ ತೋರಿತು. ಇಂಥ ಮಹಾಪರಾಧಿಯಾದ ಮಗನನ್ನು ಶಿಕ್ಷಿಸದಿದ್ದರೆ, ತನ್ನ ಪಾಲಿಗೆ ಪಕ್ಷಪಾತದ ದೊಷವು ಬಂದು, ತನ್ನ ವರ್ಚಸ್ಸು ಕಡಿಮೆಯಾಗು ನವೆಂದು ಆ ಅಭಿಮಾನಿಯು ಭಾವಿಸಿದನು. ಈ ಭಾವನೆಯಿಂದಲೆ ಆತನು ತನ್ನ ಮಗನನ್ನು ನ್ಯಾಯಾಸನದ ಮುಂದೆ ನಿಲ್ಲಿಸಿ ವಿಚಾರಿಸಿ, ಯೋಗ್ಯ ಶಿಕ್ಷೆಯನ್ನು ವಿಧಿಸುವದಕ್ಕಾಗಿ ಆತನನ್ನು ಹಿಡತರಲು, ಮೇಲೆ ಹೇಳಿದಂತೆ ಐವತ್ತು ಜನ ಶೂರ ರಜಪೂತ ರಾವುತರೊಡನೆ ಮಥುರಾಸಿಂಹನನ್ನು ಕಳಿಸಿ ದ್ದನು. ಅದರಂತೆ ಮಥುರಾಸಿಂಹನು ಜಗತ್ತಿ೦ಗನೊಡನೆ ಪಾಟಣಾಕ್ಕೆ ಬಂದು ತಲುಪಿದನು. - ಹೀಗಿರುವಾಗ ಒಂದುದಿನ ರಾಜಾಮಾನಸಿಂಹನು ನಾಟಣಾದಲ್ಲಿ ದರ್ಬಾರುನೆರೆಸಿದನು. ೬೦ದು ದರ್ಬಾರದಲ್ಲಿ ಜನರ ಸಂದಣಿಯು ವಿಶೇಷ ನಾಗಿತ್ತು, ಇಂದಿನ ದರ್ಬಾರದಲ್ಲಿ ಏನಾದರೂ ಅಸಂಭವಸಂಗತಿಯು ಒದ ಗುವದೆಂದು ದರ್ಬಾರದ ಜನರು ತರ್ಕಿಸುತ್ತಲಿದ್ದರು. ಪ್ರತ್ಯಕ್ಷ ಮಾನಸಿಂ ಗನ ಹಿರಿಯ ಮಗನ ಅಪರಾಧದ ವಿಚಾರಣೆಯು ಈ ದಿನದ ದರ್ಬಾರದಲ್ಲಿ ಆಗತಕ್ಕದಿದದ್ದರಿಂದ ಜನರ ಕೌತುಕಕ್ಕೆ ಕಳೆಯೇರಿತ್ತು. ಪಟ್ಟಣದೊಳಗಿನ ಕೆಲವು ಜನರು ಈ ನ್ಯಾಯವಿಚಾರವನ್ನು ಕೇಳುವದಕ್ಕಾಗಿಯೇ ಬುದ್ದಿ ಪೂ ರ್ವಕವಾಗಿ ದರ್ಬಾರಕ್ಕೆ ಬಂದಿದ್ದರು. ದರ್ಬಾರದಲ್ಲಿ ಬರಲಿಕ್ಕೆ ಯಾರಿಗೂ ಪ್ರತಿಬಂಧವಿಲ್ಲದ್ದರಿಂದ ದರ್ಬಾರವು ಜನಸಮೂಹದಿಂದ ಸ್ವಾಭಾವಿಕವಾಗಿಯೇ ತುಂಬಿ ಹೋಗಿತ್ತು, ನಿಯಮಿತವೇಳೆಯಲ್ಲಿ ನೌಬತ್ತು ಬಾರಿಸಹತ್ತಿತ್ತು ಬೇರೆ ವಾದ್ಯಗಳ ಧ್ವನಿಗಳು ನಾಲ್ಕೂ ಕಡೆಗೆ ಪಸರಿಸಿದವು, ವಾದ್ಯಧ್ವನಿ ಗಳು ನಿಂತಕೂಡಲೆ ಮಹಾರಾಜರ ಮಾರ್ಗವನ್ನು ನಿರೀಕ್ಷಿಸುತ್ತ ದರ್ಬಾರದ ಜನರು ಸುಮ್ಮನೆ ಕುಳಿತುಕೊಂಡರು. ಮಹಾ ಪ್ರತಾಪಿಯಾದ ಅಂಬರಾಧೀ ಶ್ವರ ಮಾನಸಿಂಹಮಹಾರಾಜರು ಧೀರಗಂಭಿರಗಮನದಿಂದ ಸಭಾಸ್ಥಾನ ವನ್ನು ಪ್ರವೇಶಿಸಿದರು. ಅವರ ಬೆನ್ನ ಹಿಂದೆಯೇ ಅವರ ಅನುಚರರೂ, ಸೇನಾಪತಿಗಳೂ, ಸಭಾಸದರೂ ಬಂದರು. ಅವರೆಲ್ಲರ ಮೊರೆಗಳು ಬಾಡಿ ಧವು, ಏನಾದರೂ ಭಯಂಕರ ಪ್ರಸಂಗವು ಒದಗುವದೆಂಬ ವಿಚಾರದಿಂದ ಅವರು ದುಃಖಿತರಾಗಿದ್ದರು. ಸಿದ್ಧ ಮಾಡಿದ್ದ ಸಿಂಹಾಸನದಲ್ಲಿ ಮಾನಸಿಂಹ