ಪುಟ:ತಿಲೋತ್ತಮೆ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ತಿಲೋತ್ತಮೆ. ಮಹಾರಾಜರು ಕುಳಿತುಕೊಂಡ ಕೂಡಲೆ, ಉಳಿದವರು ತಮ್ಮ ತಮ್ಮ ಮರ್ಯಾದೆಯಂತೆ ಆಸನಗಳಲ್ಲಿ ಕುಳಿತುಕೊಂಡರು. ಮಾನಸಿಂಹನ ಮುಖ. ದಲ್ಲಿ ಇಂದು ವಿಲಕ್ಷಣವಾದ ಗಾಂಭೀರ್ಯವು ಒಪ್ಪುತ್ತಿತ್ತು. ಸಿಂಹಾಸನ ದಲ್ಲಿ ಕುಳಿತಕೂಡಲೆ ಆತನು-IC ಅಪರಾಧಿಯನ್ನು ತಂದು ನಿಲ್ಲಿಸಿರಿ” ಎಂದು ಆಜ್ಞಾಪಿಸಿದನು. ದರ್ಬಾರದೊಳಗಿನ ಜನರೆಲ್ಲ ಚಂಚಲ ಚಿತ್ತರಾದರು. ಅವರ ಮೊರೆ ಗಳಲ್ಲಿ ಚಿಂತೆಯ ಲಕ್ಷಣಗಳು ಹೆಚ್ಚಿದವು. ಅವರು ತೇಜೋಹಿನರಾಗಿ, ಬಾಗಿಲಕಡೆಗೆ ನೋಡಹತ್ತಿದರು. ಕಾವಲುಗಾರರಿಂದ ಸುತ್ತುಗಟ್ಟಲ್ಪಟ್ಟ ಜಗತ್ನಿಂಗನು ಸಭೆಯಲ್ಲಿ ಬರತೊಡಗಿದನು. ಯಾವತ್ತು ಜನರ ಕಣ್ಣುಗ ಇಲ್ಲಿ ನೀರುಸುರಿಯಹತ್ತಿದವು. ದರ್ಬಾರದಲ್ಲಿ ಅಷ್ಟು ದಟ್ಟಣೆಯಾಗಿದ್ದರೂ ಅಲ್ಲಿ ಶಾಂತತೆಯೂ, ಸ್ತಬ್ದ ತೆಯ ಮೂರ್ತಿಮತ್ತಾಗಿನೆಲೆಗೊಂಡಿದವು.ದರ್ಬಾ ರದಲ್ಲಿ ಗಟ್ಟಿಯಾಗಿ ಮಾತಾಡುವದಂತು ಇರಲಿ, ಬಳಿಯಲ್ಲಿದವರ ಸಂಗಡ ಮೆಲ್ಲನೆ ಮಾತಾಡುವ ಧೈರ್ಯವು ಕೂಡ ಯಾರಿಗೂ ಇಲ್ಲ. ಅಪರಾಧಿ. ಯಾದ ಜಗತ್ತಿ೦ಗನನ್ನು ಮಹಾರಾಜರ ಮುಂದೆ ನಿಲ್ಲಿಸಿದಮೇಲೆ ಅವರು ಮಗನನ್ನು ಕುರಿತು ಗಂಭೀರಸ್ವರದಿಂದ-ಸೆರೆಯಾಳಾದ ಜಗಂಗನೇ, ನೀನು ಮಹಾಪರಾಧಿಯಾಗಿರುವೆ, ನೀನು ನಮ್ಮ ಮನೆತನದ ಸಂಬಂಧ ದಿಂದ, ಹಾಗು ಬಾದಶಹರ ಸಂಬಂಧದಿಂದ ಹೀಗೆ ಎರಡು ಬಗೆಯ ಅಪರಾ ಧಗಳನ್ನು ಮಾಡಿರು, ಮೊದಲು ಮನೆತನದ ಸಂಬಂಧದ ಅಪರಾಧ. ವನ್ನು ವಿಚಾರಿಸಿ ಶಿಕ್ಷೆಯನ್ನು ವಿಧಿಸಿದ ಬಳಿಕ, ನಿನ್ನ ರಾಜಕೀಯ ಅಸರಾ ಧವನ್ನು ವಿಚಾರಿಸುವೆನು, ಎಂದು ಹೇಳಿದನು. ಆಗ ಜಗ೦ಗನು ಏನೂ ಮಾತಾಡದೆ, ಮತ್ತಿಷ್ಟು ತಲೆಬಾಗಿಸಿ ಸುಮ್ಮನೆ ನಿಂತುಕೊಂಡನು. ಅಷ್ಟ ರಲ್ಲಿ ಒಬ್ಬ ವೃದ್ದ ಮೊಗಲಸರದಾರನು ತನ್ನ ಆಸನದಿಂದ ಎದ್ದುನಿಂತು, ಸದ್ದ ತಿಯಂತೆ ಮಾನಸಿಂಹರಾಜನಿಗೆ ವಿನಯದಿಂದ ಮುಜುರೆಮಾಡಿ-ಮಹಾ ರಾಜರು ನನ್ನ ಅಪರಾಧವನ್ನು ಕ್ಷಮಿಸಬೇಕು. ಮನೆತನಕ್ಕೆ ಸಂಬಂಧಿಸಿದ ಕುಮಾರರ ಅಪರಾಧಗಳನ್ನು ಕೂಡಿದ ದರ್ಬಾರದಲ್ಲಿ ವಿಚಾರಿಸುವದು ಯೋಗ್ಯವಲ್ಲ, ವಿಚಾರಮಾಡುವದೇ ಮಹಾರಾಜರ ಮನಸ್ಸಿನಲ್ಲಿದ್ದರೆ, ನಮ್ಮೆ ೪ರಿಗೆ ದರ್ಬಾರದಿಂದ ಹೊರಟು ಹೋಗಲು ಅಪ್ಪಣೆಯಾಗಬೇಕು, ಎಂದು