ಪುಟ:ತಿಲೋತ್ತಮೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಡಿ ನ್ಯಾಯನಿಷ್ಠುರತೆ. ಬೇಡಿಕೊಂಡನು. ಅದಕ್ಕೆ ಮಾನಸಿಂಗನು-ಇಲ್ಲ, ಯಾರೂ ದರ್ಬಾರದಿಂದ ಹೊರಗೆ ಹೋಗುವ ಕಾರಣವಿಲ್ಲ. ಈ ಸೆರೆಯಾಳಿನ ಮನೆತನಕ್ಕೆ ಸಂಬಂಧಿ ಸಿದ ಅಪರಾಧ ತು ಅವನ ರಾಜಕೀಯ ಅಪರಾಧಕ್ಕೆ : ತಿನಿಕಟವಾಗಿ ಸಂಬಂಧಿ ಸಿರುತ್ತದೆ; ಆದ್ದರಿಂದ ಆ ಮೊದಲಿನ ಅಪರಾಧವನ್ನು ವಿಚಾರಿಸುವದೆಂದರೆ -ಈತನ ರಾಜಕೀಯ ಅಪರಾಧವನ್ನು ವಿಚಾರಿಸಿದ ಹಾಗೆಯೇ ಇರುತ್ತದೆ. ಮಹಾರಾಜರ ಈ ಮಾತುಗಳನ್ನು ಕೇಳಿ, ಆ ವೃದ್ದ ಸರದಾರನು ಅಂಪಾಯಗಾಣದೆ ಸುಮ್ಮನೆ ಕುಳಿತುಕೊಂಡನು. ಎಲ್ಲ ಜನರು ಪಾಷಾಣ ಮೂರ್ತಿಗಳ೦ತೆ, ತಮ್ಮ ತಮ್ಮ ಸ್ಥಳಗಳಲ್ಲಿ ಚಲಿಸದೆ ಕುಳಿತುಕೊಂಡುಬಿ ಟ್ಯ ರು. ಇನ್ನು ಮಹಾರಾಜರು ಹೇಗೆ ವಿಚಾರಿಸುವರೆಂಬದರ ಕಡೆಗೆ ಎಲ್ಲರ ಲಕ್ಷವಿತ್ತು, ಆಗ ಮಹಾರಾಜರು - ಮಾನಸಿಂಗ -ಎಲೆ ಅಪರಾಧಿಯೇ, ಈಗ ನಾನು ಕೇಳುವ ಪ್ರಶ್ನೆಗಳಿಗೆ ನೀನು ನಿಜವಾದ ಉತ್ತರಗಳನ್ನು ಕೊಡದಿದ್ದರೆ, ನಿನ್ನ ಅಪರಾಧದ ಸ್ವರೂ ಪವು ಬಹಳ ಭಯಂಕರವಾಗುವದು. ಈ ಜಗತಿ೦ಹ ( ಅಹಂಕಾರದಿಂದ) -ಮಹಾರಾಜರು ಹಿಗೆ ಸೂಚಿಸುವ ಕಾರಣವಿಲ್ಲ. ಜಗತ್ವಿಂಹನ ಮುಖದಿಂದ ಸುಳ್ಳು ಮಾತುಗಳು ಎಂದೂ ಹೊರಡವು. ಮಾನಸಿಂಹ---ಹಿಗೊ? ವೀರೇ೦ದ್ರಸಿಂಹನ ಕೋಟೆಯಲ್ಲಿ ಆತನ ಮನೆಯ ಹೆಂಗಸರೊಡನೆ ಪಠಾಣರು ನಿನ್ನನ್ನು ಸೆರೆಹಿಡಿದಿದ್ದರೊ ಇಲ್ಲವೊ ? ಜಗತ್ವಿಂಹ -ಹೌದು, ಸೆರೆಹಿಡಿದದ್ದು ನಿಜವು. ಮಾನಸಿಂಹ ಪಠಾಣರ ಸೆರೆಯಲ್ಲಿದ್ದಾಗ ನೀನು ಕಾತಲುಖಾನನ ಮಗಳಾದ ಆಯೇಷೆಯನ್ನು ಪ್ರೀತಿಸುತ್ತಿದೆಯೋ ಇಲ್ಲವೋ ? ಜಗಕ್ಸಿಂಹ -ಮಹಾರಾಜರೇ, ಈ ಪ್ರಶ್ನದ ಉತ್ತರವನ್ನು ಸ್ವಲ್ಪದ ರಲ್ಲಿ ಕೊಡಲಿಕ್ಕೆ ನನಗೆ ಬರುವ ಹಾಗಿಲ್ಲ, ಇದಕ್ಕಾಗಿ ನನ್ನನ್ನು ಕ್ಷಮಿಸುವ ದಾಗಬೇಕು. ನಬಾಬ ಕಾತಲುಖಾನನ ಮಗಳು ನನ್ನ ಅತ್ಯಂತ ಹಿತಕ ರ್ತೃವಾಗಿರುವಳು. ಈ ದಿನ ಸೆರೆಯವನಾಗಿಯೇ ಆಗಲೊಲ್ಲದೇ ಕೆ, ನಾನು ತಮ್ಮ ಮುಂದೆ ಜೀವದಿಂದ ಬದುಕಿ ನಿಂತುಕೊಳ್ಳಲಿಕ್ಕೆ ಆ ನಬಾಬ ಕುವ ರಿಯ ದೀರ್ಘ ಪ್ರಯತ್ನವೇ ಕಾರಣವಾಗಿರುವದು, ಗಾಯಹೊಂದಿ ಸೆರೆವು