ಪುಟ:ತಿಲೋತ್ತಮೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ತಿಲೋತ್ತಮೆ. ನೆಯಲ್ಲಿ ನರಳುತ್ತ ಮಲಗಿದ್ದಾಗ ಆ ಆಯೇಷೆಯು, ಹಡೆದತಾಯಿಯಂತೆ, ಬೆನ್ನಿನಲ್ಲಿ ಬಿದ್ದ ತಂಗಿಯಂತೆ, ಮಾಡಿಕೊಂಡ ಹೆಂಡತಿಯಂತೆ ನನ್ನ ಸೇವಾ ಸೂತ್ರಗಳನ್ನು ಮಾಡಿದಳು. ಅದರಿಂದಲೇ ನಾನು ಈಗ ಜೀವಿಸಿರುವೆನು. ಆ ದೇವಿಯ ಮೇಲೆ ನನ್ನ ದೃಢವಾದ ಶ್ರದ್ದೆಯಿರುವದು. ಆಕೆಯನ್ನು ನಾನು ಸಂಪೂರ್ಣವಾಗಿ ವಿಶ್ವಾಸಿಸುವೆನು. ನನಗಿಂತಲೂ ಶ್ರೇಷ್ಠಳೆಂದು ಆಕೆಯನ್ನು ನಾನು ಭಾವಿಸುವೆನು. ಆಕೆಯ ದಯಾಪೂರ್ಣದೃಷ್ಟಿಗಳನ್ನು ನೋಡುವ ಧೈರ್ಯವು ಕೂಡ ನನಗೆ ಆಗುವದಿಲ್ಲ. ಆಕೆಯನ್ನು ನಾನು ಒಬ್ಬ ಪೂಜ್ಯ ದೇವತೆಯೆಂದು ಭಾವಿಸುವೆನು; ಆದರೆ ಗುಣವತಿಯಾದ ಆ ನಬಾಬಕುವರಿಯ ಪ್ರೇಮವು ಅಧಮಾಧವನಾದ ನನ್ನ ಮೇಲೆ ಸಂಪೂರ್ಣ ವಾಗಿ ಕುಳಿತಿರುವದೆಂಬ ಸಂಗತಿಯು ದುರ್ದೈವದಿಂದ ನನಗೆ ಗೊತ್ತಾಗಲು, ನನ್ನ ಎದೆಯು ದಸಕ್ಕೆಂದಿತು; ಶರೀರದಲ್ಲಿ ಕಂಪವು ಉತ್ಪನ್ನವಾಯಿತು. ನನಗೆ ಮೊಹಿಸಿದ್ದರಿಂದ ಆ ಗುಣಸುಂದರ ತರುಣಿಯ ಕೋಮಲ ಹೃದ ಯಕ್ಕೆ ಎಷ್ಟು ವ್ಯಥೆಯಾಗುತ್ತಿರಬಹುದೆಂಬದನ್ನು ನಾನು ಕಲ್ಪಿಸಲಾರೆನು' ಆ ದಯಾಮಯಸುಂದರಿಯ ಪ್ರೇಮಕ್ಕೆ ಪ್ರತಿಯಾಗಿ ನಾನು ಆಕೆಯನ್ನು ಸ್ವಲ್ಪವಾದರೂ ಪ್ರೀತಿಸಿ, ಆಕೆ ಮನಸ್ಸನ್ನು ಸ್ವಲ್ಪಮಟ್ಟಿಗಾದರೂ ಸಮಾ ಧಾನ ಪಡಿಸಲು ಶಕ್ತನಾಗಿದ್ದರೆ, ನನ್ನನ್ನು ಧನ್ಯನೆಂದು ಭಾವಿಸುತ್ತಿದ್ದೆನು; ಆದರೆ ಆಕೆಯ ಮೇಲೆ ನನ್ನ ಪ್ರೀತಿಯೇ ಕುಳಿತುಕೊಳ್ಳಲೊಲ್ಲದು. ನನ್ನ ಮೇಲಿದ್ದ ಆಕೆಯ ಪ್ರೇಮವನ್ನು ಕಡಿಮೆ ಮಾಡಲಿಕ್ಕೆ ಬರುವಹಾಗಿದ್ದರೆ, ಏನಾದರೂ ಮಾಡಿ ನಾನು ಅದನ್ನು ಕಡಿಮೆ ಮಾಡುತ್ತಿದ್ದೆನು; ಆದರೆ ಏನುಮಾಡಿದರೂ ನನ್ನ ಮೇಲಿನ ಆಕೆಯ ಪ್ರೇಮವನ್ನು ಕಡಿಮೆಮಾಡುವ ಹಾಗಿಲ್ಲ. ಮಾನಸಿಂಹ(ತಿರಸ್ಕಾರದ ಸ್ವರದಿಂದ)-ಇದೇಯೋ ನಿನ್ನ ಸತ್ಯಮಾ ಆನೆ ರೀತಿಯು! ಆಯೇಷೆಯಂಥ ಸದ್ದು ಣಪೂರ್ಣಸುಂದರಿಯು ಮನಮುಟ್ಟಿ ಪ್ರೀತಿಸುತ್ತಿರಲು, ಅದಾವ ತರುಣನು ಆಕೆಯನ್ನು ಪ್ರೀತಿಸದೆಯಿದ್ದಾನು? ಜಗತ್ನಿಂಹ, ಇಂಥ ಹುಚ್ಚ ಮಾತಿಗೆ ನಾನು ಮರುಳಾದೇನೆಂದು ನೀನು. ಕಲ್ಪಿಸಿದೆಯಾದರೂ ಹೇಗೆ? ಜಗತ್ಸಂಹ-ಮಹಾರಾಜ, ತಾವು ಸಮರ್ಥರಿರುವಿರಿ; ಶಾಸನಮಾಡು