ಪುಟ:ತಿಲೋತ್ತಮೆ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ ಮಾಡಿದ ಪತ್ನಕ್ಕೆ ನ ಯ ಧರ್ಮಪತ್ನಿಯನ್ನು ಆಕೆಯ ನ್ಯಾಯನಿಷ್ಟುರತೆ. ಲಿಕ್ಕೂ, ಪಾಲನಮಾಡಲಿಕ್ಕೂ ತಮಗೆ ಸಂಪೂರ್ಣ ಅಧಿಕಾರವಿರುವದು; ಆದರೆ ಜಗತ್ತಿಂಗನ ಮುಖದಿಂದ ಅಸತ್ಯವಾಣಿಯು ಮಾತ್ರ ಎಂದಿಗೂ ಹೊರ ಡದು. ಆಯೇಷೆಯ ಮೇಲೆ ನಾನು ಪ್ರೇಮಮಾಡುವದಿಲ್ಲೆಂಬ ಮಾತು ಎಷ್ಟು ಮಾತ್ರವೂ ಸುಳ್ಳಲ್ಲ. * ಮಾನಸಿಂಹ( ಕಠೋರಸ್ವರದಿಂದ )-ಅದಿರಲಿ, ವೀರೇಂದ್ರಸಿಂಹನ ಮಗಳು ತಿಲೋತ್ತಮೆಯು ನಿನ್ನ ಉಪಪತ್ನಿಯಾಗಿರುವಳಲ್ಲವೆ? - ಇದನ್ನು ಕೇಳಿ ಜಗತ್ನಿಂಗನ ಚಿತ್ರವು ಚಂಚಲವಾಯಿತು; ಆತನ ಮೈ ಮೇಲಿನ ಕೂದಲುಗಳು ನೆಟ್ಟಗಾದವು; ಆದರೂ ಆತನು ಧೈರ್ಯತಾಳಿ ತಂದೆಯನ್ನು ಕುರಿತು-'ಮಹಾರಾಜ, ತಾವು ನ್ಯಾಯಾನ್ಯಾಯಗಳನ್ನು ನಿರ್ಣಯಿಸುವಲ್ಲಿ ಪ್ರತ್ಯಕ್ಷ ಧರ್ಮಮೂರ್ತಿಗಳಾಗಿರುತ್ತೀರಿ. ತಾವು ಈಗ ಮಾಡಿದ ಪ್ರಶ್ನೆ ಕ್ಕೆ ನಾನು ಉತ್ತರವನ್ನು ಕೊಡಲಾರೆನು. ವಿರೇಂದ್ರಸಿಂಹನ ಮಗಳು ನನ್ನ ಉಪಪತ್ನಿ ಯಲ್ಲ, ಧರ್ಮಪತ್ನಿ ಯಾಗಿರುತ್ತಾಳೆ. ಪವಿತ್ರ ಮಂತ್ರಾನುಷ್ಠಾನಸಹಿತವಾಗಿ ಅಗ್ನಿ-ಬ್ರಾಹ್ಮಣರ ಸಮಕ್ಷ ನಾನು ಆಕೆಯ ಪ್ರಾಣಿಗ್ರಹಣವನ್ನು ಮಾಡಿ ಆಕೆಯನ್ನು ನನ್ನ ಸಹ ಧರ್ಮಿಣಿಯಾಗಿ ಮಾಡಿಕೊಂಡಿರುತ್ತೆನೆ. ”ಎಂದು ನುಡಿಯುತ್ತಿರಲು, ಮಾನಸಿಂಹನುಅತ್ಯಂತ ಕ್ರುದ್ಧನಾಗಿ- ನರಾಧಮನೇ! ರಜಪೂತ ಕುಲಕಲಂಕನೇ! ನರಕದೊಳಗಿನ ಕೆಟ್ಟ ಹುಳವೇ! ! ! ಈ ಪಾಪವನ್ನು ನನ್ನ ಮುಂದೆ ಉಚ್ಚರಿಸುವಾಗ ನಿನ್ನ ನಾಲಿಗೆಯು ಯಾಕೆ ಕಡಿದು ಬೀಳಲಿಲ್ಲವು? ನಿನಗೆ ನಾಚಿಕೆ ಹೇಗೆ ಬರಲಿಲ್ಲ? ಏನಂದಿ? ವೀರೇಂದ್ರಸಿಂಹನ ಕನೈಯು ನಿನ್ನ ಧರ್ಮಪತ್ನಿ ಯಿರುವಳೇ? ತಿಲೋತ್ತಮೆಯನ್ನು ಉಪಪತ್ನಿಯೆಂದು ನೀನು ಹೇಳಿದ್ದರೆ, ನಿನ್ನ ಆ ಅಪ ರಾಧವನ್ನು ನಾನು ಕ್ಷಮಿಸುತ್ತಿದ್ದೆನು; ಆದರೆ ನೀಚತನದಿಂದ ನೀನು ಆ ಅಧಮವಂಶೋತ್ಪನ್ನ ಳನ್ನು ಧರ್ಮಪತ್ನಿ ಯೆಂದು ಬೊಗಳು! ತಂದೆಯ ಅನುಮತಿಯನ್ನು ಪಡೆಯದೆ, ಆತನ ಆಶೀರ್ವಾದವನ್ನು ಗ್ರಹಿಸದೆ, ಯಾವ ಅಧಮ ಪುತ್ರನು ನೀಚಕುಲೋತ್ಪನ್ನಳಾದ ಕನೈಯೊಡನೆ ವಿವಾಹ ಮಾಡಿ ಕೊಳ್ಳುವನೋ, ಆತನನ್ನು ತ್ಯಜಿಸುವದೇ ಯೋಗ್ಯವಾಗಿರುತ್ತದೆ; ಆದ್ದರಿಂದ ಇಂದಿನಿಂದ ನೀನು ನನ್ನ ಮಗನಲ್ಲ, ನಾನು ನಿನ್ನ ತಂದೆಯಲ್ಲ. ಈವೊ ಆನಿಂದ ನೀನು ಮಾನಸಿಂಹನ ಮಗನೆಂದು ಜನರಮುಂದೆ ಹೇಳಿಕೊಳ