ಪುಟ:ತಿಲೋತ್ತಮೆ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ತಿಲೋತ್ತಮೆ. ಹತ್ತಿದರೆ, ನಿಶ್ಚಯವಾಗಿ ನಿನ್ನನ್ನು ಶೂಲಕ್ಕೇರಿಸುವೆನು. ಸಭೆಯಲ್ಲಿ ಕುಳಿತ ಜನರೆಲ್ಲ ತೆಪ್ಪಗೆ ಮಾನಸಿಂಹನ ಅಪ್ಪಣೆಯನ್ನು ಕೇಳುತ್ತಲಿದ್ದರು, ಅಂಜಿಕೆಯಿಂದ ಅವರು ಮಿಟ್ಟನೆ ಮಿಸುಕದೆ ಸುಮ್ಮನೆ ಕುಳಿತಿದ್ದರು. ಅಷ್ಟರಲ್ಲಿ ಮಾನಸಿಂಹನು ಜಗತ್ತಿಂಗನನ್ನು ಕುರಿತು-ಇನ್ನು ನಿನ್ನ ರಾಜಕೀಯ ಅಪರಾಧದ ವಿಚಾರಣೆಯನ್ನು ಮಾಡಬೇಕಾಗಿರುವದು. ನೀನು ಬಾದಶಹನ ಒಬ್ಬ ಪ್ರಮುಖ ಸೇನಾಪತಿಯಿದು, ನಿನ್ನ ತಲೆಯ ಮೇಲೊಂದು ದೊಡ್ಡ ಜವಾಬದಾರಿಯ ಕೆಲಸವಿರುತ್ತಿರಲು, ಅಕಸ್ಮಾ ತ್ಯಾಗಿ ಒಬ್ಬಾನೊಬ್ಬ ಕಳ್ಳನಂತೆ ಎರಡನೆಯವರ ಕೊಟೆಯೊಳಗೆ, ಆಕ ಟೆಯ ಒಡೆಯನ ಒಪ್ಪಿಗೆಯಿಲ್ಲದೆ ನೀನು ಯಾಕೆ ಹೊಕ್ಕೆ? ಎಂದು ಕೇಳಿ ದನು. ಆಗ ಜಗ೦ಗನು ಸುಮ್ಮನೆ ತಲೆತಗ್ಗಿಸಿ ನಿಂತುಕೊಂಡಿದ್ದನು. ಆತನ ದೃಷ್ಟಿಗಳು ಭೂಮಿಯಕಡೆಗಿದ್ದವು, ಆಗ ಮಾನಸಿಂಹನು ಮಗ ನಿಗೆ(ಐದುಸಾವಿರ ಸೈನ್ಯವನ್ನು ಸಂಗಡ ಕರಕೊಂಡು ಪಠಾಣರನ್ನು ಓಡಿಸುವ ಪ್ರತಿಜ್ಞೆ ಮಾಡಿಯೂ ನೀನು ಕಾರ್ಯಘಾತಮಾಡಿದೆ. ನೀಚ ನಾದ ನೀನು ಸ್ವಾಮಿಯ ಕಾರ್ಯವನ್ನು ಸಾಧಿಸದೆ, ಸ್ವಚ್ಛಂದದಿಂದ ಒಬ್ಬ ಸ್ತ್ರೀಯ ವಿಲಾಸಪಾಶದಲ್ಲಿ ಸಿಕ್ಕಿಕೊಂಡು ಬಿದದ್ದು ಅಪರಾಧವಲ್ಲವೊ? ಅನ್ನ ಲು, ಈ ಮಾತನ್ನು ಕೇಳಿಯೂ ಜಗಕ್ಸಿಂಗನು ಸುಮ್ಮನೆ ನಿಂತುಕೊಂ ಡಿದ್ದನು. ಆಗ ಮಾನಸಿಂಹನು ಮತ್ತೆ ಮಗನನ್ನು ಕುರಿತು --ಪಠಾಣರ ಸೆರೆಮನೆಯಿಂದ ಬಿಡುಗಡೆ ಹೊಂದಿದ ಬಳಿಕಾದರೂ ನೀನು ನಿನ್ನ ಸೈನ್ಯ ವನ್ನು ತಕ್ಕೊಂಡು ನನ್ನ ಬಳಿಗೆ ಬರಬೇಕಾಗಿತ್ತು; ಮತ್ತು ನಿನ್ನ ದಂಡಿನ ಛಾವಣಿಯನ್ನು ಬಿಟ್ಟು ಎರಡನೆಯ ಕಡೆಗಿರುವಾಗ ನೀನು ನನ್ನ ಅಪ್ಪಣೆ ಯನ್ನು ಕೇಳಿಕೊಳ್ಳಬೇಕಾಗಿತ್ತು, ಹೀಗೆ ಯಾಕೆ ಮಾಡಲಿಲ್ಲ? ಎಂದು ಗದ್ದರಿಸಲು, ಆದರೂ ಜಗಂಗನು ಸುಮ್ಮನೆ ನಿಂತುಕೊಂಡಿದ್ದನು. ಆಗ ಪುನಃ ಮಾನಸಿಂಹನು ಮಗನನ್ನು ಕುರಿತು ನಮ್ಮ ಸೈನ್ಯದ ತಳವು ಕಿತ್ತಿದಾಗ ಸೈನ್ಯದ ಪದ್ಧತಿಯಂತೆ ನೀನು ನಮ್ಮ ಸೈನ್ಯದ ಸಂಗಡ ಯಾಕೆ ಬರಲಿಲ್ಲ? ಪರವಾನಿಗೆಯಿಲ್ಲದೆ ಇಷ್ಟು ದಿವಸ ನೀನು ನಿನ್ನ ಸೈನ್ಯ ವನ್ನು ಬಿಟ್ಟು ಮಂದಾರಗಡದಲ್ಲಿ ಯಾಕೆಯಿದೆ? ಎಂದು ಕೇಳಿದನು. ಆದರೂ ಜಗತ್ತಿಂಗನು ಒಂದು ತುಟಿಯನ್ನು ಎರಡು ಮಾಡಲಿಲ್ಲ, ಆಗ