ಪುಟ:ತಿಲೋತ್ತಮೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ್ಯಾಯನಿಷ್ಠುರತೆ. ೫೭ ಮಾನಸಿಂಹನು ಅತ್ಯಂತ ಕೋಧಸಂತಪ್ತನಾಗಿ ಮಗನಿಗೆ-ಎಲೈ ಅಧ ಮಾಧಮಾ, ಮಾತಾಡು, ನಿನ್ನ ೦ಥ ರಾಜದ್ರೋಹಿಗೆ ದೇಹಾಂತ ಪ್ರಾಯ ಶಿತವೇ ಯೋಗ್ಯವಾದ ಶಿಕ್ಷೆಯು”, ಎಂದು ನುಡಿದನು. ನ್ಯಾಯನಿಷ್ಣು ರನಾದ ಮಾನಸಿಂಹನು ಉಚ್ಚರಿಸಿದ ಈ ಕಠೋರ -ವಾದ ಶಿಕ್ಷೆಯನ್ನು ಕೇಳಿ ಸಭಿಕರು ತತ್ತರಿಸಿದರು, ಆಗ ಮೊದಲಿನ ಆವೃದ್ದ ಮೊಗಲಸರದಾರನು ಎದ್ದುನಿಂತು, ಅತ್ಯಂತ ವಿನಯದಿಂದ ಸಲಾಮು ಮಾಡಿ, ಆ ಅಂಬರಾಧೀಶ್ವರನನ್ನು ಕುರಿತು-ಹುಜೂರ, ನಾನು ಒಂದು ಅರ್ಜಿಯನ್ನು ಮಾಡಬೇಕೆಂದು ಇಚ್ಛೆ ಸುತ್ತೆನೆ, ಕುಮಾರರು ತಮ್ಮ ಪುತ್ರರಿರುತ್ತಾರೆ” ಅನ್ನ ಲು, ಮಾನಸಿಂಹನು ಗಂಭೀರಸ್ವರದಿಂದ-ಈ ಅಧಮನಿಗೆ ನನ್ನ ಮಗನೆಂದು ಯಾರು ಅನ್ನುವರು? ನನ್ನ ಮಗನು ಹೀಗೆ ಕರ್ತವ ಹಿನನೂ, ರಾಜದ್ರೋಹಿಯೂ ಆಗಲಾರನು, ಈತನ ಶರೀರ ಸಂಬಂಧವನ್ನು ಕಡಿದುಕೊಳ್ಳುದಕ್ಕಾಗಿಯೇ, ನಾನು ಮೊದಲು ಈತನ ಮನೆತನದ ಸಂಬಂಧದ ಅಪರಾಧದ ವಿಚಾರಣೆಯನ್ನು ಮಾಡಿದೆನು. ಹಾಗೆ ನಾನು ವಿಚಾರಮಾಡಿದಾಗಲೆ ನನಗೆ ಇದ್ದ ಈತನ ಪುತ್ರತ್ವದ ಸಂಬಂ ಧವು ನಷ್ಟವಾಯಿತು, ಎಂದು ಹೇಳಿದನು. ಆಗ ಪುನಃ ಆ ವೃದ್ದ ಮೊ ಗಲಸರದಾರನು ಎದ್ದುನಿಂತು-ಗರೀ ಬಸರವರ, ಹೇಗಿದ್ದರೂ ಕುಮಾರನ ಪಾಲಕರು ತಾವೇ ಇರುತ್ತಿರಿ, ಒಂದು ಪಕ್ಷದಲ್ಲಿ ಅಪರಾಧದ ಮಾನದಿಂದ ತಾವು ವಿಧಿಸಿದ ಶಿಕ್ಷೆಯು ಯೋಗ್ಯವಾಗಿದ್ದರೂ, ಮಹಾರಾಜರು, ದಯಾ ದ್ರ ೯ರಾಗಬೇಕು, ಕುಮಾರರ ವಯಸ್ಸು ತೀರ ಚಿಕ್ಕದಾಗಿರುವದರಕಡೆಗೂ ಲಕ್ಷಕೊಡಬೇಕು ಎಂದು ಬೇಡಿಕೊಂಡನು, ಆಗ ಮಾನಸಿಂಗನು ವಿಚಾರ ಮಗನಾಗಿ ಕೆಲಹೊತ್ತು ಸುಮ್ಮನೆ ಕುಳಿತುಕೊಂಡಮೇಲೆ, ಜಗತ್ತಿಂಗ ನನ್ನು ಕುರಿತು-ಏ! ಉಂಡಮನೆಗಳ ಎಣಿಸುವ ನೀಚನೇ, ಕೃತಘ್ನಾ, ಕೇಳು, ನಿನ್ನ ಅಪರಾಧವನ್ನು ವಿಚಾರಿಸಿದರೆ, ನಿನಗೆ ಮರಣಶಿಕ್ಷೆಯಹೊ ರತು ಬೇರೆ ಶಿಕ್ಷೆಯು ಯೋಗ್ಯವಾದದ್ದಲ್ಲ; ಆದರೂ ನಿನ್ನ ವಯಸ್ಸನ್ನು ನೋಡಿ, ನಿನ್ನ ವಿಷಯವಾಗಿ ದಯಾಲುವಾಗಿ, ಮರಣಪರ್ಯಂತ ಕಾರಾ ಗೃಹಸಾಸದ ಶಿಕ್ಷೆಯನ್ನು ನಿನಗೆ ವಿಧಿಸಿರುತ್ತೇನೆ, ಸೇನಾಪತೀ, ಈ ಅಪ ರಾಧಿಯ ಉಡಿಗೆತೊಡಿಗೆಗಳನ್ನು ಸೆಳೆದುಕೊಂಡು, ನನ್ನ ಎದುರಿಗೆ ಇವನ