ಪುಟ:ತಿಲೋತ್ತಮೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ. ಕೈಕಾಲುಗಳಿಗೆ ಬೇಡಿಗಳನ್ನು ಹಾಕಿ ಸೆರೆಮನೆಗೆ ಎಳೆದುಕೊಂಡು ನಡೆ ಯಿರಿ, ಎಂದು ಆಜ್ಞಾಪಿಸಿದನು, ಮಾನಸಿಂಹನ ಆಜ್ಞೆಯಂತೆ ಕಾರ್ಯ ವಾಗಲಿಕ್ಕೆ ವಿಲಂಬವಾಗಲಿಲ್ಲ. ಜಗ೦ಗನು ಸೆರೆಯಾಳಿನ ಉಡಿಗೆ-ತೊ ಡಿ ಗೆಗಳನ್ನು ಧರಿಸಿದನು. ಆತನ ಕೈಕಾಲುಗಳಿಗೆ ಬೇಡಿಗಳನ್ನು ಹಾಕಿದರು. ದರ್ಬಾರದ ಜನರ ಕಣ್ಣುಗಳಲ್ಲಿ ಅಶ್ರುಗಳುದುರಿದವು! ಯಾವತ್ತು ಸೇನಾ ನಾಯಕರು ಮೋರೆತಗ್ಗಿಸಿದರು, ಕಾವಲುಗಾರರು, ಜಗನ್ಸಿಂಗನನ್ನು ಕಾರಾ ಗೃಹಕ್ಕೆ ಕರಕೊಂಡು ನಡೆದರು. ಬಳಿಕ ಮಾನಸಿಂಹನು ಸಿಂಹಾಸನದಿಂದ ಏಳಲು, ಸಭೆಯ ವಿಸರ್ಜನವಾಯಿತು. --(C)-- ೬ನೆಯ ಪ್ರಕರಣ-ಉಸ್ಮಾನಖಾನನು, •®ದ. ಹೀಗೆ ತನ್ನ ಮಗನಾದ ಜಗ೦ಗನಿಗೆ ಮರಣ ಪಯ ನ೦ತ ಕಾರಾಗೃಹದ ಶಿಕ್ಷೆಯನ್ನು ವಿಧಿಸಿ, ರಾಜಾಮಾನಸಿಂಹನು ತನ್ನ ನ್ಯಾಯ ನಿಷ್ಟುರತೆಯನ್ನು ವ್ಯಕ್ತ ಮಾಡುತ್ತಿರಲು, ಅತ್ತ ಪಠಾಣರು ತಾವು ಮಾನ ಸಿಂಗನೊಡನೆ ಮಾಡಿಕೊಂಡಿದ್ದ ಒಡಂಬಡಿಕೆಯು ಅಪಮಾನಕರವಾದದ್ದೆಂದು ತಿಳಿದು, ಅದನ್ನು ಮುರಿಯುವದಕ್ಕೆ ಯೋಚಿಸುತ್ತಲಿದ್ದರು. ಈ ಕಾಲ ದಲ್ಲಿ ಪಠಾಣರು ಒಡಿಸಾಸ್ರಾಂತದೊಳಗಿನ ಸ್ವರ್ಣಗಡವನ್ನು ತಮ್ಮ ರಾಜ ಧಾನಿಯಾಗಿ ಮಾಡಿಕೊಂಡಿದ್ದರು. ಕಾತಲೂಖಾನನ ಹಿರಿಯಮಗನಾದ ಸುಲೇಮಾನಖಾನನೂ, ಚಿಕ್ಕ ಮಗನಾದ ಉಸ್ಮಾನಖಾನನೂ, ಸಾಕುಮ ಗಳಾದ ಆಯೇಷೆಯೂ ಆ ರಾಜಧಾನಿಯಲ್ಲಿ ವಾಸಿಸುತ್ತಿದ್ದರು. ಒಡಂಬಡಿಕೆ ಯಾಗಿ ಯುದ್ಧವು ನಿಂತುಹೋದದ್ದರಿಂದ ರಾಜಧಾನಿಯೊಳಗಿನ ಜನರು ಸಮಾಧಾನದಿಂದ ಕಾಲಹರಣಮಾಡುತ್ತಿದ್ದರು. ಕಾತಲುಖಾನನ ಇಬ್ಬರು ತರುಣ ರಾಜಕುಮಾರರಲ್ಲಿ ರಾಜ್ಯದ ವಿಷಯವಾಗಿ ಕಲಹವು ಉತ್ಪನ್ನ ವಾಗಬಾರದೆಂದು, ಮಾನಸಿಂಗನು ಖ್ಯಾ ಜಾಇಸಾಖಾನನೆಂಬ ಚತುರನಾದ