ಪುಟ:ತಿಲೋತ್ತಮೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಸ್ಮಾನಖಾನನು ೫೯ ವೃದ್ಧನನ್ನು ಮುಖ್ಯ ವಜೀರನನ್ನಾಗಿ ನಿಯಮಿಸಿ, ಯಾವತ್ತು ರಾಜ್ಯ ಕಾರಭಾರವನ್ನು ಆತನಿಗೆ ಒಪ್ಪಿಸಿದ್ದನು. ಖ್ಯಾಜಾಇಸಾಖಾನನ ದಕ್ಷತೆಯ ಕಾರಭಾರದಿಂದ ಎಲ್ಲಿಯೂ ಅಸಂತೋಷವು ತೋರಿಬರದೆ, ರಾಜ್ಯದಲ್ಲಿ ಸುಖ-ಶಾಂತಿಗಳು ನೆಲೆಗೊಳ್ಳಹತ್ತಿದ್ದವು, ಆದರೆ ಕಾತಲುಖಾನನ ಇಬ್ಬರು ಮಕ್ಕಳ ಸ್ವಭಾವವು ಪರಸ್ಪರ ಅತ್ಯಂತ ವಿರುದ್ದವಾಗಿದ್ದದರಿಂದ, ಈ ಸುಖಶಾಂತಿಗಳು ಸಿರವಾದಾವೆಂಬ ಲಕ್ಷಣವು ತೋರುತ್ತಿಲ್ಲ. ಹಿರಿಯನಾದ ಸುಲೇಮಾನಖಾನನು ಅತ್ಯಂತ ವಿಷಯಾಸಕ್ತನಾಗಿದ್ದನು. ತರತರದ ಮದ್ಯ ಗಳನ್ನು ಕುಡಿಯುವದರಲ್ಲಿಯೂ, ವೇ ರೈಯರ ಸಹವಾಸದಲ್ಲಿಯೂ ಅವನ ಕಾಲಹರಣವಾಗುತ್ತಿತ್ತು, ಹೀಗೆ ವಿಷಯ ಲೋಲುಪತೆಯಲ್ಲಿ ಆಯುಷ್ಯ. ವನ್ನು ಕಳೆಯುವದೆ ತನ್ನ ಆಯುಷ್ಯದ ಸಾರವೆಂತಲೂ, ಇದೇ ಸುಖದ ಪರಮಾವಧಿಯೆಂತಲೂ ಆತನು ತಿಳಿದಿದನು, ತನ್ನ ಸುಖಸಾಧನದ ಪದಾ ರ್ಥಗಳನ್ನೆಲ್ಲ ಆತನು ಪ್ರಯತ್ನಪೂರ್ವಕವಾಗಿ ಸಂಗ್ರಹಿಸಿಕೊಂಡು, ಅವು. ಗಳ ಉಪ ಭೋಗದಲ್ಲಿ ರಾಜ್ಯಕಾರಭಾರದ ಕಡೆಗೆ ಹಣಿಕಿಸಹ ನೋಡದಾ ದನು. ಆದರೆ ಅಣ್ಣನ ಈ ಸ್ಥಿತಿಯು ಉಸ್ಮಾನಖಾನನಿಗೆ ಸೇರುತ್ತಿದ್ದಿಲ್ಲ. ಹೀಗೆ ವಿಷಯಾಸಕ್ತತೆಯಿಂದ ಕಾಲಕಳೆಯುವದು ತೀರ ಅಯೋಗ್ಯವೆಂದು ಆತನು ತಿಳಿಯುತ್ತಿದ್ದನು. ಆತನ ಈ ತಿಳುವಳಿಕೆಗೆ ಒಪ್ಪುವಂತೆ ಆತನ ನಡತೆಯು ಅತ್ಯಂತ ತೇಜಸ್ವಿಯಾಗಿತ್ತು, ಪಠಾಣಕುಲದಲ್ಲಿ ಹುಟ್ಟಿ ಸಮರಪಾಂಡಿತ್ಯವನ್ನು ತೋರಿಸದೆ, ತರುಣಸೀಯರ ಮುತ್ತಿಗೆಯಿಂದ ತೇ ಜೋಹೀನನಾಗುವದು ಅತ್ಯಂತ ನೀಚತನವೆಂದು ಆತನು ತಿಳಿಯುತ್ತಿದ್ದನು! ಈ ತಿಳುವಳಿಕೆಯ ಮೂಲಕ ಉಸ್ಮಾನನು ಬಹುಕಷ್ಟದಿಂದ ಕಾಲ ಹರಣಮಾಡುತ್ತಿದ್ದನು. ಮೊಗಲರು ಚಕ್ರವರ್ತಿಗಳಾಗಿ ದಿಲ್ಲಿಯಲ್ಲಿ ಆಳು ವದನ್ನು ನೋಡಿ ಆತನ ಅಂತಃಕರಣವು ವ್ಯಥಿತವಾಗುತ್ತಿತ್ತು, ಮೊಗಲ ರಿಗಿಂತ ಮೊದಲು ಪಠಾಣರೇ ಹಿಂದೂ ಜನರನ್ನು ಗೆದ್ದು, ದಿಲ್ಲಿಯ ಬಾದಶಾಹಿಯ ಪದವಿಯನ್ನು ಸಂಪಾದಿಸಿ ನೂರಾರು ವರ್ಷ ಆಳಿದರೆಂಬ. ಮಾತನ್ನು ಆತನು ಮರೆತಿದ್ದಿಲ್ಲ. ಮೊಗಲಬಾದಶಹರ ಮೂಲಪುರುಷ ನಾದ ಬಾಬರಶಹನು ಪಠಾಣರನ್ನು ಗೆದ್ದು ಬಾದಶಾಹಿಯ ಪದವಿಯನ್ನು ತಾನು ಕಸಿದುಕೊಂಡಿದ್ದರೂ, ಮೊಗಲರ ಈ ಕೃತಿಯು ಉಸ್ಮಾನನ ಅಭಿ,