ಪುಟ:ತಿಲೋತ್ತಮೆ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ತಿಲೋತ್ತಮೆ. ಮಾನದ ಸ್ವಭಾವದ ದೃಷ್ಟಿಯಿಂದ ನ್ಯಾಯ್ಯವಾಗಿ ತೋರುತ್ತಿದ್ದಿಲ್ಲ. ಕಾಲ ಮಹಿಮೆಯಿಂದ ಪಠಾಣರ ವರ್ಚಸ್ಸು ದುರ್ದೈವದಿಂದ ಕಡಿಮೆಯಾದರೂ, ಹಿಂದುಸ್ಥಾನದ ಬಾದಶಾಹಿಯ ಪದವಿಯ ಉಪಭೋಗದ ಹಕ್ಕು ಅವ ರಿಗೇ ಇರತಕ್ಕದ್ದೆಂದು ಉಸ್ಮಾನನು ತಿಳಿಯುತ್ತಿದ್ದನು. ಪ್ರಯತ್ನ ಮಾಡಿ ದರೆ, ಪುನಃ ಪಠಾಣರ ಭಾಗೋದಯವಾಗಿ, ಅವರು ಮತ್ತೆ ಬಾದ ಶಾಹಿಯ ಪದವಿಯನ್ನು ಯಾಕೆ ಪಡೆಯಲಿಕ್ಕಿಲ್ಲೆಂದು ಆತನು ತನ್ನೊ ಇಗೆ ಕೇಳಿಕೊಳ್ಳುತ್ತಿದ್ದನು, ಈಗಿನ ಹೀನಾವಸ್ಥೆಯಲ್ಲಿ ಕೊಳೆಯುತ್ತ ಬಿದ್ದು ಕೊಳ್ಳುವದು ಹೇಡಿತನದ ಲಕ್ಷಣವೆಂದು ಉಸ್ಮಾನನು ಗಟ್ಟಿಮುಟ -> ಯಾಗಿ ತಿಳಕೊಂಡಿದ್ದನು; ಆದ್ದರಿಂದ, ಮಾನಸಿಂಗನೊಡನೆ ಆದ ಒಡಂಬ ಡಿಕೆಯಿಂದ ಆತನು ತೀರ ಅಸಂತುಷ್ಟನಾಗಿದ್ದನು, ಮಾನಸಿಂಹನ ಒಡಂ ಬಡಿಕೆಯನ್ನು ಮುರಿಯುವದು ಅಶಕ್ಯವಲ್ಲೆಂದು ಆತನು ತಿಳಿಯುತ್ತಿದ್ದನು ತನ್ನ ತಂದೆಯಾದ ಕಾತಲುಖಾನನ ಆಕಸ್ಮಿಕ ಮರಣದಿಂದ ನಾಲ್ಕೂ ಕಡೆ ಗುಂಟಾದ ಗೊಂದಲ, ಮಾನಸಿಂಹನ ಪ್ರಚಂಡವಾದ ಯುದ್ಧಸೌರಣೆ ಮೊದಲಾದವುಗಳನ್ನು ವಿಚಾರಿಸಿ, ನಿರ್ವಾಹವಿಲ್ಲದೆ ಆ ತರುಣ ಉಸ್ಮಾನನು ಮಾನಸಿಂಹನೊಡನೆ ಒಡಂಬಡಿಕಮಾಡಿಕೊಂಡಿದ್ದನು. ಆದ್ದರಿಂದ ಈ ಕಾರ ಣಗಳು ನಷ್ಟವಾದ ಕೂಡಲೆ ಒಡಂಬಡಿಕೆಯನ್ನು ಮುರಿಯಬೇಕೆಂದು ಆತನು ಹವಣಿಸುತ್ತಿದ್ದನು. ಈ ಹವಣಿಕೆಯ ಮೂಲಕ ಆತನಿಗೆ ಎಳ್ಳಷ್ಟು ಸಮಾ ಧಾನವಿದಿಲ್ಲ. ಆತನು ಯಾವಾಗಲೂ ಉದಾಸೀನನಾಗಿರುತ್ತಿದ್ದನು. ಉಸ್ಮಾನನ ಈ ಔದಾಸೀನ್ಯಕ್ಕೆ ಆಯೇಷೆಯೂ” ಒಂದು ಕಾರಣ ನಾಗಿದ್ದಳು. ಆ ಲಾವಣ್ಯ ಪ್ರತಿಮೆಯು ಆತನ ಜೀವನ ಸರ್ವಸ್ವವನ್ನು ಹರಣಮಾಡಿದ್ದಳು. ಆ ಸುಂದರಿಯ ತದೇಕಧ್ಯಾನದಲ್ಲಿ ಆ ತರುಣನು ಮಗ್ನ ನಾಗಿರುತ್ತಿದ್ದನು; ಆದರೆ ಆಯೆ ಸೆಯು ಮಾತ್ರ ಉಸ್ಮಾನನನ್ನು ಪ್ರತಿಭಾ ವನೆಯಿಂದ ಪ್ರೀತಿಸದೆ, ಬಂಧುಭಾವನೆಯಿಂದ ಪ್ರೀತಿಸುತ್ತಿದ್ದಳು. ಆ ಲೋ ಕೂತರ ಸುಂದರಿಯು ತನ್ನ ಹೃದಯವನ್ನು ಸಂಪೂರ್ಣವಾಗಿ ಜಗತ್ಸಂ ಗನಿಗೆ ಕೊಟ್ಟು ಬಿಟ್ಟದ್ದನ್ನು ವಾಚಕರು ಬಲ್ಲರು. ಜಗಕ್ಸಿಂಗನು ಆಯೇಷೆ ಯನ್ನು ಪತ್ನಿಭಾವದಿಂದ ಪ್ರೀತಿಸದಿದ್ದರೂ, ಜಗಕ್ಸಿಂಗನಲ್ಲಿದ್ದ ಆಯೇಷೆಯ ಪತ್ನಿ ಭಾವನೆಯು ಎಂದೂ ನಷ್ಟವಾಗದಷ್ಟು ದೃಢವಾಗಿ ಇತ್ತು, ಇಂಥ