ಪುಟ:ತಿಲೋತ್ತಮೆ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬. ಉಸ್ಮಾನಖಾನನು. ಅಲೌಕಿಕ ಯಾದ ಆಯೇಷೆಯನ್ನು ಕಾತಲುಖಾನನ ಮಗಳೆಂದು ಹಿಂದೆ ಯೊಮ್ಮೆ ಹೇಳಿದ್ದು ವಾಚಕರ ಸ್ಮರಣದಲ್ಲಿರಬಹುದು, ಆದರೆ ಆಯೇ ಷೆಯು ಕಾತಲುಖಾನನ ಹೊಟ್ಟೆಯಮಗಳಲ್ಲ, ಆಕೆಯು ಪಠಾಣಕುಲದಲ್ಲಿ ಸಹ ಹುಟ್ಟಿದವಳಲ್ಲ, ಕಾತಲುಖಾನನ ಕಾಶ್ಮೀರದೇಶದ ಬೇಗಮ್ಮಳು, ತನ್ನ ತಮ್ಮನ ಮಗಳಾದ ಆಯೇಷೆಯನ್ನು ಚಿಕ್ಕಂದಿನಿಂದ ಸಂರಕ್ಷಿಸಿ, ಆಕೆ ಯನ್ನು ಮಗಳೆಂದು ತಿಳಿದುಕೊಂಡಿದ್ದಳು; ಆದ್ದರಿಂದ ಅಯೇಷೆಯ ಗುಣ ಗಳಿಗೆ ಲುಬ್ಬನಾಗಿದ್ದ ಕಾತಲುಖಾನನೂ ಆಕೆಯನ್ನು ತನ್ನ ಮಗಳೆಂದು ಭಾವಿಸಿದನು. ಕಾಶ್ಮೀರಿ ಬೇಗನಳು ಮಾಗಲಕುಲದಲ್ಲಿ ಹುಟ್ಟಿದವಳಾಗಿ. ದರೂ, ಪಠಾಣ ಕಾತಲುಖಾನನಿಗೆ ಮರುಳಾಗಿ ಆತನ ಬೇಗನಳಾಗಿದಳು. ಈ ಬೇಗವಳ ಹೊಟ್ಟೆಯಲ್ಲಿ ಮಕ್ಕಳಿಲ್ಲದ್ದರಿಂದ ಆಯೇಷೆಯನ್ನೆ ಆಕೆಯು ಮಗಳೆಂದು ತಿಳಿದುಕೊಂಡಿದ್ದಳು. ಎಲ್ಲ ಜನರು ಆಯೇಷೆಯನ್ನು ನವಾ ಬನ ಮಗಳೆಂತಲೆ ತಿಳಿಯುತ್ತಿದರು. ಆಯೇ ಷೆಯೂ, ಉಸ್ಮಾನನೂ ಸ್ವಲ್ಪ ಹೆಚ್ಚು ಕಡಿಮೆ ಓರಿಗೆಯವರಾಗಿದ್ದರು. ಚಿಕ್ಕಂದಿನಿಂದ ಅವರು ನಬಾಬನ ಮಹಾಲಿನಲ್ಲಿ ಕೂಡಿ ಆಡಿದ್ದರು. ಆಯೇಷೆಯು ರೂಪದಲ್ಲಿ ಅತಿ ಸುಂದ ರಿಯೂ, ಶಿಕ್ಷಣ-ಸಾಹಸಗಳಲ್ಲಿ ಅತಿವಿಖ್ಯಾತಳೂ, ಬುದ್ದಿ ಸಾಮರ್ಥ್ಯಸದ್ಗುಣಗಳಲ್ಲಿ ಅಸಾಧಾರಣಳೂ ಇದ್ದಳು. ಆಕೆಯು ಪ್ರಬುದ್ಧಳಾಗುತ್ತ ಹೋದಂತೆ, ಆಕೆಯ ಮೇಲಿನ ಉಸ್ಮಾನನ ಚಿಕ್ಕಂದಿನ ಪ್ರೇಮವು ರೂಪಾಂ ತರಿಸುತ್ತ ಹೋಗಿ, ಕಡೆಗೆ ಆತನು ಆಯೇ ಷೆಯ ದಾಸನಾದನು; ಆದರೆ ಉಸ್ಮಾನನ ಮೇಲಿನ ಆಯೇಷೆಯ ಚಿಕ್ಕಂದಿನ ಪ್ರೇಮವು ಮಾತ್ರ ಎಷ್ಟು ಮಾತ್ರವೂ ರೂಪಾಂತರವನ್ನು ಹೊಂದಲಿಲ್ಲ! ಸಾಯುವಮೊದಲು ಕಾತಲುಖಾನನು ಆಯೇಷೆಗೆ ವಿಪುಲವಾದ ಸಂಪ ತನ್ನು ಕೊಟ್ಟಿದ್ದನು. ಅಷ್ಟು ಸಂಪತ್ತನ್ನು ಆತನು ತನ್ನ ಹೊಟ್ಟೆ ಯ ಮಕ್ಕಳಿಗೆ ಸಹ ಕೊಟ್ಟಿದ್ದಿಲ್ಲ. ಅಲ್ಲದೆ ಪಂಜಾಬಪ್ರಾಂತದೊಳಗಿನ ತನ ತಂದೆಯ ಜಹಗೀರಿನ ದೊಡ್ಡ ಉತ್ಪನ್ನವು ಆಯೇಷೆಯ ಕೈಸೇರಿತ್ತು. ಉಸ್ಸಾ ನನು ಆಯೆಷೆಯನ್ನು ಮನಮುಟ್ಟಿ ಪ್ರೀತಿಸುತ್ತಿರುವನೆಂಬ ಮಾತು ಕಾತ ಲುಖಾನನಿಗೂ, ಕಾಶ್ಮೀರಿಬೇಗಮಳಿಗೂ ಪೂರಾ ಗೊತ್ತಿತ್ತು. ಆಯೇಷೆಯ ಮಾತು-ಕಥೆಗಳ ಮೇಲಿಂದಲೂ, ನಡತೆ ನಡಾವಳಿಗಳ ಮೇಲಿಂದಲೂ ಆಕೆಯ,