ಪುಟ:ತಿಲೋತ್ತಮೆ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•೬೨ ತಿಲೋತ್ತಮೆ. ಸೇಮವಾದರೂ ಉಸ್ತಾನಖಾನನ ಮೇಲೆಯೇ ಇರುತ್ತದೆಂದು ಜನರು ತಿಳಿದಿ ದ್ದರು. ಆಯೇಷೆಯು ಯಾವಾಗಲೂ ಉಸ್ಮಾನಖಾನನ ಕಲ್ಯಾಣವನ್ನು ಚಿಂತಿಸುತ್ತಿದ್ದಳು. ಆಕೆಯು ಮಹತ್ವದ ಸೂಕ್ಷ್ಮ ಕೆಲಸದಲ್ಲಿ ಉಸ್ಮಾನನಿಗೆ ಆಲೋಚನೆ ಹೇಳುತ್ತಿದ್ದು, ಆತನ ಸುಖ-ದುಃಖಗಳಿಗೂ ಆಕೆಯು ಪಾಲುಗಾ ರಳಾಗಿರುತ್ತಿದ್ದಳು. ಇವುಗಳ ಮೇಲಿಂದ ಜನರು ಉಸ್ಮಾನನನ್ನೇ ಆಯೇ ಷೆಯು ಲಗ್ನ ಮಾಡಿಕೊಳ್ಳವಳೆಂದು ತರ್ಕಿಸಿದ್ದರು; ಆದರೆ ವಸ್ತು ಸ್ಥಿತಿಯು ಇದಕ್ಕೆ ತೀರ ವಿರುದ್ದವಾಗಿತ್ತು, ಹಿಂದೆ ಹೇಳಿದಂತೆ ಆಯೆ~ ಷೆಯು ಉಸ್ಮಾ ನನನ್ನು ತನ್ನ ಒಡಹಟ್ಟದ ಅಣ್ಣನೆಂದು ತಿಳಿದು ಪ್ರೀತಿಸುತ್ತಿದ್ದಳು; ಆದರೆ ಇದು ಯಾರಿಗೂ ಗೊತ್ತಾಗಲಿಲ್ಲ. ಪರಕೀಯರಾದ ಸ್ತ್ರೀ-ಪುರುಷರು ಒಬ್ಬರ ನೊಬ್ಬರು ವಿಶೇಷವಾಗಿ ಪ್ರೀತಿಸಹತ್ತಲು, ವಿಪರೀ ತಭಾವನೆಯಾಗುವದೇ ಲೌಕಿಕದಲ್ಲಿ ಹೆಚ್ಚು, ಆಯೇಷೆಗೆ ಈಗ ವಿಪುಲವಾದ ಸಂಪತ್ತು ಪ್ರಾಪ್ತವಾ ಗಿರುವದರಿಂದ, ಈಗ ಈಕೆಗೂ, ಉಸ್ಮಾನನಿಗೂ ಲಗ್ನವಾದರೆ ಅವರ ಸುಖಕ್ಕೆ ಜೋಡಿಲ್ಲೆಂದು ನಬಾಬ ಕಾತಲುಖಾನನೂ, ಕಾಶ್ಮೀರದ ಬೆ೦ಗನಳೂ ಸಹ ತಿಳಿಯುತ್ತಿದ್ದರು; ಆದರೆ ಕಾತಲುಖಾನನಿಗೆ ತನ್ನ ಈ ತಿಳುವಳಿಕೆಯು ಕೇವಲತಪ್ಪಾದದ್ದೆಂಬದರ ಅನುಭವವಾಗುವದರೊಳಗೇ ಆತನು ಪರಲೋಕಕ್ಕೆ ತೆರಳಿದನು. ತನ್ನ ಮೇಲೆ ಆಯೇಷೆಯ ಪ್ರೇಮವು ಎಷ್ಟು ದೃಢವಾಗಿರುತ್ತ ದೆಂಬದನ್ನು ಉಸ್ಮಾನನು ತಿಳಿದಿದ್ದರೂ, ಆಯೇಷೆಯು ತನ್ನ ಪ್ರೇಮದ ಸ್ವರೂ ಪವನ್ನು ಉಸ್ಮಾನನ ಮುಂದೆ ಸಂಕೋಚವಿಲ್ಲದೆ ಬಿಚ್ಚಿ ಹೇಳಿದ್ದರಿಂದ, ಆತ ನಿಗೆ ಬಹಳ ವ್ಯಸನವಾಗಿತ್ತು. ಹೀಗೆ ವ್ಯಸನಪಡುತ್ತ ಉಸ್ಮಾನನು ಒಂದುದಿನ ಸ್ವರ್ಣಗಡದೊಳಗಿನ ಒಂದು ಭವ್ಯವಾದ ಮಂದಿರದಲ್ಲಿ ಒಬ್ಬನೇ ಕುಳಿತಿದ್ದನು. ದಾರುಣವಾದ ಕೇಶ ಭಾರದಿಂದ ಆತನಿಗೆ ತನ್ನ ಜೀವವು ಬೇಡಾಗಿತ್ತು. ಆಗ ಹೊರಗೆ ಒಂಬತು ತಾಸು ಆಗಿರಬಹುದು, ಅಷ್ಟರಲ್ಲಿ ನಗಾರಿಯು ಬಾರಿಸಹತ್ತಿತು, ಉಸ್ಮಾನನು ತಟ್ಟನೆ ಎದ್ದು ಮಂದಿರದ ಬಾಗಿಲಿಗೆ ಬರುತ್ತಿರಲು, ಉದ್ದಗಡ್ಡದ ವೃದ್ದ ವಜೀ ರನಾದ ಖ್ಯಾ ಜಾಇಸಾಖಾನನು ಆತನಿಗೆ ಇದಿರಾದನು. ಉಸ್ಮಾನನು ವಜೀ ರನ ಆದರಾತಿಥ್ಯವನ್ನು ಉಚಿತವಾಗಿ ಮಾಡಿದನು. ಖ್ಯಾಜಾಇಸಾಖಾನನೂ -ಉಸ್ಮಾನನಿಗೆ ಉಚಿತವಾದ ಮನ್ನಣೆಯನ್ನು ಮಾಡಿದನು. ಉಸ್ಮಾನನು