ಪುಟ:ತಿಲೋತ್ತಮೆ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಸ್ಮಾನಖಾನನು ೬೩ ವಜೀರನ ಕೈಹಿಡಿದು ಒಳಗೆ ಕರಕೊಂಡು ಹೋಗಿ ಆತನನ್ನು ಉಚಿತವಾದ ಆಸನದಲ್ಲಿ ಕುಳ್ಳಿರಿಸಿ ತಾನು ಬಳಿಯಲ್ಲಿ ಕುಳಿತುಕೊಂಡನು. ವಜೀರನು ಕುಳಿ ತಬಳಿಕ ಉಸ್ಮಾನಖಾನನು ಆತನನ್ನು ಕುರಿತು ಉಸ್ಮಾನ-ಏನಾದರೂ ಹೊಸ ಸುದ್ದಿ ಯು ಇರುವದೊ? ಖ್ಯಾಜಾಇಸಾಖಾನ-ಜಗಂಗನ ಕಾರಾಗೃಹದವಾಸದ ಸಂಗತಿಯು ತಮಗೆ ಗೊತ್ತಿರಬಹದು. ಉಸ್ಮಾನ-ಹೌದು, ಅದು ಗೊತ್ತಾಗಿರುವದು; ಅದರಿಂದ ನಮ್ಮ ಲಾಭ ಹಾನಿಗಳೇನಿರುವವು? ಖ್ಯಾ ಜಾಇಸಾಖಾನ-ಯಾಕೆ? ಅದರಿಂದ ಲಾಭಹಾನಿಗಳು ಯಾಕ ಇರುವದಿಲ್ಲ? ಮಾನಸಿಂಗಮಹಾರಾಜರು ನಮ್ಮೊಡನೆ ಮಾಡಿಕೊಂಡಿದ್ದ ಒಡಂಬ ಡಿಕಯು ಅಕಬರಬಾದಶಹರ ಮನಸ್ಸಿಗೆ ಬಂದಿರುವದಿಲ್ಲೆಂದು ಕೇಳುತ್ತೇನೆ; ಆದರೆ ಮಾನಸಿಂಗರವರು ಮಾಡಿದ ಒಡಂಬಡಿಕೆಯನ್ನು ಬಾದಶಹರಿಗೆ ಮುರಿ ಯಲಿಕ್ಕೆ ಬರುವಹಾಗಿಲ್ಲ, ಜಗತ್ತಿ೦ಗನು ನಮ್ಮ ಸೆರೆಯಲ್ಲಿರುವಾಗ ಆತನಿಗೆ ನಾವು ಯಾವಬಗೆಯ ತಾಸವನ್ನೂ ಕೊಡದೆ, ಆತನನ್ನು ಬಹುಮಾನಪೂರ್ವಕ ವಾಗಿ ಸಹಿಸಿಕೊಂಡಿರುತ್ತವೆ. ಈ ಸಂಗತಿಯನ್ನು ಆ ರಾಜಕುಮಾರನು ಅಕಬರಬಾದಶಹೆರ ಮುಂದೆ ಹೇಳಿ ನಮ್ಮೊಡನೆ ಈಗಿದ್ದ ಒಡಂಬಡಿಕೆಯನ್ನು ದೃಢಪಡಿಸಬಹುದಾಗಿತ್ತು, ಈ ಪ್ರಸಂಗದಲ್ಲಿ ಜಗತ್ತಿಂಗನು ಸೆರೆಮನೆಯ ಸೋಬತಿಯಾದದ್ದರಿಂದ, ನಮಗೆ ಒಂದುಬಗೆಯ ಹಾನಿಯಾದಂತಾಗಲಿಲ್ಲವೆ? ಉಸ್ಮಾನ-ವಜೀರಸಾಹೇಬ, ಒಡಂಬಡಿಕೆಯನ್ನು ಸ್ಥಿರಪಡಿಸುವದ ರಲ್ಲಿ ನಮಗೇನು ಲಾಭವು ತೋರುವದಿಲ್ಲ. ನಾವು ಯುದ್ಧ ಮಾಡಿ, ನೀರಿನ ಹಾಗೆ ದುಡ್ಡನ್ನೂ, ಅನಂತ ಪ್ರಾಣಹಾನಿಯನ್ನೂ ಮಾಡಿಕೊಂಡು ಗಳಿಸಿದ ಸಮಗ್ರ ಬಂಗಾಲಪ್ರಾಂತವನ್ನು ಈ ಕೆಟ್ಟ ಒಡಂಬಡಿಕೆಯ ಯೋಗದಿಂದಲೇ ನಾವುಕಳಕೊಳ್ಳಬೇಕಾಯಿತು; ಜನನ್ನಾಥಮಂದಿರವನ್ನೂ, ಪುರಿಪಟ್ಟಣವನ್ನೂ ಮೊಗಲರಿಗೆ ಒಪ್ಪಿಸಬೇಕಾಯಿತು. ಆದ್ದರಿಂದಅತ್ಯಂತಲಜ್ಜಾಸ್ಪದವಾದ ಈ ಒಡಂ ಬಡಿಕೆಯು ವಿಘಾತಕವಾದದ್ದೆಂದು ತಿಳಿಯಬೇಕಾಗುವದು! ಅಕಬರಬಾದಶ ಹನು ಈ ಒಡಂಬಡಿಕೆಯನ್ನು ಮುರಿದರೆ ನೆಟ್ಟಗಲ್ಲವೆ? ಇದಕ್ಕಿಂತ ಆನಂದದಾ ಯಕ ಪ್ರಸಂಗವು ಬೇರೆ ಯಾವದಿರುವದು?