ಪುಟ:ತಿಲೋತ್ತಮೆ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ತಿಲೋತ್ತಮೆ. ಖ್ಯಾಜಾಇಸಾಖಾನ ( ಸ್ವಲ್ಪ ಹೊತ್ತು ಆಲೋಚಿಸಿ ) -ನಾನು ಈ ಸಂಬಂ ಧದಿಂದ ಹುಜೂರಿನ ಸಂಗಡ ವಾದಮಾಡಲು ಇಚ್ಛಿಸುವದಿಲ್ಲ. ತಾವೇ ವಿಚಾರ ಮಾಡಿ ನೋಡತಕ್ಕದ್ದು, ಈಗಿನ ಕಾಲವು ನಮ್ಮ ಪಠಾಣಜನರಿಗೆ ಸ್ವಲ್ಪ ಪ್ರತಿ ಕೂಲವಿದ್ದಂತೆ ಕಾಣುತ್ತದೆ. ಉಸ್ಮಾನ-ನೀವಾಡುವ ಮಾತುನಿಜವಾದದ್ದು, ಮಾನಸಿಂಹನಿಗೆ ಎದು ರಾಗಿ ಕಾದುವಷ್ಟು ಸಾಮರ್ಥ್ಯವು ಈಗ ನಮ್ಮಲ್ಲಿರುವದಿಲ್ಲ; ಅದರೆಅಂಥ ಸಾವು ರ್ಥ್ಯವನ್ನು ಉಂಟುಮಾಡಿಕೊಳ್ಳಲಿಕ್ಕೆ ನಾವು ಎಂದಾದರೂ ಪ್ರಯತ್ನ ಮಾ ಡಿರುವೆವೊ? ಸ್ವಾಜಾ ಇಸಾಖಾನ-ನನ್ನ ಮೈತುಂಬ ಕೆಲಸಗಳಿರುತ್ತವೆ. ಮುಪ್ಪಿನ ಕಾಲದಲ್ಲಿ ಯುದ್ಧದಂಥ ಜವಾಬುದಾರಿಯ ಕೆಲಸವನ್ನು ಮಾಡಲಿಕ್ಕೆ ನನಗೆ ಕೂಡುವದಿಲ್ಲ, ಏನು ಮಾಡಬೇಕು? ಉಸ್ಮಾನ-ನಿಜವು, ನಿಮ್ಮ ವಿಚಾರಪದ್ಧತಿಯು ನಿಮ್ಮ ವಯೋಮಾ ನಕ್ಕೆ ಯೋಗ್ಯವಾದದ್ದಿ ರುತ್ತದೆ. ಮುಪ್ಪಿನಕಾಲದಲ್ಲಿ ಯುದ್ದದಗೊಂದಲದಲ್ಲಿ ಬೀಳದಿರುವದೇ ಯೋಗ್ಯವು, ಒಡಂಬಡಿಕೆಯುಸ್ಥಿರವಾಗಿ, ರಾಜ್ಯದಲ್ಲಿ ನಾಲ್ಕೂ ಕಡೆಗೆ ಶಾಂತತೆಯು ಉಂಟಾಗಬೇಕೆಂದು ನೀವು ಇಚ್ಛಿಸುವದು ಸ್ವಾಭಾವಿಕವು; ಆದರೆ ನನ್ನನ್ನು ಕ್ಷಮಿಸಬೇಕು. ನಾನು ಈ ಒಡಂಬಡಿಕೆಯನ್ನು ಅತ್ಯಂತ ನಿಂದ್ಯವೆಂದು ಭಾವಿಸುತ್ತೇನೆ. ಪ್ರಸಂಗ ಒದಗಿದ ಕೂಡಲೆ ಈ ಒಡಂಬಡಿಕೆ ಯನ್ನು ಒತ್ತಟ್ಟಿಗೆ ಕಟ್ಟಿ ಇಟ್ಟು, ನಾನು ಮೊಗಲರೊಡನೆ ಯುದ್ಧವನ್ನು ಹೂಡುವೆನು; ಆದರೆ ಈಗಿನಿಂದಲೇ ಎಲ್ಲ ಸಿದ್ಧತೆಯನ್ನು ಮಾಡುವದು ಅವ ಶ್ಯವಾಗಿರುವದರಿಂದ, ನಾನು ಅದೇ ಉದ್ಯೋಗದಲ್ಲಿ ತೊಡಗುವೆನು. ಎಲ್ಲ ಸಿದ್ದ ತೆಯು ಸರಿಯಾಗಿ ಆದಬಳಿಕ ತಮಗೆ ತಿಳಿಸುವೆನು. ಖ್ಯಾಜಾಇಸಾಖಾನ-ಈ ಕಾಲದಲ್ಲಿ ಈ ವಿಷಯವನ್ನು ಕುರಿತು ಯೋಗ್ಯ ಆಲೋಚನೆಯನ್ನು ಹೇಳಲಿಕ್ಕೆ ನಾನು ತೀರ ಅಸಮರ್ಥನು, ಮಾನ ಸಿಂಗಮಹಾರಾಜರವರು ಯಾತ್ರೆಯ ಸಲುವಾಗಿ ಪುರಿಗೆ ಬರುತ್ತಿರುರೆಂಬ ಸುದ್ದಿ ಯಿರುತ್ತದೆ. ಉಸ್ಮಾನ-ಕಾಫರರಾದ ಹಿಂದುಗಳು ಕಲ್ಲಿನ ಮೂರ್ತಿಗಳನ್ನು ದೇವ ರೆಂದು ಪೂಜಿಸುವರು; ಆದರೆ ಮೊಗಲರ ಬೀಗನಾದಮಾನಸಿಂಗನೂ ಇಂಥ