ಪುಟ:ತಿಲೋತ್ತಮೆ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ಉಸ್ಮಾನಖಾನನು. 5 ಮೂರ್ತಿಪೂಜೆಯಸಲುವಾಗಿ ಬರುತ್ತಿರುವನೆಂಬ ಮಾತು ಹೇಗೆ ಸಂಭವ ವಾಗಿರುವದು? ಸ್ವಾಜಾಇಸಾಖಾನ-ಮಾನಸಿಂಗರವರು ಒಳ್ಳೆ ವೈಭವದಿಂದ ಯಾತ್ರೆ ಗೆಬರುತ್ತಿರುವರೆಂಬ ಸುದ್ದಿ ಯಂಡು ಬಂದಿದೆ. ಉಸ್ಮಾನ-ಬರಲಿ, ಒಡಂಬಡಿಕೆಯಂತೆ ನಾವು ಪುರಿಯನ್ನು ಮೊಗಲ ರಿಗೆ ಬಿಟ್ಟು ಕೊಟ್ಟಿರುತ್ತೇವೆ. ಅಂದಬಳಿಕ ಬಂಗಾಲದ ಸುಬೇದಾರನಾದ ಮಾನಸಿಂಗನು ವೈಭವದಿಂದಾದರೂ ಬರಲಿ, ಬಿಕ್ಕೆ ಬೇಡುತ್ತಾದರೂ ಬರಲಿ; ಅದರ ಗೊಡವೆ ನಮಗೇನು? ಸ್ವಾಜಾಇಸಾಖಾನ-ಹೀಗೆಂದರೆ ಹೇಗಾದೀತು? ನಾವು ಮೊಗಲರ ಮಾಂಡಲಿಕತ್ವವನ್ನು ಒಪ್ಪಿಕೊಂಡಿರುವದರಿಂದ, ಮಾನಸಿಂಗರವರು ನಮ್ಮ ಒಡಿಸಾ ಪ್ರಾಂತದೊಳಗಿಂದ ಹಾದು ಹೋಗುವಾಗ, ನಮ್ಮ ಪ್ರಾಂತದ ಹದ್ದು ಮುಗಿಯುವವರೆಗೆ ಅವರ ಆದರಾತಿಥ್ಯವನ್ನು ನಾವು ಸರಿಯಾಗಿ ಮಾಡಿ, ನಾವು ಅವರ ಸಂಗಡ ಹೋಗಬೇಕಾಗುವದು ಮಾನಸಿಂಗ ಮಹಾರಾಜರ ವರು ಅಕಬರಬಾದಶಹರ ಪ್ರತಿನಿಧಿಗಳಾದದ್ದರಿಂದ, ಮಾನಸಿಂಗರವರಿಗಾದ ಮಾನಾಪಮಾನಗಳು ಅಕಬರಬಾದಶಹರಿಗೆ ಸಂಬಂಧಿಸುವವು. - ಈ ಮಾತುಗಳನ್ನು ಕೇಳಿ ಉಸ್ಮಾನಖಾನನು ಕುಳಿತವನು ಎದ್ದು ನಿಂತು, ಇತ್ತಿಂದತ್ತ ಅತ್ತಿಂದಿತ್ತ ಓಡಾಡಹತ್ತಿದನು. ಕೆಲಹೊತ್ತಿನ ಮೇಲೆ ಆತನು ಸಂತಾಪದಿಂದ ವಜೀರನನ್ನು ಕುರಿತು ಇಷ್ಟು ಅಪಮಾನವು ನನ್ನಿಂದ ಎಷ್ಟು ಮಾತ್ರವೂ ಸಹನವಾಗಲಿಕ್ಕಿಲ್ಲ. ಮಾನಸಿಂಗನು ಶೂರನಿರಬಹುದು, ಬಹಾದೂರನಿರಬಹುದು, ಆತನ ಮೇಲೆ ಅಕಬರಬಾದಶಹನ ಸಂಪೂರ್ಣ ಭಾರವೂ ಇರಬಹುದು; ಆದರೆ ಇಷ್ಟು ಇದ್ದರೂ ನಾವು ಆತನನ್ನು ಅಕಬರ ಬಾದಶಹನ ಗುಲಾಮನೆಂತಲೇ ತಿಳಿಯುವೆವು! ಸದ್ಯಕ್ಕೆ ನಾವು ಬಲಹೀನರಾ ಗಿದ್ದರೂ ಸ್ವತಂತ್ರರಿರುತ್ತೇವೆ. ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವದ ಕ್ಕಾಗಿ, ತನ್ನ ಪ್ರತ್ಯಕ್ಷ ತಂಗಿಯನ್ನು ಅಕಬರಬಾದಶಹನ ಮನೆಹೊಗಿಸಿ, ತನ್ನ ಧರ್ಮದ, ಹಾಗು ಕುಲದ ಗೌರವವನ್ನು ಕಳಕೊಂಡ ಆ ಮಾನಸಿಂಗನ ಮುಂದೆ ಉಸ್ಮಾನಖಾನನು ತನ್ನ ಮಸ್ತಕವನ್ನು ಎಂದಿಗೂ ಬಾಗಿಸಲಾರನು. ಈಗ ನಮಗೆ ವಿಪರೀತ ಕಾಲವು ಒದಗಿರುವದು; ಒದಗಲೊಲ್ಲದೇಕೆ? ನಾವು