ಪುಟ:ತಿಲೋತ್ತಮೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ತಿಲೋತ್ತಮೆ. ಇಂದಿನವರೆಗೆ ಯುದ್ಧ ಮಾಡುತ್ತಲೇ ಬಂದಿದ್ದೇವೆ: ಆದ್ದರಿಂದಲೇ ನಾವು ಸ್ವತಂ ತ್ರರಿರುತ್ತೇವೆ. ಜಯಾಪಜಯಗಳು ಯಾರ ಸ್ವಾಧೀನವೂ ಅಲ್ಲ; ಆದ್ದರಿಂದ ಓಡಿಸಾದ ಸ್ವತಂತ್ರ ರಾಜನು ಮಾನಸಿಂಗನಂಥ ಅಕಬರಬಾದಶಹನ ಗುಲಾ ಮನ ಜೋಡುಗಳನ್ನು ತಲೆಯಮೇಲೆ ಇಟ್ಟು ಕೊಂಡು ಕುಣಿಯಲಿಕ್ಕೆ ಎಂದೂ ಇಚ್ಛಿಸುವದಿಲ್ಲ. ಖ್ಯಾಜಾಇಸಾಖಾನ-ಮಾನಸಿಂಗರವರ ಕಡೆಯಿಂದ ಒಂದು ಪತ್ರವೂ ಬಂದಿರುತ್ತದೆ. ಈಮೇರೆಗೆ ನುಡಿದ ಸ್ವಾಜಾಇಸಾಖಾನನು ಒಂದು ಪತ್ರವನ್ನು ಉಸ್ಮಾ ನಖಾನನ ಕೈಯಲ್ಲಿ ಕೊಟ್ಟನು. ಅದನ್ನು ಮಾನಸಿಂಹನು ಖ್ಯಾ ಜಾಇಸಾ ಖಾನನ ಹೆಸರಿನಿಂದ ಬರೆದಿದ್ದನು. ಆ ಪತ್ರದ ಮುಖ್ಯ ಆಶಯವು_“ಮಾನ ಸಿಂಹಮಹಾರಾಜರು ತೀರ್ಥಯಾತೆ ಯನ್ನು ಮಾಡುತ್ತ ಪುರುಷೋತ್ಯಮ ಕ್ಷೇತ್ರಕ್ಕೆ ಹೋಗುವರು, ಅವರ ಹಾದಿಯು ಒಡಿಸಾಪ್ರಾಂತದಸೀಮೆಯಲ್ಲಿಯೆ ಇರುವದು, ಮಹಾರಾಜರು ಒಡಿಸಾಮ್ರಾಂತದೊಳಗಿಂದ ಹಾದು ಹೋಗುವಾಗ ಒಡಿಸಾದಇಬ್ಬರು ನವಾಬರೂ ಅವರನ್ನು ಕಾಣುವರೆಂದು ಆಶಿಸಲಾಗುವದು” ಎಂಬದಾಗಿತ್ತು.ಉಸ್ಮಾನನು ಪತ್ರವನ್ನು ಓದಿವಜಿ: ರನ ಕೈಯಲ್ಲಿ ಕೊಟ್ಟು, ಉಸ್ಮಾನ-ಇಂದು ವಿಚಾರಮಾಡಿ, ಇದರ ಬತ್ರವನ್ನು ನಾಳೆ ಕೊಡುವೆನು. ಖ್ಯಾ ಜಾಇಸಾಖಾನ-ಆಗಬಹುದು, ನಾನು ಇನ್ನು ಹೋಗುತ್ತೇನೆ; ಆದರೆ ಹೋಗುವಾಗ ತಮಗೆ ಸೂಚಿಸುವದೇನಂದರೆ-ಮಾನಸಿಂಹಮಹಾ ರಾಜರು ಕೇವಲ ಜಗಕ್ಸಿಂಗನ ಮಾತಿನಿಂದಲೇ ಪಾಟಣಾದ ಒಡಂಬಡಿಕೆ ಯನ್ನು ಮಾಡಿಕೊಂಡಿರುತ್ತಾರೆ. ಈ ಒಡಂಬಡಿಕೆಯಿಂದಲೇ ನಾವು ಒಡಿ ಸಾದ ನವಾಬಗಿರಿಯನ್ನು ಒಪ್ಪಿಕೊಳ್ಳುವದರ ಕೂಡ ಮೊಗಲರ ಸ್ವಾಮಿತ್ವ ವನ್ನೂ ನಾವು ಒಪ್ಪಿಕೊಳ್ಳಬೇಕಾಗುವದು. ಒಡಂಬಡಿಕೆಯ ಕಾಲದಲ್ಲಿ ನಾವೇ ಕಾಣಿಕೆಯನ್ನು ತಕ್ಕೊಂಡು ಮಾನಸಿಂಹಮಹಾರಾಜರ ಬಳಿಗೆ ಹೋಗಿದ್ದೆ ವು. ಮಾನಸಿಂಹರವರುಎಂಥ ಮನುಷ್ಯರಿದ್ದರೂ, ನಾವಾಗಿಯೇ ಅವರೊಡನೆಒಡಂಬ ಡಿಕೆ ಮಾಡಿಕೊಂಡಿರುತ್ತೇವೆಂಬದನ್ನು ಮರೆಯಲಾಗದು, ದಿಲ್ಲೀಶ್ವರನ ಹಸ್ತ ಕರಾಗಿ ಬಡಿಸಾದ ರಾಜ್ಯ ಕಾರಭಾರಮಾಡಲು ನಾವು ಒಡಂಬಡಿಕೆ ಮಾಡಿಕೊಂ