ಪುಟ:ತಿಲೋತ್ತಮೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ತಿಲೋತ್ತಮೆ. ಖಾನರವರು ಇದೇ ಮಾನಸಿಂಹನನ್ನು ಗೆದ್ದು, ಆತನ ಮಗನನ್ನು ಸೆರೆಹಿ ಡಿದು ಬಂಗಾಲದೊಳಗಿನ ವಿಷ್ಣು ಪುರದವರೆಗೆ ತಮ್ಮ ಅಧಿಕಾರವನ್ನು ಸ್ಥಾಪಿ ಸಿದ್ದಿಲ್ಲವೆ? ಜಗತ್ಸಂಗವನ್ನು ನಾವಾಗಿ ಬಂಧಮುಕ್ತಮಾಡದಿದ್ದರೆ, ಮಾನ ಸಿಂಹನು ಎಷ್ಟು ಕಷ್ಟ ಪಡಬೇಕಾಗುತ್ತಿತ್ತು! ಆದರೆ ಏನು ಮಾಡಬೇಕು; ಹಿರಿಯರು ಅಕಸ್ಮಾತ್‌ ಮರಣಹೊಂದಿದ್ದರಿಂದ, ಎಲ್ಲ ಕೆಲಸವು ಕೆಟ್ಟು ಹೋಯಿತು! ಇಲ್ಲದಿದ್ದರೆ ನಮ್ಮ ಉಪಟಲಕ್ಕೆ ಮಾನಸಿಂಹನು ಕಾಲುದೆಗೆಯ ಬೇಕಾಗುತ್ತಿತ್ತು, ಎಲ್ಲ ಬಂಗಾಲಪ್ರಾಂತವು ನಮ್ಮ ಆಧೀನವಾಗುತ್ತಿತ್ತು: ಹಿರಿಯರ ಮರಣದಿಂದ ನಮಗೆ ಅಸಮಾಧಾನವಾಗಿರಲು, ಇಂಥ ಪ್ರಸಂಗದಲ್ಲಿ; ಪ್ರಬಲ ಶತ್ರುವಿನೊಡನೆ ಕಾದುವದು ಯೋಗ್ಯವಲ್ಲೆಂದು ತಿಳಿದು ನಾವು ಒಡಂ ಬಡಿಕೆಯನ್ನು ಮಾಡಿಕೊಂಡಿರುವದಿಲ್ಲ. ಯುದ್ಧಕ್ಕೆ ಹೆದರುವದು ಪಠಾ ಣರ ಶೀಲವೇ ಅಲ್ಲ. ಯುದ್ಧಕ್ಕೆ ಪಠಾಣರು ಎಂದೂ ವಿಮುಖರಾಗಲಾರರು. ಮೊಗಲರ ಚಂಡುಗಳನ್ನು ಕೊಯ್ಯಲಿಕ್ಕೆ ಅವರು ಎಂದೂ ಹಿಂದುಮುಂದು ನೋಡಲಾರರು, ತನ್ನ ಮಗನಾದ ಜಗತ್ನಿಂಗನನ್ನು ಅತ್ಯಂತ ಔದಾರ್ಯ ದಿಂದ ತನ್ನ ಬಿಡಾರಕ್ಕೆ ಕಳಿಸಿಕೊಟ್ಟಿರಲು, ಮಾನಸಿಂಗನು ನಮ್ಮನ್ನು ಕೇವಲ ಮೊಗಲರ ಮಾಂಡಲಿಕರಾಗಮಾಡಿದ್ದು ಉಚಿತವಲ್ಲ. ಇಂದಿನ ಪತ್ರ ದಲ್ಲಿ ನಮಗೆ ಆಜ್ಞಾಪತ್ರವನ್ನು ಬರೆದಂತೆ ಬರೆಯದೆ, ಆತನು ನಮಗೆ (ನಾವು ಓಡಿಸಾದೊಳಗಿಂದ ಯಾತ್ರೆಗೆ ಹೋಗುತ್ತೇವೆ; ಹೊಸ ನವಾಬರಿ ಬ್ಲರೂ ನಮ್ಮನ್ನು ಕಂಡು ಸಂತೋಷಪಡಿಸಬಹುದೆಂದು ಇಚ್ಚಿಸುವೆವು * ಎಂದು ಬರೆದಿದ್ದರೆ, ಎಷ್ಟೋ ಸೌಮ್ಯವಾಗುತ್ತಿತ್ತು; ನಾವು ಅವಶ್ಯವಾಗಿ ಕಾಣಿ ಕೆಯನ್ನು ತಕ್ಕೊಂಡು ಬೆಟ್ಟಿಗೆ ಹೋಗುತ್ತಿದ್ದೆವು; ದಿನದಿನಕ್ಕೆ ಪರಸ್ಪರರಲ್ಲಿ ಪ್ರೇಮದೃದ್ಧಿಯೂ ಆಗಬಹುದಾಗಿತ್ತು; ಆದರೆ ಉನ್ನತ ಮಾನಸಿಂಗನು ಹಾಗೆ ಯಾಕೆ ಮಾಡುವನು? ಆಗಲಿ, ಆತನ ಉನ್ಮತ್ತತನಕ್ಕೆ ನಾವಾದರೂ ಯಾಕೆ ಸೊಪ್ಪುಹಾಕಬೇಕು? ನಮ್ಮ ಅಣ್ಣನಾದ ಸುಲೇಮಾನಖಾನನಂತು ಕೇವಲ ವಿಷಯಾಸಕ್ತನು. ಆತನಿಗೆ ರಾಜ್ಯಕಾರಭಾರದ ಗೊಡವೆಯೇ ಬೇಡ. ಆತನು ಮಾನಸಿಂಹನ ಬೆಟ್ಟಿಗೆ ಹೋಗುವಹಾಗಿಲ್ಲ. ಹೋದರೆ ನಾನು ಹೋಗ ಬೇಕು, ಈ ಮಾತಂತು ಆಗುವಹಾಗಿಲ್ಲ. ಯಾವನಾದರೂ ಒಬ್ಬ ಯೋಗ್ಯ ಅಧಿಕಾರಿಯನ್ನು ನಿಯಮಿಸಿ, ಮಾನಸಿಂಹನ ಯೋಗಕ್ಷೇಮವನು