ಪುಟ:ತಿಲೋತ್ತಮೆ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೯ ಕೃಷ್ಣ ಸರ್ಪವು. ತಕ್ಕೊಂಡರಾಯಿತು. ನಜರಾಣೆಯನ್ನು ಮಾತ್ರ ಕಳಿಸುವದಿಲ್ಲ; ಆದರೆ ಇದೆಲ್ಲ ಸರಿ. ಆಯೇಷೆಯು ಜಗಕ್ಸಿಂಗನಿಗೆ ತನ್ನನ್ನು ಒಪ್ಪಿಸಿರುವಳಲ್ಲ ಇದಕ್ಕೇನು ಮಾಡಬೇಕು? ಜಗತ್ತಿಂಗನು ಆಯೇಷೆಯನ್ನು ಪ್ರೀತಿಸದಿರು ವದು ಇದ್ದದ್ದರಲ್ಲಿ ನೆಟ್ಟಗೆಂದು ತಿಳಿಯಬೇಕಾಗುತ್ತದೆ, ಆದರೆ ಯಾತರನೆಟ್ಟಗೆ? ಜಗತ್ಸಂಗನು ಜೀವದಿಂದಿರುವವರೆಗೆ ಆಯೇಷೆಯು ಅನ್ಯರಿಗೆ ತನ್ನ ಹೃದಯ ವನ್ನು ಕೊಡುವಹಾಗಿಲ್ಲ. ಜಗಕ್ಸಿಂಗನು ನಮ್ಮ ಕೈಯಲ್ಲಿ ಸಿಕ್ಕಿದ್ದಾಗೇ ಆತ ನನ್ನು ಕೊಂದುಬಿಟ್ಟಿದ್ದರೆ, ಎಷ್ಟು ನೆಟ್ಟಗಾಗುತ್ತಿಲ್ಲ? ಇದರಿಂದ ಆಯೇ ಷೆಯ ಮನಸ್ಸನ್ನು ಒಲಿಸಿಕೊಳ್ಳಲಿಕ್ಕೆ ನನಗೆ ಬಹಳ ಅನುಕೂಲವಾಗು ತಿತ್ತು. ಈ ಪ್ರಕಾರದ ವಿಚಾರಗಳ ತೆರೆಗಳೊಡನೆ ತೇಲುತ್ತ ಉಸ್ಮಾನನು ಅಂತಃಪುರದಲ್ಲಿ ಸಾಗಿರಲು, ಅಷ್ಟರಲ್ಲಿ-4 ಉಸ್ಮಾನ, ಬೇಟಾ ಉಸ್ಮಾನ” ಎಂಬ ಶಬ್ದ ಗಳು ಒಬ್ಬ ರಮಣಿಯ ಮಂಜುಲ ಕಂಠದಿಂದ ಹೊರಟು, ಉಸ್ಮಾನನ ಕರ್ಣರಂಧವನ್ನು ಪ್ರವೇಶಿಸಿದವು. ಆಗ ದನಿಯು ಕೇಳಬರು ವದಿಕ್ಕಿಗೆ ಉಸ್ಮಾನನು ಹೊರಳಿನೊಡಲು, ಒಂದು ಕೋಣೆಯಲ್ಲಿ ಪ್ರೌಢವ ಯಸ್ಸಿನ ಒಬ್ಬ ಸುಂದರಿಯು ಆತನ ಕಣ್ಣಿಗೆ ಬಿದ್ದಳು. ಆಕೆಯನ್ನು ನೋಡಿದ ಕೂಡಲೆ ಉಸ್ಮಾನನು ಅತ್ಯಂತವಾದ ಮಾತೃಭಕ್ತಿಯಿಂದ ಆಕೆಯ ಬಳಿಗೆ ಹೋದನು. ಆ ಸುಂದರಿಯು ಕಾತಲೂಖಾನನ ಬೇಗಮೆಯಾದ್ದರಿಂದ, ಉಸ್ಮಾನನಿಗೆ ಮಲತಾಯಿಯಾಗಿದ್ದಳು, ಕಾಶ್ಮೀರೀ ಬೇಗಮಳೆಂದು ಹಿಂದೆ ವಾಚಕರು ಆಕೆಯ ಗುರುತು ಮಾಡಿಕೊಂಡಿರುವರು. ಕಾಶ್ಮೀರಿ ಬೇಗ ಮೆಯು ಆಯೇಷೆಯ ಹಡೆದ ತಾಯಿಯಂತೆಯಿದದ್ದರಿಂದ, ಉಸ್ಮಾನನಿಗೆ ಆ ಬೇಗಮೆಯು ಬಹಳ ಆದರಣೀಯಳಾಗಿದ್ದಳು. ಆಕೆಯನ್ನು ನೋಡಿದ ಕೂಡಲೆ ಉಸ್ಮಾನನು ತಲೆಬಾಗಿ ವಂದಿಸುತ್ತಿರಲು, ಬೇಗಮೆಯು ಆತನನ್ನು ಕುರಿತು- ಉಸ್ಮಾನ, ನಾನು ನಿಮ್ಮ ಹಾದಿಯನ್ನೇ ನೋಡುತ್ತಿದ್ದನು. ನೀವು ಬಂದರೆ ನನ್ನ ಬಳಿಗೆ ನಿಮ್ಮನ್ನು ಕಳಿಸಿಕೊಡಬೇಕೆಂದು ನಿಮ್ಮ ಮಾಸಾ .ಹೇಬರ ಮುಂದೆಯೂ ನಾನು ಹೇಳಿಬಂದಿದ್ದೆನು! ! * ಉಸ್ಮಾನ (ವಿನಯದಿಂದ) -ನಾಸಾಹೇಬರ ಆಜ್ಞೆಯೇನಿರುವದು? ಬೇಗಮೆ-ಹೀಗೆ ನಿಂತನಿಂತಲ್ಲಿಯೆ ಕೇಳಿದರೆ ನಾನೇನು ಹೇಳಲಿ?