ಪುಟ:ತಿಲೋತ್ತಮೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ತಿಲೋತ್ತಮ. ನಿಮ್ಮ ಸಂಗಡ ಆಡುವ ಮಾತುಗಳು ಬಹಳ ಇರುತ್ತವೆ, ಅವನ್ನು ನೀವು ಕುಳಿತೇ ಕೇಳಬೇಕಾಗಿರುವದು, ನನ್ನ ಮಹಾಲಿಗೆ ನಡೆಯಿರಿ, ಅಲ್ಲಿ ಒಂದು ಗಳಿಗೆ ಕುಳಿತುಕೊಂಡರೆ, ನಾನು ಎಲ್ಲ ಸಂಗತಿಯನ್ನು ಹೇಳುವೆನು, ಯಾಕೆ? ನನ್ನ ಮಹಾಲಿಗೆ ಬರಲಿಕ್ಕೆ ನಿಮಗೆ ಸಂಕೋಚವಾಗುವದೇನು? ನಬಾಬ ಸಾಹೇಬರ ಅಂತರ್ಗೃಹದಲ್ಲಿ ಅವರ ಮಕ್ಕಳು-ಮರಿಗಳಿಗೆ ಓಡಾಡಲಿಕ್ಕೆ ಪ್ರತಿ ಬಂಧವಿರುವದಿಲ್ಲ, ನಾನಂತು ನಿಮ್ಮನ್ನು ಹೊಟ್ಟೆಯ ಮಗನಿಗಿಂತ ಹೆಚ್ಚೆಂದು ತಿಳಿಯುತ್ತೇನೆ; ಯಾಕೆ, ಬರುತ್ತೀರಷ್ಟೇ? ಉಸ್ಮಾನ( ವಿಚಾರಮಗ್ನನಾಗಿ )-ನೀವು ನನಗೆ ಮಲತಾಯಿಯಾಗಿ ದ್ದರೂ, ನಿಮ್ಮನ್ನು ನಾನು ಹಡೆದ ತಾಯಿಯೆಂತಲೇ ತಿಳಿದಿರುವೆನು, ಮೇ ಲಾಗಿ ನೀವು ಆಯೇಷೆಯ ತಾಯಿಯೆನಿಸಿಕೊಳ್ಳುತ್ತೀರಿ, ಆದ್ದರಿಂದ ನಿಮ್ಮ ಸನ್ಮಾನ ಮಾಡುವದು ನನ್ನ ಕರ್ತವ್ಯವಾಗಿರುತ್ತದೆ. ಮಹಾಲಿನಲ್ಲಿ ಬರು ವದು ಪದ್ಧತಿಗೆ ವಿರುದ್ಧವಾಗಿದ್ದರೂ, ತಮ್ಮ ಆಜ್ಞೆಯನ್ನು ನಾನು ಎಂದೂ ಉಲ್ಲಂಘಿಸಲಾರೆನು. ಬೇಗಮ-ಮಗುವೇ, ನಡೆ! ಇದರಲ್ಲಿ ಪದ್ಧತಿಯ ವಿರುದ್ದವೇನಿರು ವದು? ನಾನಾಗಿ ಕರೆಯುವದರಿಂದ ಪದ್ದತಿಗೆ ವಿರುದ್ಧ ವಾಗಿ ಆಚರಿಸಿದಂತಾ ಗುವದಿಲ್ಲ, ಮೇಲಾಗಿ ಕಾಯದೆಯನ್ನು ಮಾಡುವದು, ಮುರಿಯುವದು ಈಗ ನಿಮ್ಮ ಕೈಯೊಳಗಿರುತ್ತದೆ. ನ್ಯಾಯಾನ್ಯಾಯಗಳನ್ನು ವಿಚಾರಿಸುವ ಅಧಿಕಾರವು ಈಗ ನಿಮ್ಮ ಕಡೆಗೇ ಇರುವದರಿಂದ ನಿಮಗೆ ಅಂಜಿಕೆಯಾತರದು? - ಬೇಗಮಳ ಅಪ್ಪಣೆಯಂತೆ ಉಸ್ಮಾನನು ಆಕೆಯನ್ನು ಹಿಂಬಾಲಿಸಿ ಮಹಾಲಿಗೆ ನಡೆದನು. ಮಹಾಲಿನೊಳಗೆ ಹೋದಬಳಿಕ ಒಂದು ರತ್ನ ಗಂಬ ಆಯಮೆಲೆ ಸ್ವಲ್ಪ ಅಂತರದಿಂದ ಅವರಿಬ್ಬರು ಕುಳಿತುಕೊಂಡರು. ಆಗ ಬೇಗನಳು- ನಾನು ಆಯೆಷೆಯ ಸಂಬಂಧದಿಂದ ಹೇಳುವ ಮಾತುಗ ಇನ್ನು ನಿಮ್ಮ ಮುಂದೆ ಹೇಳುತ್ತೇನೆ, ” ಅನ್ನಲು, ಉಸ್ಮಾನನ ಎದೆಯು ಡವಡವ ಹಾರಹತ್ತಿತು. ಆಗ ಅವನು, ಉಸ್ಮಾನ-ಹೇಳುವದಾಗಬೇಕು. ಬೇಗನೆ-ಆಯೇಷೆಯ ಕಕ್ಕನ ಆಸ್ತಿಯು ಪಂಜಾಬದಲ್ಲಿದ್ದು, ಅದರ. ಮಾಲಕಳು ಆಯೇಷೆಯೇ ಇರುತ್ತಾಳೆಂಬಮಾತು ನಿಮಗೆ ಗೊತ್ತಿರುತ್ತದಷ್ಟೇ?