ಪುಟ:ತಿಲೋತ್ತಮೆ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧. ಕೃಷ್ಣ ಸರ್ಪವು. ಉಸ್ಮಾನ-ಹೌದು, ಬಹಳ ದಿವಸದಹಿಂದೆ ಕೇಳಿದಹಾಗೆ ನನ್ನ ನೆನಪಿ ಸಿನಲ್ಲಿರುತ್ತದೆ, ಬಹಳದಿವಸವಾದ್ದರಿಂದ ಸ್ಪಷ್ಟ ಸ್ಮರಣವಿರುವದಿಲ್ಲ. ಬೇಗಮ-ಹೌದು, ಬಹಳ ದಿವಸಗಳಾದದ್ದೇನೋ ನಿಜ. ಆಯೇ ಷೆಯ ಕಕ್ಕನು ಸತ್ತು ಹತ್ತು ವರ್ಷಗಳಾಗಿ ಹೋದವು. ನಿಮ್ಮ ಹಿರಿಯರು ಯೋಗ್ಯನುಷ್ಯರನ್ನು ಕಳಿಸಿ ಇಲ್ಲಿಯವರೆಗೆ ಆ ಆಸ್ತಿಯ ಯೋಗ್ಯ ವ್ಯವಸ್ಥೆಯ ನ್ನು ಮಾಡಿದರು. ಈಗ ಆಯೇ ಸೆಯ ವಯಸ್ಸಿಗೆ ಬಂದದ್ದರಿಂದ ತನ್ನ ಆಸ್ತಿ ಯನ್ನು ತನ್ನ ವಶಕ್ಕೆ ತಕ್ಕೊಳ್ಳ ದಿದ್ದರೆ ಅದನ್ನು ಸರಕಾರದವರು ತಮ್ಮ ವಶಕ್ಕೆ ತಕ್ಕೊಳ್ಳಬೇಕಾಗುತ್ತದೆಂದು ಹೆ೦ ಜಾಬದ ಅಧಿಕಾರಿಯಿಂದ ನಿಮ್ಮ ವಜೀರರ ಕಡೆಗೆ ಬರೆದು ಬಂದಿರುತ್ತದೆ. ಒಬ್ಬ ನಬಾಬರ ಜಿಂದಿಗೆಯನ್ನು ಆಯೇಷೆಯ ಜಿಂದಿಗೆಯ ಇರುವದು, ಅದರ ವ್ಯವಸ್ಥೆಯನ್ನು ಹೇಗೆ ಮಾಡಬೇಕು ? ನಿಮ್ಮ ಹೊರತು ಆ ಆಸ್ತಿಯ ವ್ಯವಸ್ಥೆ ಯನ್ನು ಯಾರೂ ಮಾಡುವಹಾಗಿಲ್ಲ. ಉಸ್ಮಾನ-ನೀವು ಹೇಗೆ ವ್ಯವಸ್ಥೆ ಮಾಡಬೇಕೆನ್ನುತ್ತೀರಿ? ಬೇಗನೆ-ನಾನು ವ್ಯವಸ್ಥೆ ಮಾಡುವದೇ ನು? ನೀವು ಮಾಡಿದ್ದೇ ನನಗೆ ಸಮ್ಮತ; ಆದರೆ ಆಯೇ ಷೆಯು ಪಂಜಾಬಕ್ಕೆ ಹೋಗಲು ಇಚ್ಛಿಸುವಳು. ಬಂಗಾಲಕ್ಕೆ ಹೋಗಿಬಂದಂದಿನಿಂದ ಆಕೆಯ ಪ್ರಕೃತಿಯು ಅಸ್ವಸ್ಥನಾಗಿದೆ ನಬಾಬಸಾಹೇಬರ ಮರಣದಿಂದಲೋ, ಬೇರೆಯಾವ ಕಾರಣದಿಂದಲೋ ತಿಳಿಯದು, ಆಕೆಯು ದಿನದಿನಕ್ಕೆ ಸೊರಗುತ್ತ ನಡೆದಿರುವಳು, ಆಕೆಗೆ ಊಟ ಉಡಿಗೆಗಳು ಬೇಡ, ವಸ್ತ್ರಾಭರಣಗಳು ಬೇಡ, ಆಕೆಯು ಯಾವಾಗಲೂ ಔದಾ ಸೀನ್ಯದಿಂದ ಕಾಲಕಳೆಯುವಳು. ಯಾವಾಗಲೂ ನೆಲದಮೇಲೆಯೇ ಕುಳಿ ತುಕೊಳ್ಳುವಳು. ಪಂಜಾಬಕ್ಕೆ ಹೊ ದಬಳಿಕ ನನಗೆ ವಿಶ್ರಾಂತಿಯು ದೊರೆ ಯಬಹುದೆಂದು ಆಕೆಯು ಅನ್ನುವಳು. ನನಗಾದರೂ ಹಾಗೆಯೇ ತೋರು ತದೆ. ಉಸ್ಮಾನ-ಬಹಳ ಅಸಮಾಧಾನದ ಸಂಗತಿಯು! ಆಯೇಷೆಯ ಆಸ್ತಿಯ ವ್ಯವಸ್ಥೆ ಯನ್ನು ಹೇಗಾದರೂ ಮಾಡಬಹುದು. ಆಯೇಷೆಯ ತಂದೆಯಮೇಲೆ ಅಕಬರಬಾದಶಹನ ಕೃಪೆಯಿತ್ತೆಂದು ನಾನು ಕೇಳಿದ್ದೇನೆ. ಬಾದಶಹನಿಗೆ ಆಯೇಷೆಯ ಪರಿಚಯವೂ ಇರುವದು; ಬಾದಶಹರ ದರ್ಬಾ ರದೊಳಗಿನ ದೊಡ್ಡ ದೊಡ್ಡ ಜನರ ಪರಿಚಯವೂ ಆಯೇಷೆಗೆ ಇರುತ್ತದೆ;