ಪುಟ:ತಿಲೋತ್ತಮೆ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ತಿಲೋತ್ತಮೆ. ಅಂದಬಳಿಕ ಆಕೆಯ ಆಸ್ತಿಯ ವ್ಯವಸ್ಥೆ ಯ ಚಿಂತೆಯು ನನಗಿಲ್ಲ. ಆದರೆ ಆಯೇಷೆಯು ಇಲ್ಲಿಂದ ಹೊರಟು ಹೋಗಿಬಿಟ್ಟರೆ, ಒಮ್ಮೆಲೆ ದೀ ಪತೆಗೆದ ಹಾಗಾದೀತಲ್ಲ. - ಬೇಗಮ -ಉಸ್ಮಾನ, ಆಯೇ ಸೆಯಮೇಲೆ ನಿಮ್ಮ ಪ್ರೇಮವು ವಿಶೇಷ ವಾಗಿರುವದು, ನಿಮ್ಮಿಬ್ಬರ ಲಗ್ನ ಮಾಡುವದಕ್ಕಾಗಿ ನಬಾಬಸಾಹೇಬರ ಮುಂದೆ ನಾನು ಎಷ್ಟೋ ಸಾರೆ ಪ್ರಸ್ತಾಪಿಸಿದ್ದೆನು. ಅವರ ಮನಸ್ಸಿಗೂ ಆ ಮಾತು ಬಂದಿತ್ತು; ಆದರೆ ದುರ್ದೈವದಿಂದ ಆ ಯೋಗವು ಒದಗಿಬರಲಿಲ್ಲ. ನಿಮ್ಮಿಬ್ಬರ ವಿವಾಹವಾಗಬೇಕೆಂದು ನಾನು ಇಚ್ಛಿಸುತ್ತೇನೆ: ಆದರೆ ಏನು ಮಾಡಬೇಕು? ಅತ್ತ ಆಯೇಷೆಯು ಹಗಲು-ರಾತ್ರಿ ದುಃಖಿಸುತ್ತಿರುವಳು; ಇತ್ತ ನೀವುಯಾವ ಆಲೋಚನೆಯಲ್ಲಿರುವಿರೋ ಏನೋ, ಸದಾಮಗ್ನರಾಗಿರು ಶ್ರೀರಿ. ಆಯೇಷೆಯು ಅರಗಳಿಗೆ ಅಗಲಿದರೆ ಸೈರಿಸದ ನೀವು ಇತ್ತಿತ್ತ ಅಂತರ್ಗೃಹಕ್ಕೆ ಬರುವದನ್ನೇ ಬಿಟ್ಟು ಬಿಟ್ಟಿರಿ; ಆಯೇಷೆಯ ಯೋಗಕ್ಷೇಮ ವನ್ನು ವಿಚಾರಿಸದಾದಿರಿ. ನಿಮ್ಮಿಬ್ಬರ ಈ ಅವಸ್ಥೆಯನ್ನು ನೋಡಿ ನನ್ನ ಎದೆಯೊಡೆದು ನೀರಾಗಿರುತ್ತದೆ. - ಉಸ್ಮಾನ-ಮಾಸಾಹೇಬ, ಇದರಲ್ಲಿ ನನ್ನ ಅಪರಾಧವೇನೂ ಇರು ವದಿಲ್ಲ. ಇಂದಿಗೂ ನಾನು ನನ್ನ ಪ್ರಾಣವನ್ನು ಆಯೇ ಷೆಯಮೇಲೆ ನಿವಾ ಇಸಿಒಗೆಯುವಹಾಗಿದ್ದೇನೆ, ಆದರೆ ಆಯೇಷೆಯ ಹೃದಯದಲ್ಲಿ ಭಯಂಕರ ವಾದ ಅಗ್ನಿ ಯು ಪ್ರಜ್ವಲಿಸುತ್ತಿರುವದು, ಅದರಲ್ಲಿ ನಾವಿಬ್ಬರು ಸುಟ್ಟುಹೋ ಗುವದಲ್ಲದೆ, ಅದರ ಸೆಕೆಯು ನಿಮಗೂ ಸ್ವಲ್ಪ ಬಡೆಯಬಹುದಾಗಿದೆ. ಆಯೇಷೆಯು ಈಗ ಎಲ್ಲಿರುವಳು? ಆಕೆಯ ಅಸ್ವಸ್ಥತೆಯನ್ನು ಕೇಳಿ ನನಗೆ ಬಹಳ ಅಸಮಾಧಾನವಾಗಿದೆ. ಆಕೆಯನ್ನು ಕಂಡಹೊರತು ನನಗೆ ಸಮಾಧಾ ನವಾಗುವಂತೆಯಿಲ್ಲ. ಆಕೆಯನ್ನು ಮಾತಾಡಿಸಿ ಆಕೆಯ ವಿಚಾರವನ್ನು ಕೇಳಿ ಕೊಂಡಮೇಲೆ, ಆಕೆಯ ಆಸ್ತಿಯ ವ್ಯವಸ್ಥೆಯನ್ನು ಕುರಿತು ನಿಮ್ಮೊಡನೆ ಪ್ರಸ್ತಾಪಿಸುವೆನು. ಈ ಮೇರೆಗೆ ನುಡಿದು, ಉಸ್ಮಾವನು ಬೇಗನಸಾಹೇಬರನ್ನು ಯಥೋ ಚಿತವಾಗಿ ಸನ್ಮಾನಿಸಿ, ಅವರ ಅನುಮತಿಯನ್ನು ಪಡೆದು ಆಯೇಷೆಯ ಬಳಿಗೆ ಹೊರಟನು. ಆತನು ಆಯೇಷೆಯನ್ನು ನಾಲ್ಕೂ ಕಡೆಗೆ ಹುಡುಕಿದನು;