ಪುಟ:ತಿಲೋತ್ತಮೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೩ ಕೃಷ್ಣ ಸರ್ಪವು. ಆದರೆ ಆಕೆಯಗೊತ್ತು ಹತ್ತಲಿಲ್ಲ. ಅಷ್ಟರಲ್ಲಿ ಒಬ್ಬ ದಾಸಿಯು ಆತನನ್ನು ಕಂಡು, ಪದ್ಧತಿಯಂತೆ ಪ್ರಣಾಮಮಾಡಿ, ಆಯೇಷೆಯು ಮಹಾಲಿನ ತೀರ ಹಿಂದುಗಡೆಯ ಕೋಣೆಯಲ್ಲಿ ಇರುವಳೆಂದು ಹೇಳಿದಳು. ಉಸಾನನು ದಾಸಿಯ ಬೆನ್ನ ಹತ್ತಿ ನಡದನು, ಆಯೇಷೆಯಿರುವ ಕೋಣೆಯನ್ನು ತೋರಿಸಿ ದಾಸಿಯು ಹಿಂದಿರುಗಿದಳು, ಖಾನನೂ ಆ ಕೋಣೆಯಲ್ಲಿ ಕಾಲಿ ಟ್ರನೋ ಇಲ್ಲವೋ, ಕೂಡಲೆಹಿಂದಿರುಗಿದನು, ಅಲ್ಲಿ ಆಯೇಷೆಯು ಒಬ್ಬಳೇ ಮಲಗಿದ್ದಳು; ಆಕೆಗೆಗಡದ್ದು ನಿದ್ದೆ ಹತ್ತಿತ್ತು; ಆಕೆಯಮೈಮೇಲಿನ ವಸ್ತ್ರಗಳು ಅಸ್ತವ್ಯಸ್ತವಾಗಿದ್ದವು, ಈ ಸ್ಥಿತಿಯಲ್ಲಿ ಆಕೆಯಬಳಿಗೆ ಹೋಗುವದು ಉಚಿತ ವಲ್ಲೆಂದು ನೀತಿವಂತನಾದ ಉಸ್ಮಾನನು ತಿಳಿದು ಹಿಂದಿರುಗಿದ್ದನು, ಸಂಗಮ ರವರಿಯಕಲ್ಲಿನ ನೆಲಗಟ್ಟನಮೇಲೆ, ಒಂದು ಮಖಮಲಿಯತಲೆಗಿಂಬು ಇಟ್ಟು ಕೊಂಡು ಆ ಭುವನ ಸುಂದರಿಯು ನೆಲದ ಮೇಲೆಯೇ ಮಲಗಿಕೊಂಡಿದ್ದಳು. ವಿಶ್ವದೊಳಗಿನ ಯಾವತ್ತು ಶೋಭೆಯೂ, ಸೃಷ್ಟಿಯೊಳಗಿನ ಎಲ್ಲ ರಮಣೀ ಯತೆಯೂ, ಸೃಷ್ಟಿ ದರ್ಶನದ ಯಾವತ್ತು ಕೌಶಲ್ಯವೂ ಆ ನಿದ್ರಿತಳಾದ ಸುಂದ ರಿಯ ದೇಹದಲ್ಲಿ ಒಟ್ಟಿಗೂಡಿದಂತೆ ಆಗಿದ್ದವು! ಉಸ್ಮಾನನು ಸೌಜನ್ಯದಿಂದ ಕೋಣೆಯ ಹೊರಗೆ ಬಂದು ನಿಂತಿದ್ದರೂ, ಆ ಸುಂದರಿಯ ಲೋಕೋತ್ತರ ಸೌಂದರ್ಯವನ್ನು ಕಣ್ಣು ತುಂಬ ನೋಡಿ ನೇತ್ರಗಳ ಸಾಫಲ್ಯವನ್ನು ಮಾಡಿ ಕೊಳ್ಳದೆಯಿರುವದು ಆತನಿಂದ ಆಗಲೊಲ್ಲದು. ಆತನು ಅಲ್ಲಿಂದ ತಿರುಗಿ ಹೋಗದಾದನು, ಆ ಸೌಂದರ್ಯಶಾಲಿನಿಯನ್ನು ಇನ್ನೊಮ್ಮೆ ಕಣ್ಣು ತುಂಬ ನೋಡಬೇಕೆಂದು ಆತನು ಆತುರ ಪಡಹತ್ತಿದನು. ತನ್ನ ಹೃದಯೇಶ್ವರಿಯ ದರ್ಶನವು ಇನ್ನೊಮ್ಮೆ ಆದ ಹೊರತು, ಆತನ ಕಾಲುಗಳು ಅಲ್ಲಿಂದ ಕಿತ್ತ ದಾದವು. ಆತನು ಹೊರಗಿನಿಂದಲೇ ಆಯೇಷೆಯ ಸೌಂದರ್ಯವನ್ನು ನೋಡ ಹತ್ತಿದನು, ಬರಬರುತ್ತ ಆತನು ಪರವಶನಾದನು. ಹೀಗೆ ಪರವಶನಾಗಿ ಉಸ್ಮಾನನು ಆಯೇಷೆಯನ್ನು ಎವೆಯಿಕ್ಕದೆ ನೋಡುತ್ತಿರುವಾಗ, ಆಕೆಯ ಎದೆಯಮೇಲೆ ಏನೋ ಕಠಗೆ ಉದ್ದಕ್ಕೆ ಬಿದ್ದ ಹಾಗೆ ಕಾಣಹತ್ತಿತು. ಅದೊಂದು ಹಗ್ಗ ವಿರಬಹುದೋ, ಅಥವಾ ಆ ಸುಂದ ರಿಯ ಕೃಷ್ಣ ಕೇಶಗಳದೊಂದು ಸೆಳಕು ಇರಬಹುದೋ ಎಂದು ಉಸ್ಮಾನನು ತರ್ಕಿಸಹತ್ತಿದನು, ಹಗ್ಗ ವೆನ್ನ ಬೇಕೆಂದರೆ, ಅದು ಬಹಳ ಕರಗೆ ಇತ್ತು;