ಪುಟ:ತಿಲೋತ್ತಮೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ತಿಲೋತ್ತಮೆ. ಕೇಶಗಳ ಸಳಕನ್ನ ಬೇಕೆಂದರೆ ಅದು ಬಹಳ ಉದ್ದವಾಗಿದ್ದು, ಆಕೆಯ ಶಿರ ಸ್ಸಿಗೆ ಅದರ ಸಂಬಂಧವಿದ್ದಿಲ್ಲ. ಅಂದಬಳಿಕ ಇದು ಏನಿರಬಹುದು? ಹೀಗೆಂದು ಖಾನನು ಆಲೋಚಿಸುತ್ತಿದ್ದನು. ಅಷ್ಟರಲ್ಲಿ ಆ ಕರಿಯ ಪದಾರ್ಥವು ಸರಿ ದಾಡಹತ್ತಲು, ಖಾನನು ಮೆಟ್ಟಿ ಬಿದ್ದನು. ಆತನ ಎದೆಗು ದಸಕ್ಕೆಂದಿತು! 'ಆಯೇಷೆಯ ಸೌಂದರ್ಯವನ್ನು ನೋಡುವ ಆತನ ಇಚ್ಛೆಯು ನಷ್ಟವಾ ಯಿತು. ಆತನು ಗಾಬರಿಯಾಗಿ, ಹತ್ತರ ಬರಲು ದಾಸಿಗೆ ಕೈಸನ್ನೆ ಮಾಡಿ ದನು. ದಾಸಿಯು ಹತ್ತರಬಂದಕೂಡಲೆ ಖಾನನು ಆಕೆಯನ್ನು ಕುರಿತು ನಬಾಬಕುವರಿಯು ಮಲಗಿದವದರಿಂದ, ನಾನು ಒಳಗೆ ಹೋಗಲಿಕ್ಕೆ ಬರು ವದಿಲ್ಲ; ಆದರೆ ನೀನು ಕಾಲ ಸಪ್ಪಳಾಗದಂತೆ ಮೆಲ್ಲಗೆ ಹೋಗಿ, ಆಕೆಯ ಎದೆಯಮೇಲೆ ಕರಗೆ ಕಾಣುವದು ಏನಿರುತ್ತದೆಂಬದನ್ನು ಬೇಗನೆ ನೋಡಿ ಕೊಂಡು ಬಾ, ಹು, ಹೋಗು, ಬೇಗನೆ ಹೋಗು. ಎಂದು ಒತ್ತರಿಸಲು, ದಾಸಿಯು ಕಾಲಸಪ್ಪಳವಾಡದೆ ಮೆಲ್ಲಗೆ ಒಳಗೆ ಹೋದಳು; ಆದರೆ ಒಳಗೆ ಹೋದವಳು ಕೂಡಲೆ ಹೊರಗೆ ಬಂದಾಗ ಅಂಜಿಕೆಯಿಂದ ಆಕೆಯ ಮೋರೆಯು ಹುಚ್ಚು ಇಟ್ಟಿತ್ತು. ಮೊದಮೊದಲು ಆಕೆಯ ಬಾಯಿಂದ ಅಕ್ಷರಗಳೇ ಹೊರಡಲೊಲ್ಲವು, ಉಸ್ಮಾನನು ಆಕೆಗೆ ಸ್ವಲ್ಪ ಧೈರ್ಯ ಹೇಳಿ ದಮೇಲೆ ಆಕೆಯು ಖಾನನನ್ನು ಕುರಿತು-ಸಂಕಟವು ಬಹು ಭಯಂಕ ರವಾದದ್ದಿರುವದು, ನಬಾಬ ಕುವರಿಯು ಸ್ವಲ್ಪ ಅಲ್ವಾಡಿದರೆ ಸಾಕು, ಆಕೆಯ ಪ್ರಾಣಾಂತವಾಗುವದು, ಆಕೆಯ ಎದೆಯಮೇಲೆ ದೊಡ್ಡ ಕೃಷ್ಣ ಸರ್ಪವು ಮಲಗಿರುವದು! ದಾಸಿಯ ಮುಖದಿಂದ ಹೊರಟ ಶಬ್ದ ಗಳು ಕಿವಿಗೆ ಬಿದ್ದ ಕೂಡಲೆ ಖಾನನು ಕ್ಷಣಮಾತ್ರವಿಚಾರಮಾಡಿದನು, ಕೂಡಲೆ ಆತನು ಪಶ್ಚಿಮ ದಿಕ್ಕಿಗೆ ಮೋರೆ ತಿರುಗಿಸಿ ಒಮ್ಮೆ ಅಲ್ಲಾನನ್ನು ಪ್ರಾರ್ಥಿಸಿದನು, ಆ ಮೇಲೆ ಆತನು ದಾಸಿಗೆ-ಗದ್ದಲಗಿದ್ದಲಮಾಡೀ” ಎಂದು ಹೇಳಿ, ಆತನು ಕೋಣೆ ಯೊಳಗೆ ಹೋಗಿ ನೋಡಿದನು, ಸಾಕ್ಷಾತ್ ಯಮಸ್ವರೂಪಿಯಾದ ಕೃಷ್ಣ ಸರ್ಪವು ಆಯೇಷೆಯ ಎದೆಯ ಮೇಲೆ ಬಿದ್ದುಕೊಂಡಿತ್ತು, ಸ್ವಲ್ಪ ಅಲ್ಲಾ ಡಿದರೆ ಸಾಕು, ಆ ಕೃಷ್ಣಸರ್ಪವು ಆಯೇಷೆಯನ್ನು ಕಚ್ಚದೆ ಬಿಡುವ ಹಾಗಿದ್ದಿಲ್ಲ; ಆದ ಧೀರನಾದ ಉಸ್ಮಾನನು ಹೆದರಲಿಲ್ಲ, ಆತನು ಮನ