ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 _t - * - - * * * * * * * * * * (ಾ ? ಕ್ಯವು ನಿನ್ನಲ್ಲಿ ಅತಿಶಯವಾಗಿರುವಂತೆ ತೋರುತ್ತದೆ. ನಿನ್ನ ದರುಶನ ಲಾಭವು ನನಗೆ ಉಂಟಾದುದಕ್ಕೆ ಏನು ಕಾರಣವೋ ನನಗೆ ತಿಳಿಯದು, ಆ ಕಾರಣವು ಯಾವುಗಾದರೂ ಆಗಿರಲಿ, ನಿನ್ನ ದರುಶನದಿಂದ ನಾನು ಬಹಳ ಸಂತುಷ್ಟನಾ ದೆನು, ನಿನ್ನ ತಂದೆಯನ್ನು ಹುಡುಕಿಕೊಂಡು, ಸೀನು ಸಂಚಾರ ಮಾಡುತ್ತಿದಿ ಯೆಂದು ನಾನು ಕೇಳಿರುವೆನು. ಅವನ ವಿಚಾರವನ್ನು ತಿಳಿದುಕೊಳ್ಳುವುದಕ್ಕೆ ನೀನು ಇಲ್ಲಿ ಬಂದಿರುವ ಪಕ್ಷದಲ್ಲಿ, ಅವನ ಸಮಾತಾರವನ್ನು ನಿನಗೆ ಹೇಳಿ ಸಂತೋಷ ಪಡಿಸುವ ಭಾಗ್ಯವು ನನಗೆ ದೇವರು ದಯಪಾಲಿಸಿ ಇಲ್ಲ, ಅವನಲ್ಲಿ ಹೇಗೋ ಹಾಗೆ ನನ್ನಲ್ಲಿಯ ದೇವರು ಅಪ್ರಸನ್ನ ನಾಗಿ ಇದಾನೆ. ಅವನು ದೇಶಭ್ರಷ್ಟನಾಗಿ ಅಲೆಯು ತಿರುವನು, ನಾನು ನನ್ನ ದೇಶದಲ್ಲಿದ್ದಾಗ್ಯೂ , ದೇವರ ಪ್ರೀತಿಗೆ ನಾನು ಪಾತ್ರನಾ ಗಿರುವುದಿಲ್ಲ.' ಈ ರೀತಿಯಲ್ಲಿ ಟೆಲಿಮಾಕಸ್ಸನಿಗೆ ಹೇಳುತ್ತಿರುವಾಗಲೇ ಇಡುಮಿನಿಯ ಸೃನ ದೃಷ್ಟಿಯು ಮೆಂಟರಿನ ಮೇಲೆ ಬಿದ್ದಿತು. ಈತನನ್ನು ಎಲ್ಲೋ ನೋಡಿ ದಂತೆ ಒಂದು ಭಾವನೆಯು ಇವನಿಗೆ ಉಂಟಾಯಿತು. ಇ೦ತಹ ಕಡೆ ನೋಡಿದೆ ನಂದು ಇವನ ಸ್ಮತಿಸಧಕ್ಕೆ ಬರಲಿಲ್ಲ, ಯಲಿಸಸ್ಸನು ದೇವರ ಪ್ರಸನ್ನ ತೆಗೆ ಪಾತ್ರನಾಗಲ್ಲ ವೆಂದು ಹೇಳಿದ ಕೂಡಲೆ, ಟೆಲಿಮಾಕಸ್ಸನ ಕಣ್ಣುಗಳು ಶೋಕರಸ ದಿಂದ ತುಂಬಿ ತುಳುಕುವುದಕ್ಕೆ ಉಪಕ್ರಮವಾಯಿತು, ಟೆಲಿಮಾಕಸ್ಸನು ಇಡುಮಾ ನಿಯಸ್ಸನನ್ನು ನೋಡಿ, ನಮ್ಮ ತಂದೆಗೂ, ನಿನಗೂ ಜಗದೀಶ್ವರನ ಪ್ರಸನ್ನ ತೆಯು ಇಲ್ಲ ವೆಂದು ನೀನು ಹೇಳಿದ ಕೂಡಲೇ, ಅನಿರ್ವಚನೀಯವಾದ ಏನೋ ಒಂದು ವಿಧವಾದ ವ್ಯಸನವು ನನ್ನ ಮನಸ್ಸಿನಲ್ಲಿ ಹುಟ್ಟಿತು. ಈ ವ್ಯಸನವು ಕಣ್ಣೀರುಗಳ ರೂಪವಾಗಿ ಉಕ್ಕಿ ಸುರಿಯುವುದಕ್ಕೆ ಉಪಕ್ರಮವಾಗಿದೆ. ಇದನ್ನು ಆಚ್ಛಾದಿಸಿಕೊಳ್ಳುವುದಕ್ಕೆ ನನ್ನಿಂದಾಗಲಿಲ್ಲ. ಇದು ಬಾಲ್ಯಾವಸ್ಥೆಯ ಧರ್ಮ, ಅದು ಹೇಗಾದರೂ ಇರಲಿ. ನಿನ್ನನ್ನು ನೋಡಿದ ಕೂಡಲೇ ನನ್ನ ತಂದೆಯನ್ನು ನೋಡಿದಂತೆ ಸಂತೋಷ ವಾಯಿತು. ನೀನು ನನ್ನಲ್ಲಿ ತೋರಿಸಿದ ಪ್ರೀತಿಗೆ ನಾನು ಅತ್ಯಂತ ಕೃತಜ್ಞನಾಗಿ ಇದೇನೆ. ಯೂಲಿಸಸ್ಸನ ವಿಯೋಗದಿಂದ ನೀನು ಪಡುತ್ತಲಿರುವ ವ್ಯಸನವು ನನ್ನ ವ್ಯಸನವನ್ನು ಹೆಚ್ಚಿಸಿರುವುದು, ಭೂಮಿಯ ಮೇಲೂ, ಸಮುದ್ರದ ಮೇಲೂ ಅನೇಕ ದೇಶಗಳಲ್ಲಿ ಅವನನ್ನು ಹುಡುಕಿದೆನು. ಅವನ ಗತಿಯೇನಾಗಿರುವುದೋ ಗೊತ್ತಾಗಲಿಲ್ಲ. ಅವನು ಬದುಕಿರುವನೋ ಅಥವಾ ಲೋಕಾಂತರವನ್ನು ಹೊಂದಿ