ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ರುವನೋ ಅದು ಗೊತ್ತಾಗಲಿಲ್ಲ. ಇಥಾಕಾ ಪಟ್ಟಣದಲ್ಲಿ ನಮ್ಮ ಮಾತೃಶ್ರೀಯ ವರು ಶತ್ರುಗಳ ಮಧ್ಯದಲ್ಲಿ ಸಿಲುಕಿ ಪಾತಿವ್ರತ್ಯಕ್ಕೆ ಭಂಗ ಬರುವುದಾದರೆ ಮೊದಲು ದೇಹತ್ಯಾಗ ಮಾಡುವುದರಲ್ಲಿ ಬಾತುರರಾಗಿರುತ್ತಾರೆ, ಅವರ ಗತಿಯೇನಾಗು ವುದೋ ತಿಳಿಯದು, ಮಾತೃ ವಿಯೋಗವಾಗುವ ಸಂಭವವು ಬರುವುದೋ ಏನೋ! ಅದೂ ಗೊತ್ತಾಗುವುದಿಲ್ಲ. ಇಥಾಕಾ ದ್ವೀಪಕ್ಕೆ ಹೋಗಬೇಕೆಂದು ನಾನು ಪ್ರಯಾಣ ಮಾಡಿದೆನು. ಹಡಗು ನಡೆಸತಕ್ಕ ವರೂ ಕೂಡ ಇಥಾಕಾ ದ್ವೀಪಕ್ಕೆ ಹೋಗಬೇಕೆಂದು ಸಂಕಲ್ಪ ಮಾಡಿದರು, ಮನುಷ್ಯರು ಒಂದು ವಿಧವಾಗಿ ಯೋಚಿಸಿ ದರೆ, ದೇವರು ಇನ್ನೊಂದು ವಿಧವಾಗಿ ಯೋಚಿಸುವನೆಂದು ಹೇಳುವುದು ಈಗ ನಿಜ ವಾಯಿತು. ನಮ್ಮ ಪಾಲಿಗೆ ಕ್ರೀಟ್‌ ದ್ವೀಪವೇ ಇಥಾಕಾ ದ್ವೀಪವಾಯಿತು. ಇದುವಿಾನಿಯಸ್ಸನೇ ಯಲಿಸಸ್ಸ ನಾಗಿ ಪರಿಣಮಿಸಿದನು. ನೀನು ರಾಜ್ಯಾಧಿಪತ್ಯ ವನ್ನು ಕಳೆದುಕೊಂಡು, ಈ ಹೊಸ ಸಂಸ್ಥಾನವನ್ನು ಪ್ರತಿಷ್ಠಿಸಿ, ಇಲ್ಲಿ ರಾಜ್ಯಭಾರ ಮಾಡುತ್ತಿರುವಿಯೆಂದು ನಾನು ಕೇಳಿ ಇದ್ದೆನು, ನಿನ್ನ ದೇಶಕ್ಕೆ ಬಂದು ನಿನ್ನ ಸಂದ ರುಶನವನ್ನು ಮಾಡಿ ಕೊಳ್ಳಬೇಕೆಂಬ ಸಂಕಲ್ಪವು ನನಗೆ ಉ೦ಟಾಗಿ ಇತ್ತು, ಈ ಸಂಕಲ್ಪವು ಪೂರೈಸಲೆಂದು ನಮ್ಮ ಪ್ರಯತ್ನ ಎಲ್ಲದೆ, ನಾವು ಇಲ್ಲಿಗೆ ಬರುವಂತೆ ದೇವರು ಅನುಗ್ರಹಿಸಿರುವನು. ಇದಕ್ಕೆ ನಾನು ವ್ಯ ಸನಪಡುವುದಿಲ್ಲ. ಇಥಾಕಾ ದ್ವೀಪದಲ್ಲಿ ನನಗಿರುವ ಅಭಿಮಾನಕ್ಕಿ೦ತಲೂ ಹೆಸೀರಿಯಾದಲ್ಲಿ ನನಗೆ ಕಡಮೆಯಾದ ಅಭಿಮಾನವು ಇರುವದಿಲ್ಲ, ಯಲಿಸಸ್ಸನಲ್ಲಿರುವ ಭಕ್ತಿಗಿಂತ, ನನಗೆ ನಿನ್ನಲ್ಲಿ ಕಡೆ ಮೆಯಾದ ಭಕ್ತಿಯು ಇರುವುದಿಲ್ಲ, ಯೂಲಿಸಸ್ಸನ ಸಂದರುಶನ ವಿಷಯದಲ್ಲಿ ನಾನು ಭಗ್ನ ಮನೋರಥನಾಗುವಂತೆ ಈಶ್ವರನು ಮಾಡಿದಾಗ್ಯೂ, ನಿನ್ನ ಸಂದರುಶ ನವು ಲಭ್ಯವಾಗುವಂತೆ ಆತನು ಮಾಡಿದ್ದ ಕ್ಕೋಸ್ಕರ ನಾನು ತುಂಬಾ ಕೃತಜ್ಞನಾಗಿ ರುತ್ತೇನೆ. ” ಈ ರೀತಿಯಲ್ಲಿ ಟೆಲಿಮಾಕಸ್ಸನು ಇಡುವಿಾನಿಯಸ್ಸನಿಗೆ ಹೇಳಿದನು. ಆಗ ಇಡುವಿಾನಿಯಸ್ಸನು ಟೆಲಿಮಾಕಸ್ಸನನ್ನು ಕುರಿತು ಹೇಳಿದ್ದೇನಂದರೆ:- ನನ್ನ ಭಾಗ್ಯ ಪರಿಪಾಕದಿಂದ ನಿನ್ನ ದರುಶನಲಾಭವು ನನಗೆ ಉಂಟಾಗುವಂತೆ ದೇವರು ಅನುಗ್ರಹಿಸಿದನು. ಇದು ನನಗೆ ಬಹಳ ಸಂತೋಷವನ್ನುಂಟುಮಾಡಿರು ವುದು, ನಿನ್ನ ಜೊತೆಯಲ್ಲಿ ಬಂದಿರತಕ್ಕ ಈ ವೃದ್ದನು ಯಾರೋ ನನಗೆ ತಿಳಿಯದು. ಈತನನ್ನು ನಾನು ಎಲ್ಲೋ ನೋಡಿದಂತೆ ತೋರುವುದು, ಆದರೆ, ಎಲ್ಲಿ ನೋಡಿದೆನೋ