ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

101 ಜ್ಞಾಪಕಕ್ಕೆ ಬರುವುದಿಲ್ಲ, ಇವನನ್ನು ನೋಡಿದರೆ, ನನಗೆ ಏನೋ ಒಂದು ವಿಧವಾದ ಭಕ್ತಿಯು ಹುಟ್ಟುತ್ತದೆ. ಇವನು ದೇವತಾಂಶಸಂಭೂತನೆಂದು ತೋರುತ್ತದೆ ಇವನು ಯಾರು ? ನಿನ್ನ ಕ್ಷೇಮಾರ್ಧವಾಗಿ ಜಗದೀಶ್ವರನಿಂದ ಕಳುಹಿಸಲ್ಪಟ್ಟ ದೇವದೂತನೋ ಅಥವಾ ದೇವರೋ ಆಗಿರಬಹುದೆಂದು ನನಗೆ ತೋರುತ್ತದೆ ” ಎಂದು ಹೇಳಿ, ಮೆಂಟರಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿದನು. ಅಷ್ಟರಲ್ಲಿಯೇ ರಾಕ ಸೃನು ಹೇಳಿದ್ದೇನಂದರೆ:- - “ ಈತನು ನನ್ನ ತಂದೆಯ ಪರಮಮಿತ್ರನಾದ ಮೆ೦ಟರನು, ಬಾಲ ದಲ್ಲಿಯೇ ನನ್ನ ತಂದೆಯು ನನ್ನನ್ನು ಇವನಿಗೆ ಒಪ್ಪಿಸಿದನು. ಇವನು ನನಗೆ ವಿದ್ಯಾಗುರುವಾ ಗಿಯ, ತಂದೆಯಾಗಿಯ, ನನ್ನ ಭಾಗದ ದೇವರಾಗಿಯ ಇರುವನು ಹೆಚ್ಚಾಗಿ ಹೇಳುವುದಕ್ಕೆ ನಾನು ಸಮರ್ಥನಲ್ಲ ” ಈ ರೀತಿಯಲ್ಲಿ ಟಿವ .ಕನು ಹೇಳಿದ ಕೂಡಲೇ ಇಡುಮಾನಿಯಸ್ಥನಿಗೆ ಪೂರ್ವ ಪರಿಚಯವು ಜ್ಞಾಪಕಕ್ಕೆ ಬಂದಿತು. ಮೆಂಟರನನ್ನು ಕುರಿತು ಇಡುಮಿನಿಯಸ್ಸನು ಹೇಳಿದ್ದೇನಂದರೆ: .. ಬಹುಕಾಲಕ್ಕೆ ಮುಂಚೆ ಕ್ರೀಟ್ ದೇಶದಲ್ಲಿ ನಿನ್ನನ್ನು ನೋಡಿದ್ದದ್ದು ಈಗ ನನ್ನ ಸ್ಕೃತಿಪಥಕ್ಕೆ ಬಂದಿತು, ಅಲ್ಲಿ ನನಗೆ ನೀನು ಅನೇಕ ಹಿತೋಪದೇಶಗಳನ್ನು ಮಾಡಿದೆ. ಅದರ ಪ್ರಯೋಜನವನ್ನು ನಾನು ಹೊಂದಲಿಲ್ಲ. ಆಗ ನಾನು ಉತ್ಕಟವಾದ ಪ್ರಾಯ ದಲ್ಲಿದ್ದೆನು. ಅಜಿತೇಂದ್ರಿಯನಾಗಿ, ಯುಕ್ತಾಯುಕ್ತ ವಿಹೀನನಾಗಿದ್ದೆನು, ನಿನ್ನ ಹಿತೋಪದೇಶದಿಂದ ಸನ್ಮಾರ್ಗಪ್ರವರ್ತಕನಾಗುವುದು ನನಗೆ ಅಸಾಧ್ಯವಾಯಿತು. ಕಷ್ಟ ಪರಂಪರೆಗಳಿಗೆ ಗುರಿಯಾಗಿ, ಬಹಳ ಕ್ಷೇಶಪಟ್ಟು, ಅನಂತರ ಸನ್ಮಾರ್ಗಪ್ರವರ್ತ ಕನಾಗಬೇಕೆಂದು ದೇವರ ನಿಯಾಮಕವು ಇತ್ತು, ನಿನ್ನನ್ನು ನೋಡಿ ಅನೇಕ ವರ್ಷ ಗಳಾದಾಗ್ಯೂ, ನೀನು ಒಂದೇ ವಿಧವಾಗಿರುತ್ತೀಯೆ. ನಿನ್ನ ದೇಹಶಕ್ತಿಯ, ಬುದ್ಧಿಶಕ್ತಿಯ, ಆಕಾರವೂ ಇವುಗಳಲ್ಲಾವುದೂ ಕಡಮೆಯಾಗಿರುವಂತೆ ತೋರು ವುದಿಲ್ಲ, ಕೆಲವು ಬಿಳಿಯ ಕೂದಲುಗಳು ಮಾತ್ರ ಕಾಣಬರುವುವು. ಇನ ವ ವ್ಯತ್ಯಾಸವೂ ನಿನ್ನಲ್ಲಿ ತೋರುವುದಿಲ್ಲ.” ಈ ರೀತಿಯಲ್ಲಿ ಇಡುವಿಾನಿಯಸ್ಸನು ಹೇಳಲು ಮೆಂಟರು ಅವನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ; ಟ್ರಾಯ್ ದೇಶದ ಅಭಿಷೇಣಕ್ಕೆ ಹೊರಡುವಾಗೈ, ನೀನು ಯಾವ ರೀತಿಯಲ್ಲಿ ದೈಯೋ ಸ್ವಲ್ಪ ಹೆಚ್ಚು ಕಡಮೆಯಾಗಿ ನೀನೂ ಅದೇ ರೀತಿಯಲ್ಲಿರುತ್ತೀಯೆ. ಈಗ